ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೊಡಬೇಕು: ರಾಮಲಿಂಗಾ ರೆಡ್ಡಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಭ್ರಷ್ಟಾಚಾರದ ವಿಷಯದಲ್ಲಿ ಚಿನ್ನದ ಪದಕ ಕೊಡುವುದಾದರೆ ಅದು ಹಿಂದಿನ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತಕ್ಕೆ ಕೊಡಬೇಕು. ಯಡಿಯೂರಪ್ಪ ಅವರ ಭ್ರಷ್ಟಾಚಾರ ಹೆಚ್ಚಾಗಿದ್ದರಿಂದಲೇ ನರೇಂದ್ರ ಮೋದಿಯವರು ಈಗ ಎಲ್ಲಾ ಕಡೆ ಒಬ್ಬರೇ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೆನ್‍ ಪರ್ಸೆಂಟ್ ಸರ್ಕಾರ ಎಂದು ಮೋದಿ ಟೀಕೆ ಮಾಡಿದ್ದಾರೆ. ಆದರೆ, ಅವರು ಮಾಡಿರುವ ಆರೋಪಕ್ಕೆ ದಾಖಲೆಗಳಿಲ್ಲ. ಬಹುಶಃ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ಕಮಿಷನ್ ತೆಗೆದುಕೊಂಡಿದ್ದನ್ನು ಹೇಳುತ್ತಿರಬಹುದು. ನಮ್ಮ ಸರ್ಕಾರ ಯಾವುದೇ ಕಮಿಷನ್ ತೆಗೆದುಕೊಂಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ.

ಬಿಜೆಪಿ ಅವಧಿಯಲ್ಲಿ 16 ಮಂದಿ ಸಚಿವರು, ಶಾಸಕರು ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಅಪರಾಧಗಳಿಗಾಗಿ ಜೈಲಿಗೆ ಹೋಗಿ ಬಂದರು. ನಮ್ಮ ವಿರುದ್ಧ ಅಂತಹ ಒಂದು ಆರೋಪವೂ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಸಮರ್ಥಿಸಿಕೊಂಡರು.

ಮೋದಿ ಸುಳ್ಳು ಹೇಳಿಕೆಗೆ ಚೀನಾ ಪ್ರೇರಣೆ. ಮೋದಿ ಚೀನಾ ದೇಶವನ್ನ ಸುತ್ತಿ ಬಂದಿದ್ದಾರೆ. ಮೋದಿ ‌ಮಾತಿಗೆ ಗ್ಯಾರೆಂಟಿ ಇಲ್ಲ, ವಾರೆಂಟಿಯೂ ಇಲ್ಲ. ಯಾಕೆಂದರೆ ಮೋದಿ ಚೀನಾ ಗೂಡ್ಸ್ ಇದ್ದಂತೆ. ಸುಳ್ಳಿನ ಭಾಷಣಕ್ಕೆ ನೊಬೆಲ್ ಬಹುಮಾನ ನೀಡಬೇಕು. ಸುಳ್ಳು ಹೇಳುವುದರಲ್ಲೇ ಮೋದಿ ನಿರತರಾಗಿದ್ದಾರೆ ಎಂದು ಪ್ರಧಾನಿ‌ ಮೋದಿ ವಿರುದ್ಧ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯವರು ಬೆಂಗಳೂರನ್ನು ಕ್ರೈಂ ಸಿಟಿ ಎಂದಿದ್ದಾರೆ. ಆದರೆ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಕ್ರೈಂನಲ್ಲಿ ಮುಂಚೂಣಿಯಲ್ಲಿದೆ. ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿಯೇ ಕ್ರೈಂ ಹೆಚ್ಚಾಗಿದೆ ಎಂದರು.

ಕರ್ನಾಟಕ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುತ್ತಾರೆ. ಭ್ರಷ್ಟಾಚಾರ ಮಾಡಿದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸಿದ್ದೀರಾ ಎಂದು ಕೇಳುತ್ತಾರೆ. ನೀವು ಉದ್ಯೋಗ ನೀಡುತ್ತೇವೆ ಅಂದಿದ್ದಿರಿ ಕೊಟ್ಟಿದ್ದಿರಾ, ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ, ಡಿಸೇಲ್ ಬೆಲೆ ಏನಾಗಿದೆ ಎಂದು ರಾಮಲಿಂಗಾ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಚುನಾವಣೆಯ ವೇಳೆ ಮಾತ್ರ ಕಾಂಗ್ರೆಸ್‌ಗೆ ಬಡವರ ಬಗ್ಗೆ ಕಾಳಜಿ: ತುಮಕೂರಿನಲ್ಲಿ ಮೋದಿ:
http://bit.ly/2HTgZTi
►►ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ: ಭಟ್ಕಳ ಶಾಸಕ ಮಂಕಾಳ ವೈದ್ಯರಿಂದ ಪೊಲೀಸ್ ದೂರು: http://bit.ly/2HVR9KH
►►ಗೋಹತ್ಯೆ ನಿಷೇಧ, ಮಠಗಳಿಗೆ ನಿಧಿ: ಬಿಜೆಪಿ ಪ್ರಣಾಳಿಕೆ ಭರವಸೆ: http://bit.ly/2rnaIVK
►►150ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ: ಸುಕುಮಾರ ಶೆಟ್ಟರಿಗೆ ಶಾಕ್: http://bit.ly/2Ig7nBG
►►ಕನ್ನಡದ ನೆಲದಲ್ಲಿ ಮತಕ್ಕಾಗಿ ಮಹಾರಾಷ್ಟ್ರಕ್ಕೆ ಜೈ ಎಂದ ಗಡ್ಕರಿ: ಕನ್ನಡಿಗರ ಆಕ್ರೋಶ: http://bit.ly/2jxSCwb
►►ಹಾಲಾಡಿಯೊಂದಿಗೆ ಕೈ ಜೋಡಿಸಲಾರೆವು: ಬಿಜೆಪಿಗೆ ಗ್ರಾ.ಪಂ ಅಧ್ಯಕ್ಷ ಸೇರಿ ಹಲವರ ರಾಜೀನಾಮೆ: http://bit.ly/2rk9x8U
►►ಸ್ಕೇಟಿಂಗ್: ಚೀನಾವನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ಕೈಗಾದ ಪುಟಾಣಿಗಳು: http://bit.ly/2HVnWzy

Related Tags: Karnataka Polls 2018, Ramalinga Reddy, Pressmeet, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ