ಅತಂತ್ರ ವಿಧಾನಸಭೆ. ಸರ್ಕಾರ ರಚನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಹಕ್ಕು ಮಂಡನೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯ ವಿಧಾನಸಭೆಗೆ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ 2ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದ ಬಿಜೆಪಿ ಮತ್ತು ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರ ರಚನೆಯ ಹಕ್ಕು ಮಂಡಿಸಿದೆ. ಇದೀಗ ಚೆಂಡು ರಾಜಭವನದ ಅಂಗಳದಲ್ಲಿದೆ.

ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿನ ಕಸರತ್ತು ನಡೆದಿದ್ದು ಕೇವಲ 38 ಸ್ಥಾನ ಗಳಿಸಿರುವ ಜೆಡಿಎಸ್‌ಗೆ ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ಮೈತ್ರಿಗೆ ಮುಂದಾಗಿದೆ. 2013ರ ಚುನಾವಣೆಯಲ್ಲಿ 122 ಸ್ಥಾನ ಪಡೆದು ಐದು ವರ್ಷ ಆಳಿದ ಕಾಂಗ್ರೆಸ್‌ 78 ಕ್ಕೆ ತೃಪ್ತಿ ಪಟ್ಟುಕೊಂಡಿದೆ.


ಸರ್ಕಾರ ರಚನೆಗೆ 112 ಸದಸ್ಯ ಬಲ ಬೇಕಾಗಿದ್ದು ಅಗತ್ಯ ಸಂಖ್ಯಾಬಲ ತಲುಪಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಸ್ಪಷ್ಟ ಬಹುಮತದ ಕಡೆಗೆ ಬಿಜೆಪಿ ಸಾಗುತ್ತಿದ್ದಾಗ  ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ನಾಯಕರ ಭೇಟಿಗಾಗಿ ನವದೆಹಲಿಗೆ ತೆರಳಲು ಮುಂದಾಗಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸುವುದಾಗಿಯೂ ಹೇಳಿದ್ದರು.

ಆದರೆ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಮುನ್ನಡೆ ಇಳಿಮುಖವಾಗತೊಡಗಿದಂತೆ ನವದೆಹಲಿ ಭೇಟಿ ಮೊಟಕುಗೊಳಿಸಿದರು. 

ಫಲಿತಾಂಶ ಅತಂತ್ರ ಎಂದು ಖಚಿತವಾಗುತ್ತಿದ್ದಂತೆ ದೇವೇಗೌಡರಿಗೆ ಕರೆ ಮಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸಮ್ಮಿಶ್ರ ಸರ್ಕಾರ ರಚಿಸುವ ಪ್ರಸ್ತಾಪವನ್ನು ಮೊದಲು ಮುಂದಿಟ್ಟರು. ಇದೇ ಹೊತ್ತಿಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಭೇಟಿ ಕೊಟ್ಟರು. ಕಾಂಗ್ರೆಸ್ ಪ್ರಸ್ತಾಪಕ್ಕೆ ಉಭಯ ನಾಯಕರು ಸಮ್ಮತಿ ಸೂಚಿಸಿದರು. ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪರಮೇಶ್ವರ ಹಾಗೂ ಸಿದ್ದರಾಮಯ್ಯ ಅವರಿಂದಲೇ ಮಾಧ್ಯಮಗಳ ಮೂಲಕ ಹೇಳಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಹನ್ನೆರಡು ವರ್ಷಗಳ ಬಳಿಕ ಮೈತ್ರಿ ಸರ್ಕಾರರಚನೆಗೆ ಮುಂದಾಗಿವೆ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಪರಮೇಶ್ವರ ಉಪಮುಖ್ಯಮಂತ್ರಿಯಾಗಿರುವ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಜೆಡಿಎಸ್‌ಗೆ ಬೇಷರತ್ ಬೆಂಬಲ ಸಾರಿದ ಕಾಂಗ್ರೆಸ್ ಜೆಡಿಎಸ್ ಗ್ರೀನ್ ಸಿಗ್ನಲ್‌ಗೆ ಕ್ಷಣಗಣನೆ 
http://bit.ly/2rKBoiH
►►ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಆಯ್ಕೆ. ಮಂಗಳೂರಿನಿಂದ ಯು. ಟಿ. ಖಾದರ್ ಗೆಲುವು
http://bit.ly/2Iok2iC
►►ಗೆಲುವಿನ ಖಾತೆ ತೆರೆದ ಬಿಜೆಪಿ. ಮೂಡಬಿದಿರಿಯಲ್ಲಿ ಉಮಾನಾಥ್ ಕೋಟ್ಯಾನ್ ಗೆಲುವು
http://bit.ly/2jXMy0c
►►ಇಂದು ಮತದಾರನ ತೀರ್ಪು ಬಹಿರಂಗ: http://bit.ly/2IGi54w
►►ಚನ್ನಪಟ್ಟಣದಲ್ಲಿ  ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ http://bit.ly/2IguHQD
►►ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಬಹುಮತದ ಕಾಂಗ್ರೆಸ್ ಸರ್ಕಾರ? http://bit.ly/2jS3sx0
►►ಧೂಳಿನ ಬಿರುಗಾಳಿ ಜೊತೆ ಸುರಿದ ಭಾರಿ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವು http://bit.ly/2Ijn1ZN

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ