ಬಂಟ್ವಾಳ: ರಮಾನಾಥ ರೈ ಆಪ್ತ ಬಿಲ್ಲವ ಮುಖಂಡನ ಕೊಲೆ ಯತ್ನ
ಘಟನೆಯಲ್ಲಿ ಬಿಜೆಪಿ ನಾಯಕ ಶ್ರೀಕಾಂತ್ ಶೆಟ್ಟಿ ಮತ್ತು ಸಹವರ್ತಿಗಳ ಪಾತ್ರವಿರುವ ಬಗ್ಗೆ ಶಂಕಿಸಿ ಪೊಲೀಸರಿಗೆ ಕಾಂಗ್ರೆಸ್ ನಾಯಕರ ದೂರು.

ಕರಾವಳಿ ಕರ್ನಾಟಕ ವರದಿ

ಬಂಟ್ವಾಳ:
ಸಚಿವ ರಮಾನಾಥ ರೈಯವರ ಆಪ್ತ, ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬಿಲ್ಲವ ಮುಖಂಡರಾದ ಸಂಜೀವ ಪೂಜಾರಿಯವರ ಮನೆಗೆ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳ ತಂಡ ಅವರ ಕೊಲೆ ಯತ್ನ ನಡೆಸಿದ ಕಳವಳಕಾರಿ ಘಟನೆ ವರದಿಯಾಗಿದೆ.

ಘಟನೆಯಲ್ಲಿ ಬಿಜೆಪಿ ನಾಯಕ ಶ್ರೀಕಾಂತ್ ಶೆಟ್ಟಿ ಮತ್ತು ಸಹವರ್ತಿಗಳ ಪಾತ್ರವಿರುವ ಬಗ್ಗೆ ಶಂಕಿಸಿ ಈ  ಬಗ್ಗೆ ಪೊಲೀಸರಿಗೆ ಕಾಂಗ್ರೆಸ್ ನಾಯಕರು ನಾಲ್ಕು ಪ್ರತ್ಯೇಕ ದೂರು ನೀಡಿದ್ದಾರೆ.

ಮೆಲ್ಕಾರ್ ಮಾರ್ನಬೈಲ್ ನಿವಾಸಿ, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷರಾಗಿರುವ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ, ಸಜಿಪಮೂಡ ಗ್ರಾಮದ ಮಿತ್ತಮಜಲು ಸಮೀಪದ ಕುಚ್ಚಿಗುಡ್ಡೆಯ ಬಿಲ್ಲವ ನಾಯಕರಾದ ಸಂಜೀವ ಪೂಜಾರಿ ಬೊಳ್ಳಾಯಿಯವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಅವರ ಪತ್ನಿ ಸೇರ್ಇದಂತೆ ಸಂಸ್ಥೆಯ ಸಿಬಂದಿಗೆ ಮಾರಣಾಂತಿಕ ಹಲ್ಲೆಗೈದು ಕಾರುಗಳಿಗೂ ಹಾನಿ ಎಸಗಿದ್ದಾರೆ.

ಸಂಜೀವ ಪೂಜಾರಿಯವರನ್ನು ಮಧ್ಯರಾತ್ರಿ ಮಾರ್ನಬೈಲಿನ ಮನೆಗೆ ಬಿಟ್ಟು ಸಿಬಂದಿ ತೆರಳುವ ವೇಳೆ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನಲ್ಲಿದ್ದವರ ಮೇಲೆ ಹಲ್ಲೆಗೈದಿದ್ದಾರೆ. ಆ ಬಳಿಕ ಸಂಜೀವ ಪೂಜಾರಿಯವರ ಮನೆಗೆ ನುಗ್ಗಿ ಸಂಜೀವ ಪೂಜಾರಿ ಮತ್ತು ಅವರ ಪತ್ನಿ ಮೇಲೂ ಮಾರಣಾಂತಿಕ ಹಲ್ಲೆಗೈದು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಪೂಜಾರಿ ಅವರ ಸಿಬಂದಿ ಶಂಕರ, ಇಕ್ಬಾಲ್, ಅಮ್ಮಿ ಮೊದಲಾದವರು ತೀವೃ ಗಾಯಗೊಂಡಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಸಚಿವ ರಮಾನಾಥ ರೈ ಮತ್ತು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಿದ್ದು, ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಹೆಚ್ಚುವರಿ ಎಸ್ಪಿ ಸುಜಿತ್, ಗ್ರಾಮಾಂತರ ಠಾಣೆಯ ಅಕ್ಷಯ್, ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಸೈಗಳಾದ ಪ್ರಸನ್ನ ಮತ್ತು ಚಂದ್ರಶೇಖರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
 

Related Tags: Bantwal, Ramanath Rai, Sanjeev Poojary , BJP workers, BJP leader Shrikanth Shetty , Additional SP Sujith, Bantwal rural station officer Akshay, circle inspector Prakash, PSI Chandrashekar
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ