ಐಪಿಎಲ್: ಹೈದರಾಬಾದ್ ಬಿಗು ಬೌಲಿಂಗ್ ದಾಳಿಗೆ ಕಿಂಗ್ಸ್ ಇಲೆವೆನ್ ತತ್ತರ

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಿಗು ಬೌಲಿಂಗ್ ದಾಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿಗೆ ಶರಣಾಗಿದೆ.

ಗೆಲ್ಲಲು 133 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ನಿಧಾನಗತಿಯ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 7.5 ಓವರ್‌ಗಳಲ್ಲಿ 55 ರನ್ ಒಟ್ಟು ಸೇರಿಸಿದರು.

26 ಎಸೆತಗಳನ್ನು ಎದುರಿಸಿದ ರಾಹುಲ್ 32 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿದರು. ಹಾಗೆಯೇ ಗೇಲ್ 22 ಎಸೆತಗಳಲ್ಲಿ 23 ರನ್ (1 ಬೌಂಡರಿ, 2 ಸಿಕ್ಸರ್) ಬಾರಿಸಿದರು.

ಪಂಜಾಬ್ ಗೆಲುವಿಗೆ ಅಂತಿಮ 10 ಓವರ್‌ಗಳಲ್ಲಿ 54 ರನ್‌ಗಳ ಅವಶ್ಯಕತೆಯಿತ್ತು. ಆದರೆ ಬಳಿಕ ಬಂದ ಮಯಾಂಕ್ ಅಗರ್ವಾಲ್ (12), ಕರುಣ್ ನಾಯರ್ (13) ಹಾಗೂ ಆ್ಯರೋನ್ ಫಿಂಚ್ ಬೆನ್ನು ಬೆನ್ನಿಗೆ ಪೆವಿಲಿಯನ್ ಸೇರಿಕೊಳ್ಳುವುದರೊಂದಿಗೆ 88 ರನ್‌ಗಳಿಗೆ ಐದು ವಿಕೆಟುಗಳನ್ನು ಕಳೆದುಕೊಂಡ ಪಂಜಾಬ್ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು.

ಬಳಿಕ ಬಂದ ಆಟಗಾರರು ಒಬ್ಬಬ್ಬರಾಗಿಯೇ ಫೇವಿಲಿಯನ್ ಕಡೆ ಹೆಜ್ಜೆ ಇಟ್ಟರು. ಗೆಲ್ಲಲು 13 ರನ್ ಬಾಕಿಯಿರುವಾಗಲೇ ಪಂಜಾಬ್ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.

ಕಳಪೆ ಕ್ಷೇತ್ರರಕ್ಷಣೆಯ ಹೊರತಾಗಿಯೂ ಹೈದರಾಬಾದ್ ತಂಡವನ್ನು 132 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪಂಜಾಬ್ ಯಶಸ್ವಿಯಾಗಿತ್ತು. ಪಂಜಾಬ್ ಫೀಲ್ಡರ್‌ಗಳು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಅತ್ತ ಮಾರಕ ದಾಳಿ ಸಂಘಟಿಸಿದ ಅಂಕಿತ್ 14 ರನ್ ನೀಡಿ ಐದು ವಿಕೆಟುಗಳನ್ನು ಕಿತ್ತು ಮಿಂಚಿದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕರ್ನಾಟಕದ ಚುನಾವಣೆ ಎರಡು ವಿಚಾರಧಾರೆಗಳ ನಡುವೆ ಯುದ್ಧ: ರಾಹುಲ್ ಗಾಂಧಿ:
http://bit.ly/2r1g08q
►►ಉತ್ತರ ಪ್ರದೇಶ ಶಾಲಾ ವ್ಯಾನ್ ದುರಂತ: ಡ್ರೈವರ್ ಕಿವಿಯಲ್ಲಿತ್ತು ಇಯರ್ ಫೋನ್: http://bit.ly/2HYGwHD
►►ಜೈಲಿಗೆ ಹೋದವರು ಭ್ರಷ್ಟಾಚಾರದ ವಿರುದ್ದ ಮಾತನಾಡುತ್ತಿದ್ದಾರೆ: ರಾಹುಲ್ ಗಾಂಧಿ: http://bit.ly/2qZP9K0
►►ಭಾರತದ ಮೊದಲ ಪ್ರಧಾನಿ? ನೆಹರೂ ಹೆಸರು, ಮೋದಿ ಚಿತ್ರ! ಗೂಗಲ್ ಅವಾಂತರ: http://bit.ly/2JrFTWt
►►ಅಪಪ್ರಚಾರವೇ ಬಿಜೆಪಿಗೆ ದೊಡ್ಡ ಬಂಡವಾಳ: ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಡಾಮಿನಿಕ್: http://bit.ly/2JrdRKL
►►ಬಿಜೆಪಿ ಗೆಲ್ಲಿಸಲು ಪಣ ತೊಡಿ: ಪಕ್ಷದ ಅಭ್ಯರ್ಥಿಗಳೊಂದಿಗೆ ನಮೋ ಆ್ಯಪ್ ಮೂಲಕ ಮೋದಿ ಸಂವಾದ: http://bit.ly/2HQgYPu
►►ಫೇಸ್‌ಬುಕ್‌ನಲ್ಲಿ ಕಾಂಗ್ರೆಸ್ ನಾಯಕರ ಪತ್ನಿ ನಿಂದೆ: ಕಾನ್ಸ್‌ಟೇಬಲ್ ಸಸ್ಪೆಂಡ್: http://bit.ly/2I0Twg0
►►ರೈಲಿಗೆ ಢಿಕ್ಕಿಯಾದ ಶಾಲಾ ವಾಹನ: 13 ಮಕ್ಕಳು ದಾರುಣ ಸಾವು: http://bit.ly/2FiZUfp

Related Tags: SRH vs KXIP, Hyderabad, Sunrisers Win, 13 Runs, Sports News, Cricket News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ