ಚೆಲ್ಲಿದ ಹಿಂದೂಗಳ ಒಂದೊಂದು ಹನಿ ರಕ್ತಕ್ಕೂ ಒಂದೊಂದು ಮತಗಳಿಂದ ಉತ್ತರ: ಸಚಿವ ಹೆಗಡೆ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಕಳೆದ ನಾಲ್ಕೂವರೆ ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಚೆಲ್ಲಿದ ಹಿಂದೂಗಳ ಪ್ರತಿಯೊಂದೂ ರಕ್ತದ ಹನಿಗೂ ಈ ಬಾರಿ ಮತದಾರರು ತಮ್ಮ ಒಂದೊಂದು ಮತಗಳಿಂದ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತ ಕುಮಾರ ಹೆಗಡೆ ಹೇಳಿದರು.

ಕಾರವಾರದಲ್ಲಿ ನಡೆದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 24 ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತನಾದ ಮುಗ್ಧ ಯುವಕ ಪರೇಶ ಮೆಸ್ತಾನನ್ನು ಬಲಿ ತೆಗೆದುಕೊಂಡರು ಎಂದರು.

ಎಲ್ಲಿಯವರೆಗೆ ಈ ಅನ್ಯಾಯ ಸಹಿಸಿಕೊಳ್ಳುವುದು? ಎಲ್ಲಿಯವರೆಗೆ ಹಿಂದೂಗಳ ರಕ್ತ ನೆಲಕ್ಕೆ ಬೀಳುವುದನ್ನು ಕಾಣುತ್ತಿರಬೇಕು? ಎಲ್ಲಿಯವರೆಗೆ ನಮ್ಮ ಧರ್ಮಕ್ಕೆ ಅವಮಾನವಾಗುತ್ತಿರುಬೇಕು? ಎಂದು ಪ್ರಶ್ನಿಸಿದ ಅವರು ಬಿದ್ದಿರುವ ಒಂದೊಂದು ಹನಿ ರಕ್ತಕ್ಕೂ ಒಂದೊಂದು ಮತಗಳಿಂದ ಜನರು ಉತ್ತರಿಸಲಿದ್ದಾರೆ ಎಂದರು.

ಕಳೆದ 70 ವರ್ಷಗಳಿಂದ ಕಾಂಗ್ರೆಸ್ ನಮ್ಮ ದೇಶಕ್ಕೆ ಶಾಪವಾಗಿದೆ. ಕಳೆದ 7 ದಶಕಗಳಲ್ಲಿ ದೇಶವನ್ನು ಲೂಟಿ ಮಾಡಿ ನಷ್ಟ ಹೊಂದಿರುವುದನ್ನು ಯಾವ ಶಬ್ಧಗಳಲ್ಲಿಯೂ ವರ್ಣಿಸಲು ಸಾಧ್ಯವಿಲ್ಲ. ಕಳೆದ 70 ವರ್ಷಗಳಲ್ಲಿ ನಿರ್ಮಾಣಗೊಂಡ ಅದೆಷ್ಟೋ ರಾಷ್ಟ್ರಗಳು ಅದೆಷ್ಟೋ ಅಭಿವೃದ್ಧಿ ಕಂಡಿವೆ. ಆದರೆ ನಮ್ಮ ದುರಾದೃಷ್ಟದಿಂದಾಗಿ ಕಾಂಗ್ರೆಸ್‌ನ ಮನೆಮುರುಕ ರಾಜಕಾರಣದಿಂದಾಗಿ ನಾವು ಇಂದು ಕೂಡಾ ಹಿಂದುಳಿದಿದ್ದೇವೆ ಎಂದರು.

ಕಾಂಗ್ರೆಸ್‌ಗೆ ಕೇವಲ ಮತದಾರರನ್ನು ಖರೀದಿ ಮಾಡಿ ಆಡಳಿತ ನಡೆಸಿ ಗೊತ್ತಿದೆ. ಆದರೆ ಬಿಜೆಪಿ ಪ್ರಾಮಾಣಿಕತೆಯಿಂದ ಮತದಾರರಿಗೆ ಗೌರವ ನೀಡಿ ಮತ ಕೇಳುವ ಮೂಲಕ ಭಾರತೀಯ ಸಭ್ಯತೆಯನ್ನು ಮೆರೆದಿದ್ದೇವೆ. ಹೀಗಾಗಿ ಮತದಾರರು ಇದನ್ನು ಮನಗಂಡು ಭಾರತದ ಸಭ್ಯತೆ, ಸಂಸ್ಕೃತಿ, ಘನತೆ ಹಾಗೂ ಧರ್ಮವನ್ನು ಗೆಲ್ಲಿಸಬೇಕಾಗಿದೆ ಎಂದರು.


ಕಳೆದ 5 ವರ್ಷಗಳಿಂದ ಸಿದ್ಧರಾಮಯ್ಯನವರ ಸರಕಾರ ಅದೆಷ್ಟೋ ಅವಾಂತರಗಳನ್ನು ಸೃಷ್ಠಿಸಿದ್ದು ನಾವು ಪೂಜೆ ಮಾಡುತ್ತಿರುವಂತಹ ದೇವಸ್ಥಾನಗಳನ್ನೂ ಕೂಡ ಬಿಟ್ಟಿಲ್ಲ. ಕಾಂಗ್ರೆಸ್ ಸರಕಾರವು ಈ ದೇವಸ್ಥಾನಗಳಿಗೆ ಭಕ್ತರು ಹಾಕುವ ಕಾಣಿಕೆ ಡಬ್ಬಿಯನ್ನು ಕೂಡ ವಶಪಡಿಸಿಕೊಳ್ಳಲಿಕ್ಕೆ ಹೊರಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಮ್ಮ ದೇವಸ್ಥಾನ ವಶ ಪಡಿಸಿಕೊಳ್ಳುತ್ತೇವೆ ಎಂದು ನೋಟೀಸ್ ನೀಡುವ ಕಾಂಗ್ರೆಸ್ ಸರಕಾರವು ಮುಸಲ್ಮಾನರ ಮಸೀದಿಗಳನ್ನು ಅವರು ಹಾಕುವಂತಹ ಕಾಣಿಕೆಗಳನ್ನು ವಶ ಪಡಿಸಿಕೊಳ್ಳಲು ನಿಮ್ಮಿಂದ ಸಾಧ್ಯವೇ? ಎಂದು ಸಿದ್ಧರಾಮಯ್ಯನವರಿಗೆ ಸವಾಲು ಹಾಕಿದರು.

ಬೇರೆ ಬೇರೆ ಜಾತಿಗಳಲ್ಲಿ ಒಡೆದು ಹೋಗಿರುವ ಕಾರಣ ಹಿಂದೂಗಳಾದ ನಮ್ಮನ್ನು ಕಾಂಗ್ರೆಸ್ರ್ ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ನಾವೆಲ್ಲರೂ ಹಿಂದೂಗಳು. ಜಾತಿ ಯಾವುದಾದರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ.

ಒಂದೇ ಧರ್ಮದ ಹೆಸರನಿಲ್ಲಿ ಹಿಂದೂವಾಗಿ ಮಾತನಾಡುತ್ತ ಭಾರತ ಮಾತಾ ಕೀ ಜೈ ಎನ್ನುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಧರ್ಮದ್ರೋಹಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಆಡಳಿತದಲ್ಲಿ ಇರಬಾರದು. ಅದಕ್ಕೋಸ್ಕರ ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ ಎಂದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಅಕ್ರಮ ವೋಟರ್ ಐಡಿಗಳು ಪತ್ತೆ ಪ್ರಕರಣ: ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್:
http://bit.ly/2G3cWhr
►►ಪ್ರಚಾರದ ವೇಳೆ ಅಪಘಾತ: ಹಾಲಾಡಿ ಆಪ್ತ ಬಿಜೆಪಿ ಮುಖಂಡ ಮೃತ್ಯು: http://bit.ly/2jL31EQ
►►ಮುಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಜನಾರ್ದನ ಪೂಜಾರಿ ಭವಿಷ್ಯ: http://bit.ly/2IrjIDa
►►ಭಟ್ಕಳ ಜಿಹಾದಿಗಳಿಂದ ಗುರುತಿಸುವಂತಾಗಿರುವುದು ಖೇದಕರ: ಯೋಗಿ ಆದಿತ್ಯನಾಥ: http://bit.ly/2FZvjE4
►►ರಾಹುಲ್ ಗಾಂಧಿ ಪ್ರಧಾನಿಯಾಗುವುದನ್ನು ಆಕ್ಷೇಪಿಸುವುದಕ್ಕೇನೂ ಇಲ್ಲ: http://bit.ly/2I0FRIU
►►ಕರ್ನಾಟಕ ಇಲೆಕ್ಷನ್: ಸದ್ಯ ಇಂಧನ ಬೆಲೆ ಏರಿಕೆಗೆ ತಡೆ: http://bit.ly/2rvr9i2
►►ಯೋಗಿ ಪ್ರಚಾರ ಸಭೆಯಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಎಫ್‌ಐಆರ್ ದಾಖಲು: http://bit.ly/2KLf2Gk

Related Tags: Karnataka Elections, Election Campaign, Karwar, Ananth Kumar Hegde, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ