ಚನ್ನಪಟ್ಟಣದಲ್ಲಿ ಫಲಿತಾಂಶಕ್ಕೂ ಮುನ್ನವೇ ಸಿ.ಪಿ.ಯೋಗೇಶ್ವರ್‌ಗೆ ಸೋಲಿನ ಭೀತಿ

ಕರಾವಳಿಕರ್ನಾಟಕ ವರದಿ

ರಾಮನಗರ:
ಚನ್ನಪಟ್ಟಣ ಕ್ಷೇತ್ರದಲ್ಲಿ ಕಡೆಯ ಎರಡು ದಿನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗಿ ನನ್ನ ವಿರುದ್ಧ ತಂತ್ರ ರೂಪಿಸಿದವು. ಡಿ.ಕೆ. ಶಿವಕುಮಾರ್ ಅವರ ಕಪ್ಪು ಹಣ ಕ್ಷೇತ್ರದಾದ್ಯಂತ ಹರಿದಾಡಿದ್ದು, ಹಣ, ತೋಳ್ಬಲ ಕೆಲಸ ಮಾಡಿದೆ. ಆದ್ದರಿಂದ ನನ್ನ ಗೆಲುವು ಕಷ್ಟ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್  ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಭಾರೀ ಜಿದ್ದಾಜಿದ್ದಿನ ಕಣವಾದ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಹೀಗೆ ಹೇಳುವ ಮೂಲಕ ಫಲಿತಾಂಶಕ್ಕೂ ಮುನ್ನ ಸೋಲಿನ ಭೀತಿಗೆ ಒಳಗಾಗಿದ್ದಾರೆ.

ನನ್ನ ಜೊತೆಗಿದ್ದ 20ಕ್ಕೂ ಹೆಚ್ಚು ಮುಖಂಡರನ್ನು ಕಾಂಗ್ರೆಸ್ ಖರೀದಿ ಮಾಡಿತು. ಡಿಕೆಶಿ ಸಹೋದರರು ಎಚ್.ಎಂ. ರೇವಣ್ಣಗೆ ನನ್ನನ್ನು ರಾಜಕೀಯವಾಗಿ ಮುಗಿಸುವ ಸುಪಾರಿ ಕೊಟ್ಟರು. ನನ್ನ ನೇರ ಸ್ಪರ್ಧಿ ಎಚ್.ಡಿ.ಕುಮಾರಸ್ವಾಮಿ ಆಗಿದ್ದರು, ಆದರೆ  ಸಾರಿಗೆ ಸಚಿವ ಎಚ್.ಎಂ.ರೇವಣ್ಣ  ಪರ ಡಿ.ಕೆ.ಶಿವಕುಮಾರ್ ಅವರು ಕಪ್ಪು ಹಣ ಹಂಚಿ ಭಾರೀ ತಂತ್ರವನ್ನೇ ರೂಪಿಸಿದ್ದಾರೆ. ಕುಮಾರಸ್ವಾಮಿ ಅದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಯಾರೇ ಗೆದ್ದರೂ ಕೂದಲೆಳೆ ಅಂತರದ ಗೆಲುವಷ್ಟೇ. ನಾನು ಗೆದ್ದರೆ ಐನೂರು, ಸಾವಿರ ಮತಗಳ ಅಂತರದಿಂದ ಗೆಲ್ಲಬಹುದಷ್ಟೇ ಎಂದಿದ್ದಾರೆ. ಮಾನಸಿಕವಾಗಿ ಸೋತಿದ್ದೇನೆ ಎಂದು ಹೇಳಿದ್ದಾರೆ.

ಸೋತರೂ ಬಿಜೆಪಿಯಲ್ಲಿಯೇ ಉಳಿಯುತ್ತೇನೆ. ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಉಪ ಚುನಾವಣೆ ನಡೆದಲ್ಲಿ ಪಕ್ಷ ಬಯಸಿದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧ ಎಂದು ಯೋಗೇಶ್ವರ್ ಹೇಳಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಬಹುಮತದ ಕಾಂಗ್ರೆಸ್ ಸರ್ಕಾರ?
http://bit.ly/2jS3sx0
►►ಧೂಳಿನ ಬಿರುಗಾಳಿ ಜೊತೆ ಸುರಿದ ಭಾರಿ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವು http://bit.ly/2Ijn1ZN
►►ಬೇಕಾದರೆ ಬರೆದುಕೊಡ್ತೀನಿ. ನಮಗೆ 125 ರಿಂದ 130 ಸೀಟು ಸಿಗಲಿದೆ: ಯಡಿಯೂರಪ್ಪ http://bit.ly/2rEC8WC
►►ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ? http://bit.ly/2IxBdlc
►►ಕಾಂಗ್ರೆಸ್ಗೆ 110ಕ್ಕೂ ಹೆಚ್ಚು ಸೀಟು ಬರಲಿದೆ. ಹೇಗೆ ಮತ್ತು ಏಕೆ? http://bit.ly/2jQlBLE
►►ಚಲಿಸುತ್ತಿದ್ದ  ಬೈಕ್ ಮೇಲೆ ಬಿದ್ದ ಮರ, ಯುವಕ ಸಾವು http://bit.ly/2jQsTz0
►► ಚರ್ಚ್ ದಾಳಿ ಕುರಿತ ಅಸಂಬದ್ದ ವಿಡೀಯೋ. ರೊಬರ್ಟ್ ರೊಝಾರಿಯೊ ವಿರುದ್ದ ಪೊಲೀಸ್ ದೂರು http://bit.ly/2Gdngn8
 

Related Tags: Karnataka Elections, Results, analysis, Yadiyoorappa, C.P.Yogeshwar, Kumarswamy, ಸಿ.ಪಿ.ಯೋಗೇಶ್ವರ್, ಮಾನಸಿಕ ಸೋಲು, ಕರಾವಳಿಕರ್ನಾಟಕ ವರದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ