ಕುಂದಾಪುರ: ಬೈಕ್ ಮೇಲೆ ಬಿದ್ದ ಮರ, ಯುವಕ ಸಾವು
ಭಾರೀ ಗಾಳಿಮಳೆಗೆ ಅಕೇಶಿಯಾ ಮರ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದಾಗ ಬೈಕ್ ಸವಾರ, ಗಾರೆ ಕಾರ್ಮಿಕ ಸ್ಥಳದಲ್ಲೇ ಸಾವು.

ಕರಾವಳಿಕರ್ನಾಟಕ ವರದಿ

ಕುಂದಾಪುರ:
ವಕ್ವಾಡಿ ನಿವಾಸಿ ಯುವಕನೋರ್ವ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಅಕೇಶಿಯಾ ಮರ ಬೈಕ್ ಮೇಲೆ ಬಿದ್ದಾಗ ಮೃತಪಟ್ಟ ಘಟನೆ ವರದಿಯಾಗಿದೆ.

ವಕ್ವಾಡಿ ದೇವಾಡಿಗಬೆಟ್ಟಿನ ಮಂಜುನಾಥ ದೇವಾಡಿಗರ ಮಗ ರವಿ ದೇವಾಡಿಗ(27) ಸಾವಪ್ಪಿದವರು.

ಗಾರೆ ಕಾರ್ಮಿಕರಾಗಿದ್ದ ರವಿಯವರು ಮೇ.11ರಂದು ಕೆಲಸ ಮುಗಿದ ಬಳಿಕ ರಾತ್ರಿ ಮನೆಗೆ ಬಂದವರು ಮತ್ತೆ ಕಾಳಾವರ ಪೇಟೆಗೆ ಹೋಗಿದ್ದರು.

ರಾತ್ರಿ ಹನ್ನೊಂದರ ಹೊತ್ತಿಗೆ ಮನೆಗೆ ಬರುವಾಗ  ಭಾರೀ ಗಾಳಿ ಮಳೆಗೆ ಅಸೋಡು ಫ್ಯಾಕ್ಟರಿ ಪರಿಸರದಲ್ಲಿ ಅಕೇಶಿಯಾ ಮರ ಇವರ ಬೈಕ್ ಮೇಲೆ ಬಿದ್ದಾಗ ತಲೆಗೆ ಗಂಭೀರ ಗಾಯಗೊಂಡು ಅಲ್ಲಿಯೇ ಸಾವಪ್ಪಿದ್ದಾರೆ.

ಬೆಳಿಗ್ಗೆ ಮರ ಮತ್ತು ಬೈಕ್ ನೋಡಿದ ಸ್ಥಳೀಯರು ನೋಡಿದಾಗ ರವಿ ಮೃತದೇಹ ಮರದಡಿ ಪತ್ತೆಯಾಗಿದೆ.
ರವಿ ದೇವಾಡಿಗ ಅವಿವಾಹಿತರಾಗಿದ್ದರು.
 

ಇಂದು ಹೆಚ್ಚು ಓದಿದ ಸುದ್ದಿಗಳು
►►ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ?
http://bit.ly/2IxBdlc
►►ಕಾಂಗ್ರೆಸ್‍ಗೆ 110ಕ್ಕೂ ಹೆಚ್ಚು ಸೀಟು ಬರಲಿದೆ. ಹೇಗೆ ಮತ್ತು ಏಕೆ? http://bit.ly/2jQlBLE

Related Tags: Biker death, Ravi Devadiga death, Kannada News, Karnataka News, Karavali Karnataka, Latest Kannada News, ಮರದಡಿ ಬಿದ್ದ ಯುವಕ ಸಾವು, ಕನ್ನಡ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ