ನನ್ನನ್ನು ಬೆಳೆಸಿದ್ದು ಹೆಗಡೆ, ದೇವೇಗೌಡರು ಬೆಳೆಸಿದ್ದಲ್ಲ: ಸಿದ್ದರಾಮಯ್ಯ ಕೆಂಡ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜಕೀಯವಾಗಿ ನನ್ನನ್ನು ಗುರುತಿಸಿ, ಬೆಳೆಸಿದ್ದು, ಮಂತ್ರಿ ಮಾಡಿದ್ದು ರಾಮಕೃಷ್ಣ ಹೆಗಡೆಯವರು. ದೇವೇಗೌಡರು ನನ್ನನ್ನು ಬೆಳೆಸಿದ್ದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಮಾತನಾಡಿದರು.

ಅಧಿಕಾರ ಸಿಗುವುದಿಲ್ಲ ಎಂದು ತಿಳಿದೂ ಜೆಡಿಎಸ್‌ಗೆ ಹೋಗಿರಲಿಲ್ಲವೆ?
ದೇವೇಗೌಡರು ಮುಖ್ಯಮಂತ್ರಿಯಾದವರು, ಪ್ರಧಾನಿಯಾದವರು. ದೇವೇಗೌಡರ ಜೊತೆ ಇಲ್ಲದಿದ್ದಾಗಲೇ ನಾನು ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೆ. ಒಂದು ಬಾರಿ ಸೋತಿದ್ದೆ. ಅದಕ್ಕೆ ದೇವೇಗೌಡರು ಕಾರಣವೆ? ಸ್ವತ: ದೇವೇಗೌಡರೇ ಸೋತಿದ್ದರು.

ಈಗ ನನ್ನನ್ನು ಬೆಳೆಸಿದ್ದೇನೆ ಎಂದು ಹೇಳುತ್ತಿದ್ದಾರೆ. ದಳ ಇಬ್ಬಾಗವಾದಾಗ ಜಾರ್ಜ್ ಫರ್ನಾಂಡಿಸ್ ನನ್ನ ಬೆಂಬಲಕ್ಕೆ ನಿಂತಿದ್ದರು. ನಾನು ಜೆಡಿಯುಗೆ ಹೋಗಬಹುದಿತ್ತಲ್ಲ? ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದರೂ ನಾವು ಜೆಡಿಎಸ್ ಜೊತೆಗೆ ಬರಲಿಲ್ಲವೆ? ಎಂದು ಸಿಎಂ ಪ್ರಶ್ನಿಸಿದರು.

ಪದೇ ಪದೆ ನನ್ನನ್ನು ಬೆಳೆಸಿದೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ವಾಸ್ತವವಾಗಿ ನಾನು, ಜೆ.ಎಚ್. ಪಟೇಲ್, ಪಿಜಿಆರ್ ಸಿಂಧ್ಯಾ, ಬೊಮ್ಮಾಯಿ ಪಕ್ಷ ಕಟ್ಟಿದೆವು. ಅದರ ಪರಿಣಾಮ 1994ರಲ್ಲಿ ಜನತಾದಳ ಅಧಿಕಾರಕ್ಕೆ ಬಂದು ದೇವೇಗೌಡ ಮುಖ್ಯಮಂತ್ರಿಯಾದರು ಎಂದು ಮುಖ್ಯಮಂತ್ರಿ ಏಕವಚನದಲ್ಲೇ ದೇವೇಗೌಡರು ‘ಪದೇ ಪದೇ ಸಿದ್ದರಾಮಯ್ಯ ಅವರನ್ನು ಬೆಳೆಸಿದೆ’ ಎಂಬುದರ ವಿರುದ್ದ ಸಿಎಂ ತಮ್ಮ ಅಸಮಾಧಾನ ಪ್ರಕಟಿಸಿದ್ದಾರೆ.

ಬಿಜೆಪಿ, ಜೆಡಿಎಸ್‌ಗೆ ಕೆಲ ಜಿಲ್ಲೆಗಳಲ್ಲಿ ಅಸ್ತಿತ್ವವೇ ಇಲ್ಲ
ನಾನು ಜೆಡಿಎಸ್ ಬಗ್ಗೆ ಮಾತನಾಡುವುದಿಲ್ಲ. ಆದರೆ ಆ ಪಕ್ಷದ ಬಗ್ಗೆ ಮೃದು ಧೋರಣೆ ಇಲ್ಲ. ಅವರೂ ನಮಗೆ ರಾಜಕೀಯ ಪ್ರತಿಸ್ಪರ್ಧಿಗಳು. ಈ ಚುನಾವಣೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇರುವಂತೆ ಕಂಡರೂ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಕೆಲ ಜಿಲ್ಲೆಗಳಲ್ಲಿ ಅಸ್ತಿತ್ವವೇ ಇಲ್ಲ. ಹಳೆ ಮೈಸೂರು ಭಾಗದ ಏಳು ಜಿಲ್ಲೆಗಳನ್ನು ಹೊರತು ಪಡಿಸಿ ಜೆಡಿಎಸ್‌ಗೆ ಅಸ್ತಿತ್ವ ಇಲ್ಲ. ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಪ್ರಭಾವ ಇಲ್ಲ. ಕಾಂಗ್ರೆಸ್‌ಗೆ ಕೊಡಗು ಹೊರತು ಪಡೆಸಿ ಎಲ್ಲ ಜಿಲ್ಲೆಗಳಲ್ಲಿಯೂ ಎರಡು ಮೂರು ಸ್ಥಾನ ಪಡೆವ ವಿಶ್ವಾಸವಿದೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ಹೇಳಿಕೊಳ್ಳುವಂತಹ ವಾತಾವರಣ ರಾಜ್ಯದಲ್ಲಿ ಇಲ್ಲ ಎಂದರು.


ಸಬ್ ಕಾ ಸಾಥ್ ಎಂಬ ಬಿಜೆಪಿಯಲ್ಲಿ ಮುಸ್ಲಿಮರಿಗೆ ಟಿಕೆಟ್ ಇಲ್ಲ
'ಕಾ ಸಾಥ್ ಸಬ್ ಕಾ ವಿಕಾಸ್' ಎಂಬ ಬಿಜೆಪಿ ಒಬ್ಬ ಮುಸ್ಲಿಮರಿಗೂ ಟಿಕೆಟ್ ನೀಡಿಲ್ಲ. ಸಂವಿಧಾನ ಬದಲಾಯಿಸುತ್ತೇನೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರೂ ಅವರನ್ನು ಸಂಪುಟದಿಂದ ಉಚ್ಚಾಟನೆ ಮಾಡಲಿಲ್ಲ ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಅಮಿತ್ ಶಾ ಜೈನರಾದರೂ ಹಿಂದೂ ಎಂದು ಸುಳ್ಳು ಹೇಳುತ್ತಾರೆ
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಪ್ರಧಾನಿ ಮೋದಿ ಪಕ್ಕದಲ್ಲೇ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಕುಳಿತಿರುತ್ತಾರೆ. ನನ್ನದು 2 ಪ್ಲಸ್ 1 ಎಂದು ಹೇಳಿದ್ದಾರೆ. ಅವರ ಪಕ್ಷದಲ್ಲಿ ಎಷ್ಟು ಜನ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಎಂಬುದು ಗೊತ್ತಿಲ್ಲವೇ ಎಂದರು. ಅಲ್ಲದೆ, ಅಮಿತ್ ಶಾ ಜೈನ ಸಮುದಾಯಕ್ಕೆ ಸೇರಿದ್ದರೂ ಹಿಂದೂ ಎಂದು ಸುಳ್ಳು ಹೇಳಿದ್ದಾರೆ. ನನ್ನನ್ನು ಅಹಿಂದು ಎನ್ನುತ್ತಿದ್ದಾರೆ. ನಾನು ಹಿಂದು ಆದರೆ, ಕೋಮುವಾದವನ್ನು ವಿರೋಧಿಸುತ್ತೇನೆ ಎಂದರು.

ಇದು ಯಡಿಯೂರಪ್ಪ v/s ಸಿದ್ದರಾಮಯ್ಯ ಚುನಾವಣೆ
ಇದು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಚುನಾವಣೆ. ಪ್ರಧಾನಿ ನರೇಂದ್ರ ಮೋದಿ ಭಾಷಣದಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಬಿಜೆಪಿಯಲ್ಲಿ ರಾಜ್ಯ ನಾಯಕರಲ್ಲಿ ಯಾರಿಗೂ ಫೇಸ್ ವ್ಯಾಲ್ಯೂ ಇಲ್ಲದಿರುವುದರಿಂದ ಈ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ನಡೆಯದು ಎಂದಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಮತಕ್ಕಾಗಿ ಕಾಂಗ್ರೆಸ್ ಇತಿಹಾಸವನ್ನು ತಿರುಚುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ:
http://bit.ly/2IdWq3B
►►ಸಿದ್ದರಾಮಯ್ಯ ಆಡಳಿತ ಮತ್ತೆ ಬಂದರೆ ಭೂತದ ಕೋಲಗಳು ನಡೆಯದು: ನಳಿನ್ ವಿವಾದಾತ್ಮಕ ಹೇಳಿಕೆ: http://bit.ly/2HWwIgm
►►ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ: ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್: http://bit.ly/2Ild3uk
►►ಮಂಗಳೂರು: ಮೋದಿ ಪ್ರಚಾರ ಸಭೆಗೆ ಆಗಮಿಸಿದ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿಗೆ ಘೇರಾವ್: http://bit.ly/2rnqaR3
►►ಉತ್ತರ ಕನ್ನಡ. ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ ಎಸ್.ಎಸ್ ನಕುಲ್: http://bit.ly/2JSKOQv
►►ಹರೀಶ್ ಹತ್ಯೆ ನಡೆಸಿದ ಬಿಜೆಪಿಗರಿಗೆ ನಮ್ಮ ಮನೆಗೆ ಪ್ರವೇಶವಿಲ್ಲ: ಪೋಸ್ಟರ್ ಚಳವಳಿ: http://bit.ly/2KCaiDb
►►ಬಿಜೆಪಿಗೆ ಮತ ನೀಡದವರ ಕೈ ಕಾಲು ಕಟ್ಟಿ ಕರೆತಂದು ಮತ ಹಾಕಿಸಿ: ಯಡಿಯೂರಪ್ಪ ಕರೆ! http://bit.ly/2HP1EDf
►►ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೊಡಬೇಕು: ರಾಮಲಿಂಗಾ ರೆಡ್ಡಿ: http://bit.ly/2HSoqtY

Related Tags: Deve Gowda, Siddaramaiah, Amith Shah, Narendra Modi, Kannada News, Karnataka News, Karavali Karnataka, Latest Kannada News, ನನ್ನನ್ನು ಈ ದೇವೇಗೌಡ ಬೆಳೆಸಿಲ್ಲ, ಸಿದ್ದರಾಮಯ್ಯ, ಕನ್ನಡ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ