ಧೂಳಿನ ಬಿರುಗಾಳಿ ಜೊತೆ ಸುರಿದ ಮಳೆ. ತತ್ತರಿಸಿದ ಉತ್ತರ ಭಾರತ: 40ಕ್ಕೂ ಹೆಚ್ಚು ಸಾವು

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಉತ್ತರ ಭಾರತದ ಹಲವೆಡೆ ಧೂಳು ಬಿರುಗಾಳಿಯ ಜೊತೆ ಸುರಿದ ಭಾರಿ ಮಳೆಗೆ ಕನಿಷ್ಠ 41 ಜನ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ವರದಿಯಾಗಿವೆ.

ದೆಹಲಿಯಲ್ಲಿ ಮರಗಳು ಉರುಳಿಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಯ ಮೇಲೆ ನೀರು ತುಂಬಿದೆ. ಮೆಟ್ರೊ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. 70ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. 

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಾಣ ಹಾನಿ ಸಂಭವಿಸಿದ್ದು, 18 ಜನ ಮೃತಪಟ್ಟಿದ್ದಾರೆ. ನಾಲ್ವರು ಮಕ್ಕಳೂ ಸೇರಿದಂತೆ 12 ಜನ ಪಶ್ಚಿಮ ಬಂಗಾಳದಲ್ಲಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ 9 ಮತ್ತು ದೆಹಲಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಅಸ್ಸಾಂ, ಮೇಘಾಲಯ, ಜಾರ್ಖಂಡ್‌ ಮತ್ತಿತರ ರಾಜ್ಯಗಳಲ್ಲೂ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.

ಕರ್ನಾಟಕದಲ್ಲೂ ಮಳೆ: ಕರ್ನಾಟಕದ ಹಲವೆಡೆಯೂ ಭಾನುವಾರ ಮಳೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆಯಾಗಿದೆ. ಹಲವೆಡೆ ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು.

ಹತ್ತು ದಿನಗಳ ಹಿಂದಷ್ಟೇ ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಬಿರುಗಾಳಿಗೆ 134 ಜನ ಬಲಿಯಾಗಿ, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಉತ್ತರ ಪ್ರದೇಶವೊಂದರಲ್ಲೇ 80 ಜನ ಸಾವಿಗೀಡಾಗಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಬೇಕಾದರೆ ಬರೆದುಕೊಡ್ತೀನಿ. ನಮಗೆ 125 ರಿಂದ 130 ಸೀಟು ಸಿಗಲಿದೆ: ಯಡಿಯೂರಪ್ಪ
http://bit.ly/2rEC8WC
►►ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ? http://bit.ly/2IxBdlc
►►ಕಾಂಗ್ರೆಸ್ಗೆ 110ಕ್ಕೂ ಹೆಚ್ಚು ಸೀಟು ಬರಲಿದೆ. ಹೇಗೆ ಮತ್ತು ಏಕೆ? http://bit.ly/2jQlBLE
►►ಚಲಿಸುತ್ತಿದ್ದ  ಬೈಕ್ ಮೇಲೆ ಬಿದ್ದ ಮರ, ಯುವಕ ಸಾವು http://bit.ly/2jQsTz0
►► ಚರ್ಚ್ ದಾಳಿ ಕುರಿತ ಅಸಂಬದ್ದ ವಿಡೀಯೋ. ರೊಬರ್ಟ್ ರೊಝಾರಿಯೊ ವಿರುದ್ದ ಪೊಲೀಸ್ ದೂರು

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ