ನಮ್ಮವರನ್ನು ಮುಟ್ಟಿದರೆ ಬಿಜೆಪಿಯ ದುಪ್ಪಟ್ಟು ಶಾಸಕರನ್ನು ಸೆಳೆಯುತ್ತೇವೆ: ಕುಮಾರಸ್ವಾಮಿ ಎಚ್ಚರಿಕೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನನ್ನ ತಂದೆಯವರ ‘ಸೆಕ್ಯುಲರ್’ ಐಡೆಂಟಿಟಿಗೆ ಧಕ್ಕೆ ತರಬಾರದು. ಅವರ ಕೊನೆಗಾಲದಲ್ಲಿ ಅವರಿಗೆ ನೋವು ಕೊಡಬಾರದು ಹಾಗೂ ಈ ದೇಶದಲ್ಲಿರುವ ಬಿರುಕನ್ನು ಮುಚ್ಚಲು ಇಂದು ಬಿಜೆಪಿಯ ಆಫರ್ ಕೈಬಿಟ್ಟು ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಒಪ್ಪಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ವಯಕ್ತಿಕವಾಗಿ ಈ ಸೆಕ್ಯುಲರ್ ಕಮ್ಯುನಲ್ ಇತ್ಯಾದಿಗಳಲ್ಲಿ ನನಗೆ ಇಂದು ಕೂಡ ನಂಬಿಕೆ ಇಲ್ಲ. ಯಾಕೆಂದರೆ ಈ ದೇಶದಲ್ಲಿ ಯಾರ್ಯಾರು ಯಾವ ಯಾವ ಸಂದರ್ಭಗಳಲ್ಲಿ ಸೆಕ್ಯುಲರ್, ಕಮ್ಯುನಲ್ಗಳಾಗುತ್ತಾರೆ ಎಂಬುದನ್ನು ನೋಡಿದ್ದೇನೆ. ಆದರೆ ಹಿಂದೊಮ್ಮೆ ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗಿದ್ದರಿಂದ ನನ್ನ ತಂದೆಯವರ ಸೆಕ್ಯುಲರ್ ಇಮೇಜ್ಗೆ ನನ್ನಿಂದ ತಗುಲಿದ ಕಪ್ಪುಚುಕ್ಕೆ ತೊಳೆಯಲು ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿದ್ದೂ ನಮಗೆ ನೀಡಿದ ಬೆಂಬಲವನ್ನೂ ಗೌರವಿಸಿ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇಲ್ಲಿ ಕೆಲವರು ಜೆಡಿಎಸ್ ಪಕ್ಷವನ್ನು ಮುಗಿಸುತ್ತೇವೆ ಎಂದು ಹೊರಟಿದ್ದರಿಂದಲೇ ಇಂದು ರಾಜ್ಯದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಮುಖ್ಯಮಂತ್ರಿಯಾಗುವುದು ನನಗೂ ಆನಂದದ ವಿಷಯವಲ್ಲ. ಈ ಫಲಿತಾಂಶ ನಮಗೆ ಆನಂದ ಉಂಟುಮಾಡಿಲ್ಲ. ಆದರೆ ಇಂದು ನಮ್ಮ ಶಾಸಕರ ಆಸೆಯಂತೆ ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸುವ ನಿರ್ಧಾರ ಮಾಡಿದ್ದೇನೆ. ಆದರೆ ಇದರಲ್ಲಿ ಜೆಡಿಎಸ್ ಹಪಾಹಪಿ ಏನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದೇವೇಗೌಡರು ಪ್ರಧಾನಿ ಪದವಿಗೆ ಏರಿದ ಸಂದರ್ಭದಲ್ಲಿ ಆದ ಬೆಳವಣಿಗೆಗಳ ಸಂದರ್ಭ ಬಿಜೆಪಿಯವರು ನೀಡಿದ ಬೆಂಬಲವನ್ನು ತನ್ನ ಜಾತ್ಯತೀತ ಮೌಲ್ಯಗಳಿಗಾಗಿ ತಿರಸ್ಕರಿಸಿ ಬಂದವರು. ಅವರ ಮೌಲ್ಯಗಳಿಗೆ ಚ್ಯುತಿ ತರುವ ಕೆಲಸ ಈ ಬಾರಿ ನನ್ನಿಂದ ಆಗಕೂಡದು. ಹಿಂದೆ ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾದಾಗ ನಮ್ಮ ತಂದೆ ಎಷ್ಟು ನೋವು ಅನುಭವಿಸಿದರು, ಅವರ ಆರೋಗ್ಯ ಎಷ್ಟು ಹದಗೆಟ್ಟಿತ್ತು ಎಂಬುದನ್ನು ನಾನು ಇಂದೂ ಮರೆತಿಲ್ಲ. ಅಂದು ಆದ ತಪ್ಪನ್ನು ಎಂದೂ ಮರೆಯುವುದಿಲ್ಲ. ದೇವೇಗೌಡರ ಮನಸ್ಸಿಗೆ ನೋವು ಮಾಡಬಾರದು. ಈ ದೇಶದಲ್ಲಿ ಇಂದು ನಡೆಯುತ್ತಿರುವ ಕೋಮುವಾದದ ರಾಜಕಾರಣವನ್ನು ತಡೆಯಬೇಕು, ಕೊನೆಗಾಣಿಸಬೇಕು ಎಂಬ ಏಕೈಕ ಉದ್ದೇಶದಿಂದ ಈಗ ಕಾಂಗ್ರೆಸ್ ಪಕ್ಷ ತಾವಾಗಿಯೇ ನೀಡಿದ ಬೆಂಬಲವನ್ನು ಒಪ್ಪಿ ಮುಖ್ಯಮಂತ್ರಿಯಾಗಲು ಒಪ್ಪಿದ್ದೇನೆ ಎಂದು ಕುಮಾರಸ್ವಾಮಿಯವರು ನುಡಿದರು.

ಬಿಜೆಪಿಯವರೊಡನೆ ಸೇರಿ ಮುಖ್ಯಮಂತ್ರಿಯಾಗುವುದು ಸುಲಭ. ಆದರೆ ಅದು ನನಗೆ ಬೇಕಾಗಿಲ್ಲ. ನಮ್ಮ ತಂದೆ ದೇವೇಗೌಡರಿಗೂ ಬೇಕಾಗಿಲ್ಲ. ಆದ್ದರಿಂದ ನಾನು ಕೇವಲ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿದೆ ಎಂದು ಯಾರೂ ತಿಳಿಯಬೇಡಿ ಎಂದು ಕುಮಾರಸ್ವಾಮಿ ನುಡಿದರು.
ಇದೇ ಸಂದರ್ಭ ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ನೂರು ಕೋಟಿ, ಕ್ಯಾಬಿನೆಟ್ ಹುದ್ದೆ ಆಮಿಷವಿದೆ ಎಂಬುದನ್ನು ಬಹಿರಂಗಪಡಿಸಿದ ಕುಮಾರಸ್ವಾಮಿಯವರು ನಮ್ಮ ಪಕ್ಷದ ಶಾಸಕರನ್ನು ಮುಟ್ಟಿದರೆ, ಕುದುರೆ ವ್ಯಾಪಾರಕ್ಕೆ ಮುಂದಾದರೆ ನಾನು ಸುಮ್ಮನಿರುವುದಿಲ್ಲ. ನಮ್ಮ ಶಾಸಕರನ್ನು ಅವರು ಮುಟ್ಟಿದರೆ ಅದರ ದುಪ್ಪಟ್ಟು ಬಿಜೆಪಿ ಶಾಸಕರನ್ನು ಜೆಡಿಎಸ್ಗೆ ಹೇಗೆ ತರಬೇಕು ಎಂಬುದು ನನಗೆ ಗೊತ್ತಿದೆ ಎಂದು ಬಿಜೆಪಿಯ ಆಪರೇಶನ್ ಕಮಲ ಕಾರ್ಯಾಚರಣೆ ವಿರುದ್ದ ಎಚ್ಚರಿಕೆ ನೀಡಿದರು.

ಒಂದೆಡೆ ಪ್ರಧಾನಿ ಮೋದಿಯವರು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಡಿಮಾನಿಟೈಶನ್ ಮಾತಾಡುತ್ತಾರೆ. ಇನ್ನೊಂದೆಡೆ ಬಿಜೆಪಿಯವರು ಕೋಟಿಗಟ್ಟಲೆ ಹಣದ ಆಮಿಷವನ್ನು ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ಒಡ್ಡಿ ಕುದುರೆ ವ್ಯಾಪಾರ ಈ ಸಲವೂ ಮಾಡಬಹುದು ಎಂದುಕೊಂಡಿದ್ದರೆ ಅವರಿಗೆ ಮರೆಯಲಾರದ ಪಾಠ ಈ ಸಲ ಕಲಿಸುತ್ತೇವೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು. ಶಾಸಕರನ್ನು ಖರೀದಿಸಲು ಬಿಜೆಪಿಯವರು ಕೊಡುವ ಹಣ ಕಪ್ಪು ಹಣವೊ? ಏನದು? ಎಂದವರು ಪ್ರಶ್ನಿಸಿದ್ದಾರೆ.

ಈ ದೇಶದ ಇತಿಹಾಸದಲ್ಲೇ ಮೊದಲ್ ಬಾರಿ ವಿರೋಧ ಪಕ್ಷಗಳನ್ನು ಮಣಿಸುವ ಸಲುವಾಗಿ ಐಟಿ ಇಲಾಖೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡ ಕುಖ್ಯಾತಿ ಬಿಜೆಪಿಯವರದು. ಇದಕ್ಕೆಲ್ಲ ಅಂತ್ಯ ಹಾಡಲು ಬಿಜೆಪಿಯ ಅಶ್ವಮೇಧ ಕುದುರೆಯನ್ನು ತಡೆಗಟ್ಟುವ ಅಸಲಿ ತಾಕತ್ತು ಇರುವುದು ಜೆಡಿಎಸ್ ಪಕ್ಷಕ್ಕೆ ಮಾತ್ರ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಂಗ್ರೆಸ್ ವಲಯದಲ್ಲಿ ಆತಂಕ: ಶಾಸಕಾಂಗ ಸಭೆಯಲ್ಲಿ 13 ಕೈ ಶಾಸಕರು ಗೈರು
http://bit.ly/2rJYtCf
►►ನಮ್ಮನ್ನೆಲ್ಲ ಕಟ್ಟಿ ಹಾಕಿ ಚುನಾವಣೆ ನಡೆಸಿದಂತಿತ್ತು. ಇವಿಎಂ ಮೇಲೆ ಸಂಶಯವಿದೆ: ರಮಾನಾಥ ರೈ
 
http://bit.ly/2KrumXK
►►ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ರಚಿಸಲು ಸುಲಭದಲ್ಲಿ ಬಿಡಲಾರೆ: ಮೋದಿ ಸುಳಿವು: http://bit.ly/2IGDBpN
►►ಮಂಗಳೂರು: ವಿಜಯೋತ್ಸವದ ವೇಳೆ ಪರಸ್ಪರ ಕಲ್ಲು ತೂರಾಟ. ಓರ್ವ ಆಸ್ಪತ್ರೆಗೆ ದಾಖಲು http://bit.ly/2jXKyES
►►ಕರ್ನಾಟಕ ಅತಂತ್ರ: ಮುಂದಿನ 24 ಗಂಟೆಗಳಲ್ಲಿ ಏನೆಲ್ಲ ನಡೆಯಬಹುದು? ಇಲ್ಲಿದೆ ಒಂದು ನೋಟ http://bit.ly/2GmJpzD
►►ಅತಂತ್ರ ವಿಧಾನಸಭೆ. ಸರ್ಕಾರ ರಚನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹಕ್ಕು ಮಂಡನೆ http://bit.ly/2GmELBI
►►ಜೆಡಿಎಸ್‌ಗೆ ಬೇಷರತ್ ಬೆಂಬಲ ಸಾರಿದ ಕಾಂಗ್ರೆಸ್ ಜೆಡಿಎಸ್ ಗ್ರೀನ್ ಸಿಗ್ನಲ್‌ಗೆ ಕ್ಷಣಗಣನೆ  http://bit.ly/2rKBoiH
►►ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಆಯ್ಕೆ. ಮಂಗಳೂರಿನಿಂದ ಯು. ಟಿ. ಖಾದರ್ ಗೆಲುವು
http://bit.ly/2Iok2iC
►►ಗೆಲುವಿನ ಖಾತೆ ತೆರೆದ ಬಿಜೆಪಿ. ಮೂಡಬಿದಿರಿಯಲ್ಲಿ ಉಮಾನಾಥ್ ಕೋಟ್ಯಾನ್ ಗೆಲುವು
http://bit.ly/2jXMy0c
►►ಇಂದು ಮತದಾರನ ತೀರ್ಪು ಬಹಿರಂಗ: http://bit.ly/2IGi54w
►►ಚನ್ನಪಟ್ಟಣದಲ್ಲಿ  ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ http://bit.ly/2IguHQD
►►ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಬಹುಮತದ ಕಾಂಗ್ರೆಸ್ ಸರ್ಕಾರ? http://bit.ly/2jS3sx0
►►ಧೂಳಿನ ಬಿರುಗಾಳಿ ಜೊತೆ ಸುರಿದ ಭಾರಿ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವು http://bit.ly/2Ijn1ZN

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ