ಚುನಾವಣೋತ್ತರ ಸಮೀಕ್ಷೆ: ಅತಂತ್ರ ವಿಧಾನಸಭೆಯತ್ತ ಕರ್ನಾಟಕ?

ಕರಾವಳಿ ಕರ್ನಾಟಕ ವರದಿ

ನವದೆಹಲಿ
: ಕರ್ನಾಟಕ ವಿಧಾನಸಭೆಗೆ ಶನಿವಾರ ನಡೆದ ಮತದಾನದ ಬಳಿಕ ಹೊರಬಿದ್ದ ಮತಗಟ್ಟೆ ಅಥವಾ ಮತದಾನೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ.

ಕೆಲವು ಸಮೀಕ್ಷೆಗಳು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದರೆ ಇನ್ನು ಕೆಲವು ಕಾಂಗ್ರೆಸ್‌ಗೆ ಬಹುಮತ ನೀಡಿವೆ. ಕೆಲವು ಸಂಸ್ಥೆಗಳು ಮತ್ತು ರಾಷ್ಟ್ರೀಯ ಸುದ್ದಿವಾಹಿನಿಗಳು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ ಎಂದು ವಿಶ್ಲೇಷಿಸಿವೆ

ಟೈಮ್ಸ್‌ –ಚಾಣಕ್ಯ, ರಿಪಬ್ಲಿಕ್‌ ಟಿವಿ ಮತ್ತು ಸಿ–ವೋಟರ್‌ ನಡೆಸಿದ ಸಮೀಕ್ಷೆಗಳು ಬಿಜೆಪಿಗೆ 100–120 ಸ್ಥಾನ ನೀಡಿವೆ.

ಇಂಡಿಯಾ ಟುಡೆ ಟಿ.ವಿ, ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಗಳು ಕಾಂಗ್ರೆಸ್‌ 106 ರಿಂದ 118 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿವೆ.

ಹೆಚ್ಚಿನ ಸಮೀಕ್ಷೆಗಳು ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ., 26–38 ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಪಂಡಿತರು ವಿಶ್ಲೇಷಿಸಿದ್ದಾರೆ.

ಮೇ 15ರಂದು ಬೆಳಿಗ್ಗೆ 8 ಗಂಟೆಗೆ ಮತಎಣಿಕೆ ಕಾರ್ಯ ಆರಂಭವಾಗಲಿದ್ದು ಮಧ್ಯಾಹ್ನದ ವೇಳೆ ಅಂತಿಮ ಫಲಿತಾಂಶ ಹೊರಬೀಳಲಿದೆ

Related Tags: Exite Polls, Karnataka Elections, Hung Assembly, Karavali Karnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ