ಬಿಜೆಪಿಗೆ ಮತ ನೀಡದವರ ಕೈ ಕಾಲು ಕಟ್ಟಿ ಕರೆತಂದು ಮತ ಹಾಕಿಸಿ: ಯಡಿಯೂರಪ್ಪ ಕರೆ!

ಕರಾವಳಿ ಕರ್ನಾಟಕ ವರದಿ

ಬೆಳಗಾವಿ:
ಬಿಜೆಪಿಗೆ ಯಾರು ಮತ ನೀಡುವುದಿಲ್ಲವೋ ಅಂಥವರ ಕೈ ಕಾಲು ಕಟ್ಟಿ ಕರೆತಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಪ್ರಚಾರದ ಸಂದರ್ಭದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಈಗ ಮೈ ಮರೆತು ಸಭೆ ಸಮಾರಂಭಗಳನ್ನೆಲ್ಲಾ ಮಾಡಿಕೊಂಡು ಕುಳಿತುಕೊಳ್ಳಬಾರದು. ಇನ್ನು ಐದಾರು ದಿವಸ ಮನೆಮನೆಗೆ ಹೋಗಿ ಮತದಾರರನ್ನು ಮನವೊಲಿಸಬೇಕಾಗಿದೆ. ನಮಗೆ ಯಾರು ಮತ ನೀಡುವುದಿಲ್ಲ ಅನ್ನಿಸುತ್ತದೆಯೋ ಅವರಿಗೆಲ್ಲಾ ಮನವಿ ಮಾಡಿ. ಮತದಾರರ ಕೈಕಾಲುಕಟ್ಟಿ ಕರೆ ತಂದು ಮತ ಹಾಕಿಸಬೇಕು ಎಂದ ಯಡಿಯೂರಪ್ಪ ಮಹಾಂತೇಶ್ ದೊಡ್ಡಗೌಡರ ಅವರನ್ನು ಗೆಲ್ಲಿಸಿಕೊಡಬೇಕು ಎಂದರು.

ಕಾಂಗ್ರಸ್ ಪಕ್ಷ ಮೂರು ಭಾಗಗಳಾಗಿದೆ. ಖರ್ಗೆ, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಾಯಕರ ನಡುವಿನ ಕಚ್ಚಾಟದಿಂದಲೇ ಕಾಂಗ್ರೆಸ್ ಸೋಲುತ್ತದೆ. ನಮಗೆ ಮತ ನೀಡಿ. ರೈ ಪರ ಸರ್ಕಾರವನ್ನು ನಾವು ನಿಮಗೆ ನೀಡುತ್ತೇವೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೊಡಬೇಕು: ರಾಮಲಿಂಗಾ ರೆಡ್ಡಿ:
http://bit.ly/2HSoqtY
►►ಚುನಾವಣೆಯ ವೇಳೆ ಮಾತ್ರ ಕಾಂಗ್ರೆಸ್‌ಗೆ ಬಡವರ ಬಗ್ಗೆ ಕಾಳಜಿ: ತುಮಕೂರಿನಲ್ಲಿ ಮೋದಿ: http://bit.ly/2HTgZTi
►►ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ: ಭಟ್ಕಳ ಶಾಸಕ ಮಂಕಾಳ ವೈದ್ಯರಿಂದ ಪೊಲೀಸ್ ದೂರು: http://bit.ly/2HVR9KH
►►ಗೋಹತ್ಯೆ ನಿಷೇಧ, ಮಠಗಳಿಗೆ ನಿಧಿ: ಬಿಜೆಪಿ ಪ್ರಣಾಳಿಕೆ ಭರವಸೆ: http://bit.ly/2rnaIVK
►►150ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ: ಸುಕುಮಾರ ಶೆಟ್ಟರಿಗೆ ಶಾಕ್: http://bit.ly/2Ig7nBG
►►ಕನ್ನಡದ ನೆಲದಲ್ಲಿ ಮತಕ್ಕಾಗಿ ಮಹಾರಾಷ್ಟ್ರಕ್ಕೆ ಜೈ ಎಂದ ಗಡ್ಕರಿ: ಕನ್ನಡಿಗರ ಆಕ್ರೋಶ: http://bit.ly/2jxSCwb
►►ಹಾಲಾಡಿಯೊಂದಿಗೆ ಕೈ ಜೋಡಿಸಲಾರೆವು: ಬಿಜೆಪಿಗೆ ಗ್ರಾ.ಪಂ ಅಧ್ಯಕ್ಷ ಸೇರಿ ಹಲವರ ರಾಜೀನಾಮೆ: http://bit.ly/2rk9x8U
►►ಸ್ಕೇಟಿಂಗ್: ಚೀನಾವನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ಕೈಗಾದ ಪುಟಾಣಿಗಳು: http://bit.ly/2HVnWzy

Related Tags: Yeddyurappa, Belgaum, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ