ಕೇಂದ್ರ, ರಾಜ್ಯ ಗುಪ್ತಚರ ವರದಿಯಲ್ಲಿ ಕೈ ಮೇಲು. ಮತ್ತೆ ಕಾಂಗ್ರೆಸ್ ಸರ್ಕಾರ?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು/ನವದೆಹಲಿ:
ರಾಜ್ಯ ಮತ್ತು ಕೇಂದ್ರ ಗುಪ್ತಚರ ವರದಿಗಳ ಪ್ರಕಾರ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದ್ದು ಅಧಿಕಾರಕ್ಕೆ ಸನಿಹದಲ್ಲಿದೆ.

ರಾಜ್ಯ ಗುಪ್ತಚರ ವರದಿಯ ಪ್ರಕಾರ ಕಾಂಗ್ರೆಸ್‍ಗೆ 102 ಸ್ಥಾನ, ಬಿಜೆಪಿ 70, ಜೆಡಿಎಸ್‍ಗೆ 28 ಸ್ಥಾನ ಸಿಗಲಿದೆ. 20 ಕ್ಷೇತ್ರಗಳಲ್ಲಿ 10ರಲ್ಲಿ ಜೆಡಿಎಸ್, 10 ಕ್ಷೇತ್ರಗಳಲ್ಲಿ ಬಿಜೆಪಿ ನಡುವೆ ಕಾಂಗ್ರೆಸ್‍ಗೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳಿವೆ. 30 ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ 95 ರಿಂದ 102, ಬಿಜೆಪಿಗೆ 80 ರಿಂದ 85 ಸ್ಥಾನಗಳು, ಜೆಡಿಎಸ್ 35 ರಿಂದ 40 ಸೀಟುಗಳಲ್ಲಿ ಜಯಿಸಲಿದೆ ಎಂದು ಹೇಳಲಾಗಿದೆ.

ಈ ಬಾರಿ ಬದಾಮಿ ಹಾಗು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದು, ಎರಡೂ ಕ್ಷೇತ್ರಗಳಲ್ಲಿ ಸಿಎಂ ಗೆಲ್ಲಲಿದ್ದಾರೆ ಎಂದು ವರದಿಗಳು ಹೇಳಿವೆ. ಚಾಮುಂಡೇಶ್ವರಿಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯವಾದರೆ ಬದಾಮಿಯಲ್ಲಿ ಬಹುಮತಗಳ ಅಂತರದಿಂದ ಸಿಎಂ ಜಯ ಸಾಧಿಸಲಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಗಳು ಭವಿಷ್ಯ ನುಡಿದಿವೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಧೂಳಿನ ಬಿರುಗಾಳಿ ಜೊತೆ ಸುರಿದ ಭಾರಿ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವುhttp://bit.ly/2Ijn1ZN
►►ಬೇಕಾದರೆ ಬರೆದುಕೊಡ್ತೀನಿ. ನಮಗೆ 125 ರಿಂದ 130 ಸೀಟು ಸಿಗಲಿದೆ: ಯಡಿಯೂರಪ್ಪ http://bit.ly/2rEC8WC
►►ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ? http://bit.ly/2IxBdlc
►►ಕಾಂಗ್ರೆಸ್ಗೆ 110ಕ್ಕೂ ಹೆಚ್ಚು ಸೀಟು ಬರಲಿದೆ. ಹೇಗೆ ಮತ್ತು ಏಕೆ? http://bit.ly/2jQlBLE
►►ಚಲಿಸುತ್ತಿದ್ದ  ಬೈಕ್ ಮೇಲೆ ಬಿದ್ದ ಮರ, ಯುವಕ ಸಾವು http://bit.ly/2jQsTz0
►► ಚರ್ಚ್ ದಾಳಿ ಕುರಿತ ಅಸಂಬದ್ದ ವಿಡೀಯೋ. ರೊಬರ್ಟ್ ರೊಝಾರಿಯೊ ವಿರುದ್ದ ಪೊಲೀಸ್ ದೂರು

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ