ಬೇಕಾದರೆ ಬರೆದುಕೊಡ್ತೀನಿ. ನಮಗೆ 125 ರಿಂದ 130 ಸೀಟು ಸಿಗಲಿದೆ: ಯಡಿಯೂರಪ್ಪ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನಾನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ. ಮೋದಿ ,ಅಮಿತ್ ಶಾ , ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲರ ಆರ್ಶೀವಾದಿಂದ ನಾವು ಗೆಲ್ಲುತ್ತೇವೆ. ನಮಗೆ ಯಾವುದೇ ಭಯ ಇಲ್ಲ. ಯಾವುದೇ ಪಕ್ಷದ ಸಹಕಾರ ನಮಗೆ ಬೇಕಾಗಿಲ್ಲ. ನಮಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬೇಕಾದರೆ ನಿಮಗೆ ಬರೆದುಕೊಡ್ತೀನಿ. ನಮಗೆ 125 ರಿಂದ 130 ಸೀಟು ಸಿಗಲಿದೆ. ಬೇಕಾದರೆ ದೇವರ ಮುಂದೆ ಇಟ್ಟು ಪೂಜೆ ಮಾಡಿ ಬರೆದುಕೊಡ್ತೀನಿ. ನಾನು ಹೇಳಿದ್ದ ಮಾತು ಯಾವತ್ತೂ ಸುಳ್ಳು ಆಗಿಲ್ಲ ಎಂದಿದ್ದಾರೆ ಯಡಿಯೂರಪ್ಪ.

ಇಂದು ಮತ್ತು ನಾಳೆ ಬೆಂಗಳೂರಿನಲ್ಲಿದ್ದು ಕಾರ್ಯಕರ್ತರನ್ನ ಭೇಟಿ ಮಾಡುತ್ತೇನೆ. 15 ರಂದು ಮೋದಿ ಹಾಗು ಅಮಿತ್ ಶಾ ಭೇಟಿ ಮಾಡಲಿದ್ದೇನೆ. ಪ್ರಮಾಣ ವಚನ ದಿನಾಂಕದ ಬಗ್ಗೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಶೇ. 71 ರಷ್ಟು ಮತದಾನ ಆಗಿದೆ. ಜನರು ಅತ್ಯಂತ ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದು ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟ, ರೈತ ವಿರೋಧಿಯಾಗಿದೆ. ಕಾಂಗ್ರೆಸ್ ಪಕ್ಷ 70 ಕ್ಕೂ ಹೆಚ್ಚು ಸೀಟ್ ಗೆಲ್ಲಲ್ಲ. ಆದರೆ ಬಿಜೆಪಿ 130ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಜೆಡಿಎಸ್ 22-23 ಸೀಟುಗಳನ್ನು ಗೆಲ್ಲಲಿದೆ. ಪಕ್ಷೇತರರು 2 ರಿಂದ 4 ಸ್ಥಾನ ಗೆಲ್ಲುತ್ತಾರೆ ಎಂದು ಬಿಎಸ್ವೈ ಭವಿಷ್ಯ ನುಡಿದಿದ್ದಾರೆ.

ಕಳೆದ ಹದಿನೈದು ದಿನಗಳಿಂದ ನೋಡಿದರೆ ಸಿಎಂ ಮಾನಸಿಕವಾಗಿ ಕುಗ್ಗಿದ್ದಾರೆ ಎಂದೂ ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ?
http://bit.ly/2IxBdlc
►►ಕಾಂಗ್ರೆಸ್ಗೆ 110ಕ್ಕೂ ಹೆಚ್ಚು ಸೀಟು ಬರಲಿದೆ. ಹೇಗೆ ಮತ್ತು ಏಕೆ? http://bit.ly/2jQlBLE
►►ಚಲಿಸುತ್ತಿದ್ದ  ಬೈಕ್ ಮೇಲೆ ಬಿದ್ದ ಮರ, ಯುವಕ ಸಾವು http://bit.ly/2jQsTz0
►► ಚರ್ಚ್ ದಾಳಿ ಕುರಿತ ಅಸಂಬದ್ದ ವಿಡೀಯೋ. ರೊಬರ್ಟ್ ರೊಝಾರಿಯೊ ವಿರುದ್ದ ಪೊಲೀಸ್ ದೂರು http://bit.ly/2Gdngn8

Related Tags: Tags: Karnataka Elections, Exit Poll, Results, analysis, Yadiyoorappa
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ