ಮದುವೆ ಮಂಟಪಕ್ಕೆ ತೆರಳುವ ಮುನ್ನ ವಧುವಿನಿಂದ ಮತದಾನ. ಎಲ್ಲರಿಂದ ಮೆಚ್ಚುಗೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಮತದಾನ ತನ್ನ ದೊಡ್ಡ   ಜವಾಬ್ದಾರಿ ಎಂದರಿತ ಮದುಮಗಳು ಮತಗಟ್ಟೆಗೆ ಬಂದು ಮತದಾನ ಮಾಡಿ ಮದುವೆಗೆ ತೆರಳಿ ಯುವ ಮಾದರಿಯಾಗಿದ್ದಾರೆ.

ಬೊಂದೇಲ್ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮದುಮಗಳು ವಿಯೊಲಾ ಫೆರ್ನಾಂಡಿಸ್ ಅವರು ಮತ ಚಲಾಯಿಸಿ  ಮದುವೆಗಾಗಿ ಬೆಳ್ತಂಗಡಿಗೆ ತೆರಳಿದರು.

ವಿಯೊಲಾ ಅವರೊಂದಿಗೆ ಮನೆಯವರೂ ಬಂದು ಮತ ಚಲಾಯಿಸಿ ಮದುವೆಗೆ ತೆರಳಿದ್ದಾರೆ. ಮದುವೆ ನಿಗದಿಪಡಿಸುವಾಗಲೇ ಮದುವೆಗೆ ತೆರಳುವ ಮುನ್ನ ಮತದಾನ ಮಾಡಿಯೇ ತೆರಳಬೇಕು ಎಂದು ಮನೆಯವರೆಲ್ಲ ಮಾತಾಡಿಕೊಂಡಿದ್ದೆವು ಎಂದು ವಿಯೊಲಾ ಮತದಾನ ಮಾಡಿದ ಬಳಿಕ ಹೇಳಿದರು.

ಸಂಪ್ರದಾಯಿಕ ಕ್ಯಾಥೊಲಿಕ್ ಸಮುದಾಯದ ವಧುವಿನ ಉಡುಪಿನಲ್ಲಿ ವಿಯೊಲಾ ಮತದಾನ ಕೇಂದ್ರದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು.

ಮಡಿಕೇರಿಯಲ್ಲಿಯೂ ವಧುವೊಬ್ಬರು ಮದುವೆಗೂ ಮುನ್ನ ಮತ ಚಲಾಯಿಸಿ ಮತದಾನದ ಮಹತ್ವವನ್ನು ಸಾರಿದರು. ಸಾಂಪ್ರದಾರಿಕ ಕೊಡಗಿನ ಶೈಲಿನ ಉಡುಪುನ್ನು ಧರಿಸಿ ಬಂದಿದ್ದ ವಧು ಬಂಧುಗಳೊಂದಿಗೆ ಮತ ಚಲಾಯಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ