ಗೋಹತ್ಯೆ ನಿಷೇಧ, ಮಠಗಳಿಗೆ ನಿಧಿ: ಬಿಜೆಪಿ ಪ್ರಣಾಳಿಕೆ ಭರವಸೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಸಿದ್ಧಪಡಿಸಿರುವ 'ನಮ್ಮ ಕರ್ನಾಟಕಕ್ಕೆ ನಮ್ಮ ವಚನ' ಪ್ರಣಾಳಿಕೆಯನ್ನು ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆ ಮಾಡಿದರು.

ಅಭಿವೃದ್ಧಿಯ ಕರುನಾಡ ಕಟ್ಟುವ ಆಶಯದೊಂದಿಗೆ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿರುವ ಬಿಜೆಪಿ ರಾಜ್ಯದ ಜನತೆಗೆ 605 ಭರವಸೆಗಳನ್ನು ನೀಡಿದೆ.

ಗೋಹತ್ಯೆ ನಿಷೇಧ ಮಾಡುವುದಾಗಿ ಹಾಗೂ ದೇವಸ್ಥಾನಗಳ ಆದಾಯವನ್ನು ಧಾರ್ಮಿಕ ಚಟುವಟಿಕೆಗೆ ಬಳಸುವುದಾಗಿ ವಾಗ್ದಾನ ಮಾಡಿರುವ ಬಿಜೆಪಿ, ಗೋ ಸೇವಾ ಆಯೋಗ ಮತ್ತೆ ಆರಂಭ. ಕೋಮು ಪ್ರಚೋದಿಸುವ ಪಿಎಫ್‌ಐ ಹಾಗೂ ಕೆಎಫ್‌ಡಿ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು.

ದೇವಸ್ಥಾನಗಳ ಪುನರುಜ್ಜೀವನ ಹಾಗೂ ಮಠಗಳ ಮೂಲಸೌಕರ್ಯಕ್ಕಾಗಿ ಆರಂಭಿಕ 500 ಕೋಟಿಯ ಮೂಲನಿಧಿಯೊಂದಿಗೆ 'ದೇವಸ್ಥಾನ ಪುನರುತ್ಥಾನ ನಿಧಿ'ಗೆ ಚಾಲನೆ ಮುಂತಾದವುಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ.

ಮುಖ್ಯಮಂತ್ರಿ ಸ್ಮಾರ್ಟ್‌ಫೋನ್‌ ಯೋಜನೆಯಡಿ ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್‌. ಕಾಲೇಜಿಗೆ ಸೇರುವ ಪ್ರತಿ ವಿದ್ಯಾರ್ಥಿಗೆ 'ಮುಖ್ಯಮಂತ್ರಿ ಲ್ಯಾಪ್‌ಟಾಪ್‌' ಯೋಜನೆಯಡಿ ಉಚಿತ ಲ್ಯಾಪ್‌ಟಾಪ್‌. 'ವಿವಾಹ ಮಂಗಳ' ಯೋಜನೆಯಡಿ ಬಿಪಿಎಲ್‌ ಕುಟುಂಬದ ಯುವತಿಯರ ಮದುವೆಗೆ 25 ಸಾವಿರ ಮತ್ತು 3 ಗ್ರಾಂ ಚಿನ್ನದ ತಾಳಿ. ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ನೀಡುವ ಮೊತ್ತ 2 ಲಕ್ಷಕ್ಕೆ ಹೆಚ್ಚಳ.

ಎಲ್ಲ ನೀರಾವರಿ ಯೋಜನೆಗಳನ್ನು 2023ರೊಳಗೆ ಪೂರ್ಣಗೊಳಿಸಲು 1.5 ಲಕ್ಷ ಕೋಟಿಯ 'ಸುಜಲಾಂ ಸುಫಲಾಂ ಕರ್ನಾಟಕ' ಯೋಜನೆ ಜಾರಿ. ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ಷಟ್ಪಥ 'ಕರ್ನಾಟಕ ಮಾಲಾ' ಹೆದ್ದಾರಿ ನಿರ್ಮಾಣ. ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆ ತ್ರೀ ಫೇಸ್ ವಿದ್ಯುತ್‌ ಪೂರೈಸುವುದಾಗಿ ಬಿಜೆಪಿ ಆಶ್ವಾಸನೆ ನೀಡಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►150ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ: ಸುಕುಮಾರ ಶೆಟ್ಟರಿಗೆ ಶಾಕ್:
http://bit.ly/2Ig7nBG
►►ಕನ್ನಡದ ನೆಲದಲ್ಲಿ ಮತಕ್ಕಾಗಿ ಮಹಾರಾಷ್ಟ್ರಕ್ಕೆ ಜೈ ಎಂದ ಗಡ್ಕರಿ: ಕನ್ನಡಿಗರ ಆಕ್ರೋಶ: http://bit.ly/2jxSCwb
►►ಹಾಲಾಡಿಯೊಂದಿಗೆ ಕೈ ಜೋಡಿಸಲಾರೆವು: ಬಿಜೆಪಿಗೆ ಗ್ರಾ.ಪಂ ಅಧ್ಯಕ್ಷ ಸೇರಿ ಹಲವರ ರಾಜೀನಾಮೆ: http://bit.ly/2rk9x8U
►►ಸ್ಕೇಟಿಂಗ್: ಚೀನಾವನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ಕೈಗಾದ ಪುಟಾಣಿಗಳು: http://bit.ly/2HVnWzy
►►ಕರ್ನಾಟಕದಲ್ಲೇ ಮಠ ಕಟ್ಟಿಕೊಂಡು ಅಲ್ಲೇ ಉಳಿದು ಬಿಡಿ: ಯೋಗಿಗೆ ಅಖಿಲೇಶ್ ಯಾದವ್ ಸಲಹೆ: http://bit.ly/2HLd378
►►ಹೆಮ್ಮಾಡಿ: ದೈವದ ಪಾತ್ರಿ ಮನೆಯಿಂದ ನಗ-ನಗದು ಕಳ್ಳತನ: http://bit.ly/2HLd378
►►ಮಕ್ಕಳ ಸಹಿತ ತಂದೆ-ತಾಯಿ ಆತ್ಮಹತ್ಯೆಗೆ ಶರಣು: http://bit.ly/2watMvf
►►ದುಬೈ: ಸಮುದ್ರದಲ್ಲಿ ಮುಳುಗಿ ಯುವಕ ಸಾವು: http://bit.ly/2jwRCbH
►►ಸಿದ್ಧರಾಮಯ್ಯ ಓರ್ವ ಭ್ರಷ್ಟ ಮುಖ್ಯಮಂತ್ರಿ: ಶಿರಸಿಯಲ್ಲಿ ಯೋಗಿ ಆದಿತ್ಯನಾಥ್: http://bit.ly/2jr8UXu

Related Tags: Karnataka Polls, BJP Promises, Yeddyurappa, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ