ಚರ್ಚ್ ದಾಳಿ ಕುರಿತ ಅಸಂಬದ್ದ ವಿಡೀಯೋ: ರೊಬರ್ಟ್ ರೊಜಾರಿಯೊ ವಿರುದ್ದ ಪೊಲೀಸ್ ದೂರು

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನಿಸಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ರೊಬರ್ಟ್ ರೊಜಾರಿಯೊ ಎಂಬವರ ವಿರುದ್ಧ ಅತ್ತಾವರದ ದೀಪಕ್ ಡಿ’ಸೋಜಾ ಅವರು ನೀಡಿದ ದೂರಿನನ್ವಯ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರೊಬರ್ಟ್ ರೊಜಾರಿಯೊ 2008ರ ಚರ್ಚ್ ದಾಳಿ ಘಟನೆಗಳನ್ನು ಉಲ್ಲೇಖಿಸಿ ಕ್ರೈಸ್ತರು ಮತ್ತು ಇತರ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಪ್ರಯತ್ನ ಮಾಡಿದ್ದು, ಅವರ ವಿರುದ್ದ ಕ್ರಮ ಜರುಗಿಸುವಂತೆ ದೀಪಕ್ ಅವರು ದೂರಿನಲ್ಲಿ ವಿವರಿಸಿದ್ದರು.

ಶುಕ್ರವಾರ ರೊಬರ್ಟ್ ರೊಸಾರಿಯೊ ಮಾಡಿರುವ ವಿಡೀಯೋಗಳು ಫೇಸ್ ಬುಕ್ ಮತ್ತು ವಾಟ್ಸ್ಯಾಪ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಆದ ಹಿನ್ನೆಲೆಯಲ್ಲಿ ಈ ದೂರು ನೀಡಲಾಗಿದೆ.

ರೊಬರ್ಟ್ ರೊಸಾರಿಯೊ ಬಿಜೆಪಿ ಕಾರ್ಯಕರ್ತರಾಗಿದ್ದು, ಚರ್ಚ್ ದಾಳಿ ಘಟನೆಗಳಿಗೆ ಸಂಬಂಧಿಸಿ ಕ್ರೈಸ್ತ ಪಾದ್ರಿಗಳ ವಿರುದ್ದ ವೃಥಾ ಆರೋಪ ಮಾಡುತ್ತಿದ್ದು, ಇದರಿಂದ ಹಿಂದೂಗಳಿಗೆ ಕ್ರೈಸ್ತರ ವಿರುದ್ಧ ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. ಮತದಾರರ ದಾರಿ ತಪ್ಪಿಸುವ ಮತ್ತು ಧರ್ಮಗಳ ನಡುವೆ ದ್ವೇಷ ಮೂಡಿಸುವ ಸಂಗತಿಗಳನ್ನು ಪ್ರಸಾರ ಮಾಡುವುದು ಕಾನೂನು ವಿರುದ್ದವಾಗಿದೆ ಎಂಬ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ.

ಕದ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್153(ಎ) ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಚಲಿಸುತ್ತಿದ್ದ  ಬೈಕ್ ಮೇಲೆ ಬಿದ್ದ ಮರ, ಯುವಕ ಸಾವು
http://bit.ly/2jQsTz0
►►ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ? http://bit.ly/2IxBdlc
►►ಕಾಂಗ್ರೆಸ್‍ಗೆ 110ಕ್ಕೂ ಹೆಚ್ಚು ಸೀಟು ಬರಲಿದೆ. ಹೇಗೆ ಮತ್ತು ಏಕೆ? http://bit.ly/2jQlBLE

Related Tags: Robert Rosario, section 153 (A)IPC, FIR against activist Robert Rosario, Kadri police, Deepak D’Souza Attavar, Karavalikarnataka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ