ಮಂಗಳೂರು: ವಿಜಯೋತ್ಸವದ ವೇಳೆ ಪರಸ್ಪರ ಕಲ್ಲು ತೂರಾಟ. ಓರ್ವ ಆಸ್ಪತ್ರೆಗೆ ದಾಖಲು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ 7ರಲ್ಲಿ ಗೆದ್ದು ಪಾರಮ್ಯ ಮೆರೆದ ಭಾರತೀಯ ಜನತಾ ಪಕ್ಷದ ವಿಜಯೋತ್ಸವ ಸಂಭ್ರಮದಲ್ಲಿ ಕಲ್ಲು ತೂರಾಟದ ಘಟನೆ ವರದಿಯಾಗಿದೆ. ಅಡ್ಯಾರ ಪದವಿನಲ್ಲಿ ಮೇ 15ರ ಸಂಜೆ ಕಲ್ಲು ತೂರಾಟ ನಡೆದಿದೆ.

ವಿಜಯೋತ್ಸವ ಮೆರವಣಿಗೆಯ ವೇಳೆ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮಸೀದಿಯತ್ತ ಕಲ್ಲು ತೂರಿದ್ದಾರೆ. ಆ ಬಳಿಕ ಇನ್ನೊಂದು ಗುಂಪು ವಿಜಯೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದೆ ಎನ್ನಲಾಗುತ್ತಿದೆ.

ಸ್ಥಳೀಯ ರಾಮಾಜಂನೇಯ ವ್ಯಾಯಾಮ ಶಾಲೆಯ ಬೋರ್ಡ್ ಮತ್ತು ಕಿಟಕಿ ಗಾಜುಗಳಿಗೂ ಕಲ್ಲು ತೂರಾಟದಲ್ಲಿ ಹಾನಿಯಾಗಿದೆ. ಕಲ್ಲು ತೂರಾಟ ನಡೆಸಿದ ವ್ಯಕ್ತಿಗಳಿಂದ ಹಲ್ಲೆಗೊಳಗಾದ ವ್ಯಕ್ತಿಯೋರ್ವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯೋತ್ಸವ ಮೆರವಣಿಗೆಯನ್ನು ನಡೆಸದಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಧಿಕ್ಕರಿಸಿ ವಿಜಯೋತ್ಸವ ನಡೆಸಲಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕರ್ನಾಟಕ ಅತಂತ್ರ: ಮುಂದಿನ 24 ಗಂಟೆಗಳಲ್ಲಿ ಏನೆಲ್ಲ ನಡೆಯಬಹುದು? ಇಲ್ಲಿದೆ ಒಂದು ನೋಟ
http://bit.ly/2GmJpzD
►►ಅತಂತ್ರ ವಿಧಾನಸಭೆ. ಸರ್ಕಾರ ರಚನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹಕ್ಕು ಮಂಡನೆ http://bit.ly/2GmELBI
►►ಜೆಡಿಎಸ್‌ಗೆ ಬೇಷರತ್ ಬೆಂಬಲ ಸಾರಿದ ಕಾಂಗ್ರೆಸ್ ಜೆಡಿಎಸ್ ಗ್ರೀನ್ ಸಿಗ್ನಲ್‌ಗೆ ಕ್ಷಣಗಣನೆ  http://bit.ly/2rKBoiH
►►ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಆಯ್ಕೆ. ಮಂಗಳೂರಿನಿಂದ ಯು. ಟಿ. ಖಾದರ್ ಗೆಲುವು
http://bit.ly/2Iok2iC
►►ಗೆಲುವಿನ ಖಾತೆ ತೆರೆದ ಬಿಜೆಪಿ. ಮೂಡಬಿದಿರಿಯಲ್ಲಿ ಉಮಾನಾಥ್ ಕೋಟ್ಯಾನ್ ಗೆಲುವು
http://bit.ly/2jXMy0c
►►ಇಂದು ಮತದಾರನ ತೀರ್ಪು ಬಹಿರಂಗ: http://bit.ly/2IGi54w
►►ಚನ್ನಪಟ್ಟಣದಲ್ಲಿ  ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ http://bit.ly/2IguHQD
►►ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಬಹುಮತದ ಕಾಂಗ್ರೆಸ್ ಸರ್ಕಾರ? http://bit.ly/2jS3sx0
►►ಧೂಳಿನ ಬಿರುಗಾಳಿ ಜೊತೆ ಸುರಿದ ಭಾರಿ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವು http://bit.ly/2Ijn1ZN

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ