ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ಪಕ್ಷಕ್ಕಾಗಿ ದುಡಿಯುವೆ: ಶಕುಂತಲಾ ಶೆಟ್ಟಿ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಇನ್ನು ಮುಂದೆ ನಾನು ಯಾವುದೇ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿಕೆ ನೀಡಿದ್ದಾರೆ.

 ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸಂಜೀವ ಮಠಂದೂರು ಅವರ ಎದುರು ಭಾರೀ ಮತಗಳ ಅಂತರದಿಂದ ಸೋಲು ಅನುಭವಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಪುತ್ತೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಾನು ಇದುವರೆಗೆ ನಾಲ್ಕು ಬಾರಿ ಸೋತಿದ್ದೇನೆ. ಆದ್ದರಿಂದ ಈ ಬಾರಿಯ ಸೋಲಿನಿಂದ ತಾನು ಕಂಗೆಟ್ಟಿಲ್ಲ ಎಂದು ಹೇಳಿದರು.

 ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಚುನಾವಣಾ ಸಂದರ್ಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ್ದೆ. ಮುಂದೆಯೂ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು. ಸದ್ಯದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದೆಂದು ಹೇಳಿದ ಅವರು ಮುಂದಿನ ಬಾರಿ ವಿಧಾನಸಭೆ ಚುನಾವಣೆಗೆ ಹೊಸ ಸಮರ್ಥ ಅಭ್ಯರ್ಥಿಯನ್ನು ಹುಡುಕಿ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.


ಇಂದು ಹೆಚ್ಚು ಓದಿದ ಸುದ್ದಿಗಳು
►►ಕರ್ನಾಟಕ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂಗೆ ಜೇಠ್ಮಲಾನಿ: http://bit.ly/2IrRncx
►►ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ. ಎಸ್. ಯಡಿಯೂರಪ್ಪ
: http://bit.ly/2INsbk9
►►ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ. ಎಸ್. ಯಡಿಯೂರಪ್ಪ http://bit.ly/2INsbk9
►►ನಾನು ಸನ್ಯಾಸಿಯಲ್ಲ, ಬಿಜೆಪಿಗೆ ತಿರುಗೇಟು ನೀಡಲು ಗೊತ್ತಿದೆ http://bit.ly/2k0BmQ7
►►ಕಾಂಗ್ರೆಸ್ ವಲಯದಲ್ಲಿ ಆತಂಕ: ಶಾಸಕಾಂಗ ಸಭೆಯಲ್ಲಿ 13 ಕೈ ಶಾಸಕರು ಗೈರು http://bit.ly/2rJYtCf
►►ನಮ್ಮನ್ನೆಲ್ಲ ಕಟ್ಟಿ ಹಾಕಿ ಚುನಾವಣೆ ನಡೆಸಿದಂತಿತ್ತು. ಇವಿಎಂ ಮೇಲೆ ಸಂಶಯವಿದೆ: ರಮಾನಾಥ ರೈ
  http://bit.ly/2KrumXK
►►ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಸುಲಭದಲ್ಲಿ ಬಿಡಲಾರೆ: ಮೋದಿ ಸುಳಿವು: http://bit.ly/2IGDBpN
►►ಮಂಗಳೂರು: ವಿಜಯೋತ್ಸವದ ವೇಳೆ ಪರಸ್ಪರ ಕಲ್ಲು ತೂರಾಟ. ಓರ್ವ ಆಸ್ಪತ್ರೆಗೆ ದಾಖಲು http://bit.ly/2jXKyES
►►ಕರ್ನಾಟಕ ಅತಂತ್ರ: ಮುಂದಿನ 24 ಗಂಟೆಗಳಲ್ಲಿ ಏನೆಲ್ಲ ನಡೆಯಬಹುದು? ಇಲ್ಲಿದೆ ಒಂದು ನೋಟ http://bit.ly/2GmJpzD
►►ಅತಂತ್ರ ವಿಧಾನಸಭೆ. ಸರ್ಕಾರ ರಚನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹಕ್ಕು ಮಂಡನೆ http://bit.ly/2GmELBI
►►ಜೆಡಿಎಸ್ಗೆ ಬೇಷರತ್ ಬೆಂಬಲ ಸಾರಿದ ಕಾಂಗ್ರೆಸ್ ಜೆಡಿಎಸ್ ಗ್ರೀನ್ ಸಿಗ್ನಲ್ಗೆ ಕ್ಷಣಗಣನೆ  http://bit.ly/2rKBoiH
►►ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಆಯ್ಕೆ. ಮಂಗಳೂರಿನಿಂದ ಯು. ಟಿ. ಖಾದರ್ ಗೆಲುವು
http://bit.ly/2Iok2iC

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ