ಮತಕ್ಕಾಗಿ ಕಾಂಗ್ರೆಸ್ ಇತಿಹಾಸವನ್ನು ತಿರುಚುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

ಕರಾವಳಿ ಕರ್ನಾಟಕ ವರದಿ

ಚಿತ್ರದುರ್ಗ:
ಕಾಂಗ್ರೆಸ್ ಪಕ್ಷ ಮತಕ್ಕಾಗಿ ಧರ್ಮ, ಜಾತಿಗಳನ್ನು ವಿಭಜಿಸಿ ಇತಿಹಾಸವನ್ನು ತಿರುಚುತ್ತಿದೆ. ವೀರ ಮದಕರಿನಾಯಕ, ಓಬವ್ವರನ್ನು ಮರೆತು ಕಾಂಗ್ರೆಸ್‌ನವರು ಮತಗಳಿಗಾಗಿ ಸುಲ್ತಾನರ ಜಯಂತಿ ಮಾಡಲು ಹೊರಟಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಇಲ್ಲಿನ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಪ್ರಧಾನಿ, ಕಾಂಗ್ರೆಸ್‌ ಕೇವಲ ವೋಟ್‌ ಬ್ಯಾಂಕ್‌ಗಾಗಿ ಮಾತ್ರ ಜಯಂತಿಗಳನ್ನು ಆಚರಿಸುತ್ತಿದೆ.

ಮದಕರಿ ನಾಯಕ, ಓಬವ್ವಳನ್ನು ಕೊಂದವರ ಜಯಂತಿ ಆಚರಣೆ ಮಾಡಿ ಚಿತ್ರದುರ್ಗದ ಜನರಿಗೆ ಅವಮಾನ ಮಾಡಿದೆ ಎಂದು ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾವಿಸಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನೂ ಕಾಂಗ್ರೆಸ್‌ ಅವಮಾನ ಮಾಡಿತ್ತು. ಅಂಬೇಡ್ಕರ್‌ ಅವರು ನಮ್ಮನ್ನಗಲಿ ಎಷ್ಟೋ ವರ್ಷಗಳ ನಂತರ ವಾಜಪೇಯಿ ಅವರು ಅವರಿಗೆ ಭಾರತ ರತ್ನ ನೀಡಬೇಕಾಯಿತು, ಕಾಂಗ್ರೆಸ್‌ ಆ ಕೆಲಸ ಮಾಡಲಿಲ್ಲ ಎಂದು ದೂರಿದರು.

ಈ ನೆಲದ ಎಸ್‌.ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅವಮಾನಿಸಿತ್ತು. ನಿಜಲಿಂಗಪ್ಪ ಅವರು ನೆಹರೂ ನೀತಿಗಳ ವಿರುದ್ಧ ಪ್ರಶ್ನೆ ಎತ್ತಿದ್ದಕ್ಕೆ, ಅವರನ್ನು ರಾಷ್ಟ್ರನಾಯಕರಾಗದಂತೆ ತಡೆಯಿತು. ಅಂಬೇಡ್ಕರ್‌ ಅವರನ್ನು ಅವಮಾನಿಸಿದಂತೆ, ದಲಿತ ಪರವಾದ ಕಾಳಜಿ ಹೊಂದಿದ್ದ ನಿಜಲಿಂಗಪ್ಪರನ್ನು ಅವಮಾನಿಸಿತು ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ಈಗ ದಿಗಿಲು ಉಂಟಾಗಿದೆ. ದಲಿತರು, ಹಿಂದುಳಿದವರಿಗೆ ಅವರು ಈಗ ಸುಳ್ಳು ಹೇಳಿ ಮತ ಪಡೆಯುವಂತಿಲ್ಲ. ದಲಿತರ, ಬಡವರ ಕಷ್ಟಗಳು ನನಗೆ ಗೊತ್ತು. ನಾನು ನಿಮ್ಮ ನಡುವಿನಿಂದಲೇ ಬೆಳೆದು ಬಂದವನು. ಆದ್ದರಿಂದ, ನಿಮ್ಮ ಅಭಿವೃದ್ಧಿ ನನ್ನ ಬದ್ಧತೆಯಾಗಿದೆ ಎಂದರು. 

ಇಂದು ಹೆಚ್ಚು ಓದಿದ ಸುದ್ದಿಗಳು
►►ಸಿದ್ದರಾಮಯ್ಯ ಆಡಳಿತ ಮತ್ತೆ ಬಂದರೆ ಭೂತದ ಕೋಲಗಳು ನಡೆಯದು: ನಳಿನ್ ವಿವಾದಾತ್ಮಕ ಹೇಳಿಕೆ:
http://bit.ly/2HWwIgm
►►ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ: ಆರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್: http://bit.ly/2Ild3uk
►►ಮಂಗಳೂರು: ಮೋದಿ ಪ್ರಚಾರ ಸಭೆಗೆ ಆಗಮಿಸಿದ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿಗೆ ಘೇರಾವ್: http://bit.ly/2rnqaR3
►►ಉತ್ತರ ಕನ್ನಡ. ಚುನಾವಣೆಗೆ ಜಿಲ್ಲಾಡಳಿತ ಸಜ್ಜು: ಜಿಲ್ಲಾಧಿಕಾರಿ ಎಸ್.ಎಸ್ ನಕುಲ್: http://bit.ly/2JSKOQv
►►ಹರೀಶ್ ಹತ್ಯೆ ನಡೆಸಿದ ಬಿಜೆಪಿಗರಿಗೆ ನಮ್ಮ ಮನೆಗೆ ಪ್ರವೇಶವಿಲ್ಲ: ಪೋಸ್ಟರ್ ಚಳವಳಿ: http://bit.ly/2KCaiDb
►►ಬಿಜೆಪಿಗೆ ಮತ ನೀಡದವರ ಕೈ ಕಾಲು ಕಟ್ಟಿ ಕರೆತಂದು ಮತ ಹಾಕಿಸಿ: ಯಡಿಯೂರಪ್ಪ ಕರೆ! http://bit.ly/2HP1EDf
►►ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೊಡಬೇಕು: ರಾಮಲಿಂಗಾ ರೆಡ್ಡಿ: http://bit.ly/2HSoqtY

Related Tags: PM Modi, Karnataka, Chitradurga, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ