'ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ': ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಕಾಂಗ್ರೆಸ್​ ಮತ್ತು ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಂಡಿದ್ದು, ಇದೀಗ ಜೆಡಿಎಸ್​ 'ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ' ಹೆಸರಿನಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿ ಜೆಡಿಎಸ್ ಕಚೇರಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಈ ಹತ್ತು ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಒಂದೊಂದು ಬಾರಿ ಅವಕಾಶ ನೀಡಿದ್ದೀರಿ. ನನ್ನ 20 ತಿಂಗಳ ಆಡಳಿತವನ್ನು ನೋಡಿ ಈ ಬಾರಿ ನನಗೂ ಒಂದು ಅವಕಾಶ ನೀಡಿ, ವಿಶ್ವವೇ ಕರ್ನಾಟಕದ ಕಡೆ ತಿರುಗಿ ನೋಡುವ ಆಡಳಿತ ನೀಡುತ್ತೇನೆ' ಎಂದು ಕುಮಾರಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಲೋಕಾಯುಕ್ತ ಬಲವರ್ಧನೆ, ಎಸಿಬಿ ನಿರ್ಮೂಲನೆ, ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ, ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡುದಾರರಿಗೆ ಉಚಿತ ವಿದ್ಯುತ್, ಗ್ರಾಮವಾಸ್ತವ್ಯ ಕಾರ್ಯಕ್ರಮ ಮುಂದುವರಿಕೆ, ಡಾ.ವಿಷ್ಣುವರ್ಧನ್ ಸಮಾಧಿ ಸ್ಥಳದ ವಿವಾದ ಬಗೆಹರಿಸುವುದು.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ ಏರಿಕೆ, ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ 5 ಸಾವಿರಕ್ಕೆ ಏರಿಕೆ, 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾಸಿಕ 6 ಸಾವಿರ ರೂಪಾಯಿ ಮಾಸಾಶನ, ವಕೀಲರ ಸಂಘಕ್ಕೆ 100 ಕೋಟಿ ರೂ. ಅನುದಾನ ಮತ್ತು ವಕೀಲರಿಗೆ 5000 ರೂ.ಸ್ಟೇಫಂಡ್ ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ನನ್ನನ್ನು ಬೆಳೆಸಿದ್ದು ಹೆಗಡೆ, ದೇವೇಗೌಡರು ಬೆಳೆಸಿದ್ದಲ್ಲ: ಸಿದ್ದರಾಮಯ್ಯ ಕೆಂಡ:
http://bit.ly/2HW5XwT
►►ಮತಕ್ಕಾಗಿ ಕಾಂಗ್ರೆಸ್ ಇತಿಹಾಸವನ್ನು ತಿರುಚುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ: http://bit.ly/2IdWq3B
►►ಸಿದ್ದರಾಮಯ್ಯ ಆಡಳಿತ ಮತ್ತೆ ಬಂದರೆ ಭೂತದ ಕೋಲಗಳು ನಡೆಯದು: ನಳಿನ್ ವಿವಾದಾತ್ಮಕ ಹೇಳಿಕೆ: http://bit.ly/2HWwIgm
►►ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ: ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್: http://bit.ly/2Ild3uk
►►ಮಂಗಳೂರು: ಮೋದಿ ಪ್ರಚಾರ ಸಭೆಗೆ ಆಗಮಿಸಿದ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿಗೆ ಘೇರಾವ್: http://bit.ly/2rnqaR3
►►ಉತ್ತರ ಕನ್ನಡ. ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ ಎಸ್.ಎಸ್ ನಕುಲ್: http://bit.ly/2JSKOQv

Related Tags: JDS, HD Kumaraswamy, ''ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ'', Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ