ಪರೀಕ್ಷೆ ರಿಸಲ್ಟ್. ಆತ್ಮಹತ್ಯೆ ಯೋಚನೆ ಎಂದೂ ಬೇಡ: ಡಾ. ಪಿ.ವಿ ಭಂಡಾರಿ
ನನ್ನ ತಂದೆ ಹೇಳಿದ್ದು ಇವತ್ತಿಗೂ ನೆನಪಿಗೆ ಬರುತ್ತದೆ. “ನನಗೆ ನಿನ್ನ ಮಾರ್ಕ್ಸ್ ಮುಖ್ಯ ಅಲ್ಲ. ನೀನು ಮುಖ್ಯ. ಮಾರ್ಕ್ಸ್ ಬಂದಷ್ಟು ಬರಲಿ” ಎಂದಿದ್ದರು.

ಡಾ. ಪಿ.ವಿ ಭಂಡಾರಿ

ಇಂದು ಪರೀಕ್ಷೆಯ ರಿಸಲ್ಟ್‌ಗಳು ಬರುತ್ತಾ ಇರುವಾಗ ನನಗೆ ನನ್ನ ಹತ್ತನೇ ತರಗತಿ ನೆನಪಿಗೆ ಬರುತ್ತದೆ. ನಾನು ಶಾಲೆಗೇ ಫಸ್ಟ್ ಬರಬೇಕು ಎಂಬುದು ನನ್ನ ಮುಖ್ಯೋಪಾಧ್ಯಾಯರ ಹಂಬಲವಾಗಿತ್ತು. ಬಹುಶಃ ನನ್ನ ತಾಯಿ ತಂದೆ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು ಏನೋ ಈ ಆಸೆಯನ್ನು. 463/600 ಅಂಕಗಳು ಬಂದವು. ನನಗೂ ಕೂಡ ತುಂಬಾನೇ ಬೇಸರ ಆಗಿತ್ತು. ಆ ಸಮಯದಲ್ಲಿ ನನ್ನ ತಂದೆ ನನ್ನನ್ನು ಕರೆದು ಹೇಳಿದ್ದು ಇವತ್ತಿಗೂ ನನಗೆ ನೆನಪಿಗೆ ಬರುತ್ತದೆ. 'ನನಗೆ ನಿನ್ನ ಮಾರ್ಕ್ಸ್ ಮುಖ್ಯ ಅಲ್ಲ. ನೀನು ಮುಖ್ಯ ಮಾರ್ಕ್ಸ್ ಬಂದಷ್ಟು ಬರಲಿ. ಮಾರ್ಕ್ಸ್‌ನಿಂದ ನಿನ್ನ ಭವಿಷ್ಯ ಎಂದಿಗೂ ನಿರ್ಧಾರವಾಗುವುದಿಲ್ಲ. ಇನ್ನೂ ಸಾಕಷ್ಟು ಪರೀಕ್ಷೆಗಳು ಬರುತ್ತವೆ. ಆಗ ನಿನ್ನನ್ನು ನೀನು ಪ್ರೂ ಮಾಡಿಕೊಳ್ಳಬಹುದು' ಎಂದಿದ್ದರು.

ಇಷ್ಟೆಲ್ಲಾ ಬರೆಯಲು ಕಾರಣ ಈ ಒಂದು ವಿಡಿಯೋ. ಇದನ್ನು ಮಿತ್ರರಾದ ರಾಮ್ ಪ್ರಸಾದ್ ಮತ್ತು ಸುದೀಪ್ ದಾಸ್ 'ಕರಾವಳಿ ಕರ್ನಾಟಕ'ದ ಎಲ್ಲ  ಓದುಗರು ನೋಡಲಿ ಅಂತ ಮಾಡಿದ್ದಾರೆ.

ಪೋಷಕರೇ….ಮಕ್ಕಳು  ಫಸ್ಟ್, ಅವರ ಮಾರ್ಕ್ಸ್ ನೆಕ್ಸ್ಟ್
ರಿಸಲ್ಟ್ ಬರುವಾಗ ಮಾರ್ಕ್ ಕಡಿಮೆ ಬಂದವರು, ಫೇಲಾದವರು, ಎನಿಸಿದಷ್ಟು ಮಾರ್ಕ್ ತೆಗೆಯದವರು ಹಲವು ಬಾರಿ ನಕಾರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಈ ಸಮಯದಲ್ಲಿ ಮನೆಯವರು ಕೂಡ ಈ ಮಕ್ಕಳ ವಿಷಯದಲ್ಲಿ ಸ್ಪಂದಿಸುವಾಗ ಜಾಗ್ರತೆಯಿಂದ ಇರಿ. ನೀನು ಫಸ್ಟ್ ಮಾರ್ಕ್ಸ್ ನೆಕ್ಸ್ಟ್ ಅನ್ನುವ ಮಾತು ನೆನಪಿರಲಿ.

ನನಗೆ ಕಡಿಮೆ ಅಂಕ ಬಂದಾಗ ಯಾರೂ ನಕಾರಾತ್ಮಕವಾಗಿ ಮಾತಾಡಿಲ್ಲ
ಪರೀಕ್ಷೆ ಎನ್ನುವುದು ಹಲವು ಬಾರಿ ಜೀವನದಲ್ಲಿ ನಿರ್ಣಾಯಕ ಅನ್ನುವ ಒಂದು ಬ್ರಾಂತಿ ತಾಯಿ ತಂದೆಯಲ್ಲಿ ಮಕ್ಕಳಲ್ಲಿ ಬಂದುಬಿಟ್ಟಿದೆ. ನಾನು ಈ ಸಮಯದಲ್ಲಿ ಇದರ ಬಗ್ಗೆ ನನ್ನ ಕೆಲವು ಅನುಭವಗಳನ್ನು ಬರೆಯುತ್ತೇನೆ.

ನನಗೆ ಪಿಯುಸಿ ಓದುವಾಗ ಭೌತಶಾಸ್ತ್ರ ಭೌತಶಾಸ್ತ್ರದ ಹಾಗೇ ಇತ್ತು. 62/100 ಮಾರ್ಕುಗಳು ಬಂದಿತ್ತು. ಹಾಗೆಯೇ ಎಂಬಿಬಿಎಸ್ ಓದುವಾಗ ಅಂಗರಚನಾ ಶಾಸ್ತ್ರ ಬಹಳ ಕಷ್ಟವಾಗುತ್ತಿತ್ತು. ಡಿಪ್ಲೊಮಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದರೂ, ಸ್ನಾತಕೋತ್ತರ ಪದವಿಯಲ್ಲಿ ಮೊದಲ ಬಾರಿಗೆ ಫೈಲ್ ಕೂಡ ಆದೆ. ಕಡಿಮೆ ಅಂಕಗಳು ಬಂದಾಗ ನನ್ನ ತಾಯಿ ತಂದೆಯರು ಮತ್ತು ನನ್ನ ಹೆಂಡತಿ ಎಂದಿಗೂ ಕೂಡ ನನಗೆ ನಕಾರಾತ್ಮಕವಾಗಿ ಮಾತನಾಡಿಲ್ಲ. ಇದರಿಂದಾಗಿ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿದೆ.

ನೆನಪಿರಲಿ, ತೆಂಡೂಲ್ಕರ್ ಕೂಡ ಸೊನ್ನೆಗೆ ಔಟಾಗಿದ್ದಾರೆ
ನೆನಪಿರಲಿ ನೂರು ಸೆಂಚುರಿ ಹೊಡೆದ ತೆಂಡೂಲ್ಕರ್ ಕೂಡ ನೂರನೇ ಸೆಂಚುರಿ ಹೊಡೆಯಲು ಸಾಕಷ್ಟು ತಡಕಾಡಿದ್ದಾರೆ. ಹಲವು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಜೀವನ ಎಂಬುದು ಒಂದು ಪರೀಕ್ಷೆಯ ಪಾಸ್ ಫೇಲ್ ಮೇಲೆ ನಿರ್ಧಾರವಾಗಿಲ್ಲ. ಅವಕಾಶಗಳು ಸಾಕಷ್ಟು ಸಿಗುತ್ತವೆ.

ಆತ್ಮಹತ್ಯೆಯ ಬಗ್ಗೆ ಎಂದು ಯೋಚನೆ ಮಾಡಬೇಡಿ. ತಾಯಿ ತಂದೆಯರೇ ನಿಮ್ಮ ಮಕ್ಕಳೆದುರು ಅವರ ಪರೀಕ್ಷಾ ಫಲಿತಾಂಶದ ಬಗ್ಗೆ ಮಾತನಾಡುವಾಗ, ಚರ್ಚಿಸುವಾಗ ಎಚ್ಚರವಿರಲಿ.

ನಕಾರಾತ್ಮಕ ಅಭಿಪ್ರಾಯಗಳು ನಿಮ್ಮ ಮಕ್ಕಳ ಬಾಳನ್ನು ನೋಯಿಸಬಹುದು. ಹುಷಾರ್.

ವಿಡಿಯೋ ನೋಡಿ

Related Tags: Exam Results, Dr. P.V Bhandary, Udupi, ನೀನು ಫಸ್ಟ್, ಮಾರ್ಕ್ಸ್ ನೆಕ್ಸ್ಟ್, Karavalikarnataka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ