ನಮ್ಮನ್ನೆಲ್ಲ ಕಟ್ಟಿ ಹಾಕಿ ಚುನಾವಣೆ ನಡೆಸಿದಂತಿತ್ತು. ಇವಿಎಂ ಮೇಲೆ ಸಂಶಯವಿದೆ: ರಮಾನಾಥ ರೈ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಯಾವ ಕಾರಣಕ್ಕೆ ಸೋಲಾಗಿದೆ ಎಂಬುದು ಗೊತ್ತಾಗ್ತಿಲ್ಲ. ಆದರೆ. ಇವಿಎಂ ಮೆಷಿನ್ ಬಗ್ಗೆಯೂ ನಮಗೆ ಸ್ವಲ್ಪ ಸಂಶಯವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಚುನಾವಣೆ ನಡೆಯುತ್ತಿದ್ದಾಗ ಕೆಲವು ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ನಾನು ನನ್ನ ಜೀವಮಾನದಲ್ಲಿ ಎಷ್ಟೋ ಚುನಾವಣೆಯಲ್ಲಿ ಸ್ಫರ್ಧಿಸಿದ್ದೇನೆ. ಆದರೆ ಅಭ್ಯರ್ಥಿಗಳ ಮನೆ ಮೇಲೆ ಐಟಿ ದಾಳಿ ಮಾಡುವುದನ್ನು ನೋಡಿರಲಿಲ್ಲ. ಒಟ್ಟಿನಲ್ಲಿ ಈ ಮೂಲಕ ನಮ್ಮನ್ನು ಕಟ್ಟಿ ಹಾಕಿ ಚುನಾವಣೆ ಮಾಡಿದಂತಾಗಿದೆ ಎಂದು ಅವರು ಹೇಳಿದರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸುವ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುವುದೇ ಪ್ರಮುಖವಾಗಿರುತ್ತದೆ. ಚುನಾವಣೆ ಅಂದರೆ ನಾವು ಕೆಲಸ ಮಾಡಿದ್ದಕ್ಕೆ ಮೌಲ್ಯಮಾಪನವಾಗಿರುತ್ತದೆ ಅಂತ ಭಾವಿಸಿದ್ದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಹಲವರ ಮೇಲೆ ಹಲ್ಲೆಯಾಗಿದೆ. ಹರೀಶ್ ಪೂಜಾರಿ ಎಂಬ ಹಿಂದೂ ಯುವಕನ ಮೇಲೆಯೂ ಸಂಘಪರಿವಾರದವರು ಹಲ್ಲೆ, ಹತ್ಯೆ ಮಾಡಿದ್ದಾರೆ. ಅಲ್ಲದೇ ಕೆಲವರ ಹತ್ಯೆಯಾಗಿದೆ. ಇದಕ್ಕೆ ಕಾಂಗ್ರೆಸ್ಸಿನವರು ಕಾರಣರಲ್ಲ. ಅಪಪ್ರಚಾರ ಮಾಡುತ್ತಾರೆ ಅದಕ್ಕೇನೂ ಮಾಡಕ್ಕಾಗಲ್ಲ. ಹತ್ಯೆ ಪ್ರಕರಣಗಳಲ್ಲಿ ಸಂಘಪರಿವಾರದವರು ಮತ್ತು ಎಸ್‍ಡಿಪಿಐಯವರು ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಸದಸ್ಯರು ಯಾರು ಇಲ್ಲ. ಒಟ್ಟಿನಲ್ಲಿ ನಮ್ಮ ಕಡೆ ಬೆರಳು ತೋರಿಸುವಂತದ್ದು ಸಮಂಜಸವಲ್ಲ. ಹಿಂದೂಗಳ ಮೇಲಿನ ಹಲ್ಲೆ ಹಾಗೂ ಕೊಲೆಯೇ ಸೋಲಿಗೆ ಕಾರಣ ಎಂಬ ಬಿಜೆಪಿಯವರ ಆರೋಪಕ್ಕೆ ರಮಾನಾಥ ರೈ ಹೀಗೆ ಪ್ರತಿಕ್ರಿಯಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ರಮಾನಾಥ ರೈ  ಬಿಜೆಪಿಯ ಯು.ರಾಜೇಶ್ ನಾಯ್ಕ್ ವಿರುದ್ಧ ಸೋಲೊಪ್ಪಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ರಚಿಸಲು ಸುಲಭದಲ್ಲಿ ಬಿಡಲಾರೆ: ಮೋದಿ ಸುಳಿವು:
http://bit.ly/2IGDBpN
►►ಮಂಗಳೂರು: ವಿಜಯೋತ್ಸವದ ವೇಳೆ ಪರಸ್ಪರ ಕಲ್ಲು ತೂರಾಟ. ಓರ್ವ ಆಸ್ಪತ್ರೆಗೆ ದಾಖಲು http://bit.ly/2jXKyES
►►ಕರ್ನಾಟಕ ಅತಂತ್ರ: ಮುಂದಿನ 24 ಗಂಟೆಗಳಲ್ಲಿ ಏನೆಲ್ಲ ನಡೆಯಬಹುದು? ಇಲ್ಲಿದೆ ಒಂದು ನೋಟ http://bit.ly/2GmJpzD
►►ಅತಂತ್ರ ವಿಧಾನಸಭೆ. ಸರ್ಕಾರ ರಚನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹಕ್ಕು ಮಂಡನೆ http://bit.ly/2GmELBI
►►ಜೆಡಿಎಸ್‌ಗೆ ಬೇಷರತ್ ಬೆಂಬಲ ಸಾರಿದ ಕಾಂಗ್ರೆಸ್ ಜೆಡಿಎಸ್ ಗ್ರೀನ್ ಸಿಗ್ನಲ್‌ಗೆ ಕ್ಷಣಗಣನೆ  http://bit.ly/2rKBoiH
►►ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಆಯ್ಕೆ. ಮಂಗಳೂರಿನಿಂದ ಯು. ಟಿ. ಖಾದರ್ ಗೆಲುವು
http://bit.ly/2Iok2iC
►►ಗೆಲುವಿನ ಖಾತೆ ತೆರೆದ ಬಿಜೆಪಿ. ಮೂಡಬಿದಿರಿಯಲ್ಲಿ ಉಮಾನಾಥ್ ಕೋಟ್ಯಾನ್ ಗೆಲುವು
http://bit.ly/2jXMy0c
►►ಇಂದು ಮತದಾರನ ತೀರ್ಪು ಬಹಿರಂಗ: http://bit.ly/2IGi54w
►►ಚನ್ನಪಟ್ಟಣದಲ್ಲಿ  ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ http://bit.ly/2IguHQD
►►ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಬಹುಮತದ ಕಾಂಗ್ರೆಸ್ ಸರ್ಕಾರ? http://bit.ly/2jS3sx0

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ