ಕರ್ನಾಟಕ ಅತಂತ್ರ: ಮುಂದಿನ 24 ಗಂಟೆಗಳಲ್ಲಿ ಏನೆಲ್ಲ ನಡೆಯಬಹುದು? ಇಲ್ಲಿದೆ ಒಂದು ನೋಟ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯ ವಿಧಾನಸಭೆಗೆ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದ ಬಿಜೆಪಿ ಮತ್ತು ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರ ರಚನೆಯ ಹಕ್ಕು ಮಂಡಿಸಿದೆ. ಇದೀಗ ಚೆಂಡು ರಾಜಭವನದ ಅಂಗಳದಲ್ಲಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಮುಂದಾಗಿದ್ದು ಅವರ ಒಟ್ಟು ಬಲಾಬಲ ಮ್ಯಾಜಿಕ್ ಸಂಖ್ಯೆ ಮೀರಲಿದೆ. ಬಿಜೆಪಿ ಸದ್ಯಕ್ಕೆ ಕೇವಲ 104 ಸ್ಥಾನ ಗಳಿಸಿದ್ದು ಮ್ಯಾಜಿಕ್ ನಂಬರ್‌ನಿಂದ ದೂರವಿದೆ.

ಹಾಗಿದ್ದರೆ ರಾಜ್ಯಪಾಲರು ಯಾವ ನಿರ್ಣಯ ಕೈಗೊಳ್ಳಬಹುದು? ಬಿಜೆಪಿ ಅಧಿಕಾರ ಹಿಡಿಯಲು ಏನಲ್ಲ ಕಸರತ್ತು ನಡೆಸಬಹುದು? ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಗೆ ಏನೆಲ್ಲ ಅಡ್ಡಿಯಾಗಬಹುದು? ಈ ಎಲ್ಲ ಸಾಧ್ಯತೆಗಳತ್ತ ಒಂದು ನೋಟ ಇಲ್ಲಿದೆ.ಬಿಜೆಪಿ ಏನೆಲ್ಲ ಮಾಡಬಹುದು?

* 103 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಸರಳ ಬಹುಮತ ಪಡೆಯಲು ಇನ್ನೂ 9 ಶಾಸಕರ ಬೆಂಬಲದ ಅಗತ್ಯವಿದೆ. ಲಿಂಗಾಯತ ಮುಖ್ಯಮಂತ್ರಿ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್‌ನ ಲಿಂಗಾಯತ ಶಾಸಕರ ಸೆಳೆಯಲು ಬಿಜೆಪಿ ಪ್ರಯತ್ನಿಸಬಹುದು.

* ಸರ್ಕಾರ ರಚನೆಗೆ ಈಗಾಗಲೇ 10 ದಿನ ಸಮಯ ಕೇಳಿರುವ ಬಿಜೆಪಿ ಅಗತ್ಯ ಸಂಖ್ಯಾ ಬಲ ಹೊಂದಿಸಲು ಸಾಧ್ಯವಾದ ಎಲ್ಲ ಕಸರತ್ತು ಮಾಡಬಹುದು.

* ಕೇಂದ್ರ ಸರ್ಕಾರದ ಬೆಂಬಲ ಪಡೆದು ರಾಜ್ಯಪಾಲರ ಪ್ರಭಾವ ಬಳಸಿ ಸರ್ಕಾರ ರಚಿಸಿ ಆಬಳಿಕ ಬಹುಮತ ಸಾಬೀತುಪಡಿಸಲು ಸಮಯ ತೆಗೆದುಕೊಳ್ಳಬಹುದು. ಆ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ 15ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗುವಂತೆ ಮಾಡುವ ತಂತ್ರ ರೂಪಿಸಬಹುದು.

* ಈಗ ಕಾಂಗ್ರೆಸ್ ಪಾಳಯದಲ್ಲಿರು ಪಕ್ಷೇತರರಾಗಿ ಗೆದ್ದಿರುವ ಇಬ್ಬರನ್ನು ಸೆಳೆಯಲು ಬಿಜೆಪಿ ಮುಂದಾಗಬಹುದು.

* 222 ಸದಸ್ಯ ಬಲದ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ ಕಡಿಮೆಯಾಗಿಸುವ ಸಲುವಾಗಿ 15ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಕೊಡಿಸಿ ಬಹುಮತ ಸಾಬೀತಪಡಿಸಲು ಮುಂದಾಗಬಹುದು.ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಮುಂದಿನ ಸಾಧ್ಯತೆಗಳೇನು?

* ಸರ್ಕಾರ ರಚನೆಗೆ ಈಗಾಗಲೇಹಕ್ಕುಮಂಡಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಖರೀದಿಸದಂತೆ ತಡೆಯಲು ರೆಸಾರ್ಟ್ ರಾಜಕೀಯದ ಮೊರೆ ಹೋಗಬಹುದು.

* ಬಹುಮತ ಸಾಬೀತುಪಡಿಸುವವರೆಗೆ ಬಿಜೆಪಿ ನಾಯಕರ ಸಂಪರ್ಕಕ್ಕೆ ತಮ್ಮ ಪಕ್ಷದ ಶಾಸಕರು ಸಿಗದಂತೆ ದೂರದ ರಾಜ್ಯಗಳಿಗೆ ಶಾಸಕರನ್ನು ಕಳುಹಿಸಬಹುದು.

* ಬಿಜೆಪಿ ಕಡೆಗೆ ಒಲವಿರುವ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಪಕ್ಷದಲ್ಲೇ ಉಳಿಸಿಕೊಳ್ಳಬಹುದು.

* ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡದೇ ಇದ್ದರೆ ರಾಜಭವನಕ್ಕೆ ಶಾಸಕರ ಪರೇಡ್ ನಡೆಸಬಹುದು.

* ಸರ್ಕಾರ ರಚನೆಗೆ ರಾಜ್ಯಪಾಲರು ಕರೆಯುವಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದ ಅಡ್ಡಿಯಾಗಿದೆ ಎಂದಾದರೆ ನವದೆಹಲಿಗೆ ತೆರಳಿ ರಾಷ್ಟ್ರಪತಿ ಭವನದ ಎದುರು ಅನಿರ್ದಿಷ್ಟ ಧರಣಿಗೆ ಮುಂದಾಗಬಹುದು.ರಾಜ್ಯಪಾಲರು ಏನು ಮಾಡಬಹುದು?
* ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವುದರಿಂದ ರಾಜ್ಯಪಾಲರು ಕಾದು ನೋಡುವ ತಂತ್ರಕ್ಕೆ ಮುಂದಾಗಬಹುದು.

* ಮ್ಯಾಜಿಕ್ ಸಂಖ್ಯೆ ಯಾರಿಗೂ ಇಲ್ಲದ ಕಾರಣ ಕಾನೂನು ತಜ್ಞರ ಸಲಹೆ ಪಡೆಯುವುದಾಗಿ ಹೇಳಿ ಬಿಜೆಪಿ ಸಂಖ್ಯಾಬಲವನ್ನು ಹೆಚ್ಚಿಇಕೊಳ್ಳುವ ವರೆಗೆ ಕಾಯಬಹುದು.

* ಅತಿ ಹೆಚ್ಚು ಸ್ಥಾನ ಪಡೆದಿರುವ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂಬ ನಿಯಮದ ಅನ್ವಯ ಬಿಜೆಪಿಗೆ ಆಹ್ವಾನ ನೀಡಲೂ ಬಹುದು.

*ಸರ್ಕಾರ ರಚಿ ಆ ಬಳಿಕವೇ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಮಯ ಕೊಡಿ ಎಂಬ ಬಿಜೆಪಿ ನಾಯಕರ ಕೋರಿಕೆ ಮನ್ನಿಸಬಹುದು.

* ಗೋವಾದಲ್ಲಿ ನಡೆದದ್ದು ಇಲ್ಲಿಯೂ ನಡೆಯಬಹುದು. ಗೋವಾದಲ್ಲಿ ಕಾಂಗ್ರೆಸ್ ಹೆಚ್ಚಿನ ಶಾಸಕರ ಬಲ ಹೊಂದಿದ್ದರೂ ಬಿಜೆಪಿ ಸಣ್ಣ ಪಕ್ಷಗಳು, ಪಕ್ಷೇತರರ ಜತೆಗೂಡಿ ಸಂಖ್ಯಾಬಲ ಹೆಚ್ಚಿದೆ ಎಂದು ರಾಜ್ಯಪಾಲರಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅದೇ ನೆಲೆಯಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿತ್ತು. ಇದನ್ನೇ ಕಾಂಗ್ರೆಸ್–ಜೆಡಿಎಸ್ ಈಗ ಮಾಡಿದ್ದು ಗೋವಾದಲಿ ಸರ್ಕಾರ ರಚನೆಗೆ ಅವಕಾಶ ನೀಡಿದಂತೆ ಇಲ್ಲಿಯೂ ಅದೇ ಮಾದರಿ ಅನುಸರಿಸಬೇಕು ಎಂದು ಒತ್ತಾಯ ಬಂದರೆ ರಾಜ್ಯಪಾಲರು ಕುಮಾರಸ್ವಾಮಿಗೆ ಸರ್ಕಾರ ರಚನೆಗೆ ಅವಕಾಶ ಕೊಡಬಹುದು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಅತಂತ್ರ ವಿಧಾನಸಭೆ. ಸರ್ಕಾರ ರಚನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹಕ್ಕು ಮಂಡನೆ
http://bit.ly/2GmELBI
►►ಜೆಡಿಎಸ್‌ಗೆ ಬೇಷರತ್ ಬೆಂಬಲ ಸಾರಿದ ಕಾಂಗ್ರೆಸ್ ಜೆಡಿಎಸ್ ಗ್ರೀನ್ ಸಿಗ್ನಲ್‌ಗೆ ಕ್ಷಣಗಣನೆ  http://bit.ly/2rKBoiH
►►ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಆಯ್ಕೆ. ಮಂಗಳೂರಿನಿಂದ ಯು. ಟಿ. ಖಾದರ್ ಗೆಲುವು
http://bit.ly/2Iok2iC
►►ಗೆಲುವಿನ ಖಾತೆ ತೆರೆದ ಬಿಜೆಪಿ. ಮೂಡಬಿದಿರಿಯಲ್ಲಿ ಉಮಾನಾಥ್ ಕೋಟ್ಯಾನ್ ಗೆಲುವು
http://bit.ly/2jXMy0c
►►ಇಂದು ಮತದಾರನ ತೀರ್ಪು ಬಹಿರಂಗ: http://bit.ly/2IGi54w
►►ಚನ್ನಪಟ್ಟಣದಲ್ಲಿ  ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ http://bit.ly/2IguHQD
►►ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಬಹುಮತದ ಕಾಂಗ್ರೆಸ್ ಸರ್ಕಾರ? http://bit.ly/2jS3sx0
►►ಧೂಳಿನ ಬಿರುಗಾಳಿ ಜೊತೆ ಸುರಿದ ಭಾರಿ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವು http://bit.ly/2Ijn1ZN

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ