ಚುನಾವಣೆಯ ವೇಳೆ ಮಾತ್ರ ಕಾಂಗ್ರೆಸ್‌ಗೆ ಬಡವರ ಬಗ್ಗೆ ಕಾಳಜಿ: ತುಮಕೂರಿನಲ್ಲಿ ಮೋದಿ

ಕರಾವಳಿ ಕರ್ನಾಟಕ ವರದಿ

ತುಮಕೂರು:
ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರು ಬಡತನ, ಬಡವರ ಪರವಾಗಿ ಮಾತನಾಡುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಅವರು ಬಡವರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ತುಮಕೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ಸಾಕ್ಷಿ ಬಿಬಿಎಂಪಿಯಲ್ಲಿನ ಮೈತ್ರಿ. ಅಲ್ಲಿ ಕಾಂಗ್ರೆಸ್‌ ಪಕ್ಷದವರನ್ನು ಮೇಯರ್ ಮಾಡಿರುವುದು ಜೆಡಿಎಸ್. ನಿಮ್ಮ ನಡುವೆ ಮೈತ್ರಿ ಇಲ್ಲ ಎಂದರೆ ಅದನ್ನು ಜನರ ಮುಂದೆ ಸ್ಪಷ್ಟವಾಗಿ ಹೇಳಿ ಎಂದು ಪ್ರಧಾನಿ ಮೋದಿ ಸವಾಲೆಸೆದರು.

ಜೆಡಿಎಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಜೆಡಿಎಸ್‌ಅಲ್ಲ. ಜೆಡಿಎಸ್‌ ಯಾವುತ್ತೂ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕು. ಕರ್ನಾಟಕದಲ್ಲಿ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ ಎಂದರು.

ನಾವು ಅಧಿಕಾರಕ್ಕೆ ಬಂದ ಮೇಲೆ ಆಹಾರ ಸಂಸ್ಕರಣ ಘಟಕ ಸ್ಥಾಪಿಸಿದ್ದೇವೆ. 700 ಕೋಟಿಯಿಂದ 1400 ಕೋಟಿಗೆ ಹೆಚ್ಚಿಸಿ ಅನುದಾನ ನೀಡಿದ್ದೇವೆ. ಇದು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಿದ್ದೇವೆ. ರಾಜ್ಯ ಸರ್ಕಾರ ವಿದ್ಯುತ್‌ ವಿಭಾಗದಲ್ಲೂ ಯಾವುದೇ ಕೊಡುಗೆ ನೀಡಿಲ್ಲ. ಇಲ್ಲಿನ ಯುವಕರು ಬುದ್ದಿವಂತರು, ಅವರಿಗೆ ಕೌಶಲ ತರಬೇತಿ ನೀಡಬೇಕಿದೆ. ಆದರೆ ಇಲ್ಲಿನ ಸರ್ಕಾರ ಆ ಕೆಲಸ ಮಾಡುತ್ತಿಲ್ಲ.

ಕರ್ನಾಟಕದಲ್ಲಿ 7 ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೆ 14 ಸಾವಿರ ಕೋಟಿ ರೂ ಅನುದಾನದಲ್ಲಿ ಯೋಜನೆ ಆರಂಭಕ್ಕೆ 836 ಕೋಟಿ ರೂ. ನೀಡಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಬಳಸಿಕೊಂಡಿದ್ದು ಕೇವಲ 12 ಕೋಟಿ. ಉಳಿದ ಹಣವನ್ನು ಬಳಸಿಕೊಳ್ಳದೇ ಹಣವನ್ನು ಕೊಳೆಸುತ್ತಿದೆ. ಭ್ರಷ್ಟಾಚಾರ ತೊಡೆದು ಹಾಕಲು ನಾವು ಅಭಿಯಾನ ಕೈಗೊಂಡಿದ್ದೇವೆ. ಆದರೆ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ತುಮಕೂರಿನ ಜನರಿಗೆ ಕುಡಿಯುವ ನೀರು ಕೊಡಲು ಕಾಂಗ್ರೆಸ್‌ ಸರ್ಕಾರಕ್ಕೆ ಯಾಕೆ ಇನ್ನೂ ಸಾಧ್ಯವಾಗಿಲ್ಲಎಂದು ಪ್ರಶ್ನಿಸಿದ ಪ್ರಧಾನಿ, ಇಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿ ಪೂರ್ಣಗೊಳಿಸಲು ನಾವು ಕ್ರಮ ಕೈಗೊಂಡಿದ್ದೇವೆ. 24 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಸಣ್ಣನೀರಾವರಿ ಯೋಜನೆ ಕಲ್ಪಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ: ಭಟ್ಕಳ ಶಾಸಕ ಮಂಕಾಳ ವೈದ್ಯರಿಂದ ಪೊಲೀಸ್ ದೂರು:
http://bit.ly/2HVR9KH
►►ಗೋಹತ್ಯೆ ನಿಷೇಧ, ಮಠಗಳಿಗೆ ನಿಧಿ: ಬಿಜೆಪಿ ಪ್ರಣಾಳಿಕೆ ಭರವಸೆ: http://bit.ly/2rnaIVK
►►150ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ: ಸುಕುಮಾರ ಶೆಟ್ಟರಿಗೆ ಶಾಕ್: http://bit.ly/2Ig7nBG
►►ಕನ್ನಡದ ನೆಲದಲ್ಲಿ ಮತಕ್ಕಾಗಿ ಮಹಾರಾಷ್ಟ್ರಕ್ಕೆ ಜೈ ಎಂದ ಗಡ್ಕರಿ: ಕನ್ನಡಿಗರ ಆಕ್ರೋಶ: http://bit.ly/2jxSCwb
►►ಹಾಲಾಡಿಯೊಂದಿಗೆ ಕೈ ಜೋಡಿಸಲಾರೆವು: ಬಿಜೆಪಿಗೆ ಗ್ರಾ.ಪಂ ಅಧ್ಯಕ್ಷ ಸೇರಿ ಹಲವರ ರಾಜೀನಾಮೆ: http://bit.ly/2rk9x8U
►►ಸ್ಕೇಟಿಂಗ್: ಚೀನಾವನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ಕೈಗಾದ ಪುಟಾಣಿಗಳು: http://bit.ly/2HVnWzy
►►ಕರ್ನಾಟಕದಲ್ಲೇ ಮಠ ಕಟ್ಟಿಕೊಂಡು ಅಲ್ಲೇ ಉಳಿದು ಬಿಡಿ: ಯೋಗಿಗೆ ಅಖಿಲೇಶ್ ಯಾದವ್ ಸಲಹೆ: http://bit.ly/2HLd378

Related Tags: Karnataka Election, PM Modi, Tumkur, Bjp Rally, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ