ಕನ್ನಡದ ನೆಲದಲ್ಲಿ ಮತಕ್ಕಾಗಿ ಮಹಾರಾಷ್ಟ್ರಕ್ಕೆ ಜೈ ಎಂದ ಗಡ್ಕರಿ: ಕನ್ನಡಿಗರ ಆಕ್ರೋಶ

ಕರಾವಳಿ ಕರ್ನಾಟಕ ವರದಿ

ಬೆಳಗಾವಿ:
ಮರಾಠಿ ಭಾಷಿಕರ ಮತಗಳನ್ನು ಸೆಳೆಯುವುದಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಳಗಾವಿಯ ಕನ್ನಡ ನೆಲದಲ್ಲಿ ಪ್ರಚಾರ ಭಾಷಣದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದಾರೆ. ಇದು ಕನ್ನಡಿಗರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಅವರ ಪ್ರವಾಗಿ ಪ್ರಚಾರ ಮಾಡಲು ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದರು.

ಈ ವೇಳೆ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವಾಗ ಭಾಷಣದ ಆರಂಭದಲ್ಲೆ "ಜೈ ಮಹಾರಾಷ್ಟ್ರ" ಎಂದು ಘೋಷಣೆ ಕೂಗಿದ್ದಾರೆ.

ಬಿಜೆಪಿ ಪ್ರಚಾರಕ್ಕೆ ಬಂದ ನಿತಿನ್ ಗಡ್ಕರಿ ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮತಗಳನ್ನು ಪಡೆಯಲು ಮಹಾರಾಷ್ಟ್ರಕ್ಕೆ ಜಯವಾಗಲಿ ಎಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಹಲವಾರು ಕನ್ನಡ ಸಂಘಟನೆಗಳು ಇದನ್ನು ವಿರೋಧಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಗಡ್ಕರಿ ವಿರುದ್ಧ ಕನ್ನಡಿಗರು ಮುಗಿಬಿದ್ದಿದ್ದಾರೆ. ಗಡ್ಕರಿ ಜೈ ಮಹಾರಾಷ್ಟ್ರ ಎನ್ನುವ ವಿಡಿಯೊ ಕೂಡ ವೈರಲ್ ಆಗಿದೆ.

ಬೆಳಗಾವಿಯಲ್ಲಿ ಆಗಾಗ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಸಂಘರ್ಷ ಏರ್ಪಡುತ್ತಿದ್ದು ಗಡ್ಕರಿಯವರ ಮಹಾರಾಷ್ಟ್ರದ ಜೈಕಾರ ಈ ಸಂಘರ್ಷದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.

ಚಿಕ್ಕೋಡಿ-ಸದಲಗಾ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬರುವ ವಿಧಾನಸಭಾ ಕ್ಷೇತ್ರವಾಗಿದೆ. ಕಾಂಗ್ರೆಸ್ ಗಣೇಶ್ ಹುಕ್ಕೇರಿ ಅವರನ್ನು ಅಭ್ಯರ್ಥಿಯಾಗಿಸಿದರೆ ಬಿಜೆಪಿ ಅಣ್ಣಾ ಸಾಹೇಬ್ ಜೊಲ್ಲೆ ಅವರನು ಕಣಕ್ಕಿಳಿಸಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಹಾಲಾಡಿಯೊಂದಿಗೆ ಕೈ ಜೋಡಿಸಲಾರೆವು: ಬಿಜೆಪಿಗೆ ಗ್ರಾ.ಪಂ ಅಧ್ಯಕ್ಷ ಸೇರಿ ಹಲವರ ರಾಜೀನಾಮೆ:
http://bit.ly/2rk9x8U
►►ಸ್ಕೇಟಿಂಗ್: ಚೀನಾವನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ ಕೈಗಾದ ಪುಟಾಣಿಗಳು: http://bit.ly/2HVnWzy
►►ಕರ್ನಾಟಕದಲ್ಲೇ ಮಠ ಕಟ್ಟಿಕೊಂಡು ಅಲ್ಲೇ ಉಳಿದು ಬಿಡಿ: ಯೋಗಿಗೆ ಅಖಿಲೇಶ್ ಯಾದವ್ ಸಲಹೆ: http://bit.ly/2HLd378
►►ಹೆಮ್ಮಾಡಿ: ದೈವದ ಪಾತ್ರಿ ಮನೆಯಿಂದ ನಗ-ನಗದು ಕಳ್ಳತನ: http://bit.ly/2HLd378
►►ಮಕ್ಕಳ ಸಹಿತ ತಂದೆ-ತಾಯಿ ಆತ್ಮಹತ್ಯೆಗೆ ಶರಣು: http://bit.ly/2watMvf
►►ದುಬೈ: ಸಮುದ್ರದಲ್ಲಿ ಮುಳುಗಿ ಯುವಕ ಸಾವು: http://bit.ly/2jwRCbH
►►ಸಿದ್ಧರಾಮಯ್ಯ ಓರ್ವ ಭ್ರಷ್ಟ ಮುಖ್ಯಮಂತ್ರಿ: ಶಿರಸಿಯಲ್ಲಿ ಯೋಗಿ ಆದಿತ್ಯನಾಥ್: http://bit.ly/2jr8UXu

Related Tags: Nithin Gadkari, Jai Maharashtra, Kannada Pride, Chikkodi, BJP Election Rally, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ