ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ಕೊನೆಯ ಸ್ಥಾನದಲ್ಲಿ ಯಾದಗಿರಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಉತ್ತರ ಕನ್ನಡ ದ್ವಿತೀಯ, ಚಿಕ್ಕೋಡಿ ತೃತೀಯ ಹಾಗೂ ಯಾದಗಿರಿ ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನ, ಬೆಂಗಳೂರು ನಗರ ಜಿಲ್ಲೆಗೆ 22 ನೇ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್, 625ಕ್ಕೆ 625 ಅಂಕವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದು, 624 ಅಂಕಗಳನ್ನು ಎಂಟು ವಿದ್ಯಾರ್ಥಿಗಳು ಪಡೆದಿದ್ದಾರೆ. ಗ್ರಾಮೀಣ ಭಾಗದ ಶೇ.74 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇ.69.38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಉಡುಪಿ-  ಪ್ರಥಮ ಸ್ಥಾನ ಶೇ. 88.18
ಉತ್ತರ ಕನ್ನಡ - ಎರಡನೇ ಸ್ಥಾನ ಶೇ. 88.12
ಚಿಕ್ಕೋಡಿ - ತೃತೀಯ ಸ್ಥಾನ ಶೇ. 87.01
ಯಾದಗಿರಿ-  ಕೊನೆಯ ಸ್ಥಾನ  ಶೇ. 35.54

ಮಧ್ಯಾಹ್ನ ಒಂದು ಗಂಟೆ ನಂತರ ಅಂತರ್ಜಾಲ ತಾಣದಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಮೇ 8ರ ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಪ್ರಕಟಿಸಲಾಗುತ್ತದೆ.

ಈ ಬಾರಿ ಒಟ್ಟು 4,56,103 ಬಾಲಕರು ಮತ್ತು 3,98,321 ಬಾಲಕಿಯರೂ ಸೇರಿದಂತೆ ಒಟ್ಟು 8,54,424 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು.

ಎಸ್ಎಸ್ಎಲ್‌ಸಿ ಮಂಡಳಿಯಿಂದಲೇ ಪರೀಕ್ಷೆ ಬರೆದ ಎಲ್ಲರಿಗೂ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿ ಈ ಪ್ರಯತ್ನ ಮಾಡಲಾಗಿದೆ. ಸುಮಾರು 6 ಲಕ್ಷ ವಿದ್ಯಾರ್ಥಿಗಳು ಎಸ್ಎಂಎಸ್ ಮೂಲಕ ಫಲಿತಾಂಶ ಪಡೆಯಲಿದ್ದಾರೆ.

http://sslc.kar.nic.in ಮತ್ತು http://karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯಬಹುದಾಗಿದೆ. ಶಾಲೆಗಳಲ್ಲಿ ಮೇ 8ರಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►'ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ': ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ:
http://bit.ly/2KGI4Ha
►►ನನ್ನನ್ನು ಬೆಳೆಸಿದ್ದು ಹೆಗಡೆ, ದೇವೇಗೌಡರು ಬೆಳೆಸಿದ್ದಲ್ಲ: ಸಿದ್ದರಾಮಯ್ಯ ಕೆಂಡ: http://bit.ly/2HW5XwT
►►ಮತಕ್ಕಾಗಿ ಕಾಂಗ್ರೆಸ್ ಇತಿಹಾಸವನ್ನು ತಿರುಚುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ: http://bit.ly/2IdWq3B
►►ಸಿದ್ದರಾಮಯ್ಯ ಆಡಳಿತ ಮತ್ತೆ ಬಂದರೆ ಭೂತದ ಕೋಲಗಳು ನಡೆಯದು: ನಳಿನ್ ವಿವಾದಾತ್ಮಕ ಹೇಳಿಕೆ: http://bit.ly/2HWwIgm
►►ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ: ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್: http://bit.ly/2Ild3uk
►►ಮಂಗಳೂರು: ಮೋದಿ ಪ್ರಚಾರ ಸಭೆಗೆ ಆಗಮಿಸಿದ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿಗೆ ಘೇರಾವ್: http://bit.ly/2rnqaR3
►►ಉತ್ತರ ಕನ್ನಡ. ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ ಎಸ್.ಎಸ್ ನಕುಲ್: http://bit.ly/2JSKOQv

Related Tags: SSLC Result 2018, Announce, Udupi First Place, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ