ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ ನಿಧನ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಗುರುವಾರ ತಡರಾತ್ರಿ ನಿಧನರಾದರು.

ಜಯನಗರ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ವಿಜಯಕುಮಾರ್‌ ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ಚುನಾವಣಾ ಪ್ರಚಾರ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 1 ಗಂಟೆಗೆ ವಿಜಯ್ ಕುಮಾರ್ ನಿಧನರಾಗಿದ್ದಾರೆ.

1958ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವಿಜಯ್‌ ಅವರು ಎಚ್‌ಎಎಲ್‌ ಮತ್ತು ಆರ್‌.ವಿ.ಪ್ರೌಢ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಇ ಪದವಿ ಪಡೆದಿದ್ದರು.

1990ರಲ್ಲಿ ಬಿಜೆಪಿ ಸೇರಿದ್ದ ಅವರು, ಪಕ್ಷದ ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ 12 ವರ್ಷಗಳ ಕಾಲ ದುಡಿದಿದ್ದರು. ನಂತರ ನಗರ ಘಟಕ ಅಧ್ಯಕ್ಷರೂ ಆಗಿದ್ದರು.

ಜಯನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಜಯ್ ಕುಮಾರ್ ನಿಧನಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸೇರಿದಂತೆ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. ಇನ್ನು ಶಾಸಕ ವಿಜಯ್ ಕುಮಾರ್‌ ಅವರ ಪಾರ್ಥಿವ ಶರೀರವನ್ನ ಜಯನಗರದ 4ನೇ ಟಿ ಬ್ಲಾಕ್‌ನಲ್ಲಿರುವ ಮನೆಗೆ ತರಲಾಗಿದೆ. ವಿಜಯಕುಮಾರ್‌ ನಿವಾಸದ ಎದುರು ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ.

ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಸಾವನ್ನಪ್ಪಿರುವುದರಿಂದ ಜಯನಗರ ಚುನಾವಣೆ ಮುಂದೂಡಿಕೆ ಆಗುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಘೋಷಣೆ ಹೊರಡಿಸಬೇಕಿದೆಯಷ್ಟೆ.

ಜಯನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರು ಕಣಕ್ಕಿಳಿದಿದ್ದರು. ಜೆಡಿಎಸ್‌ನಿಂದ ಕಾಳೇಗೌಡ ಅವರು ಕಣಕ್ಕಿಳಿದಿದ್ದರು. ಕ್ಷೇತ್ರದ ಮತ್ತೊಬ್ಬ ಪ್ರಮುಖ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಪಕ್ಷೇತರವಾಗಿ ಕಣಕ್ಕಿಳಿದಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಗೋ ಮಾಂಸ ರಫ್ತು ನಿಷೇಧಿಸಲು ಮೋದಿ ವಿಫಲ: ದಯಾನಂದ ಸ್ವಾಮೀಜಿ:
http://bit.ly/2KunkCm
►►ಸಿದ್ದ ರುಪಯ್ಯಾ ಸರ್ಕಾರ ರಾಜ್ಯವನ್ನು ಸಾಲದ ಹೊಳೆಯಲ್ಲಿ ಮುಳುಗಿಸಿದೆ: ಮೋದಿ ವಾಗ್ದಾಳಿ: http://bit.ly/2IdtpF9
►►ಶಾಸಕ ಲೋಬೊಗೆ ನಂದಿಗುಡ್ಡ ಸ್ಮಶಾನದಲ್ಲಿ ವಾಮಾಚಾರ!: http://bit.ly/2Kwd1hr
►►ಬಿರುಗಾಳಿ ದೇಶಕ್ಕೆ ಒಳ್ಳೆಯದಲ್ಲ: ಮೋದಿ ಭಾಷಣಕ್ಕೆ ಪ್ರಕಾಶ್ ರೈ ತಿರುಗೇಟು: http://bit.ly/2joat8x
►►ಐಟಿ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಭೀಮಣ್ಣ ನಾಯ್ಕ: http://bit.ly/2JQhnPl

Related Tags: Jayanagar ,BJP, BN Vijayakumar Dies, Election Rally, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ