ಮಾರಣಕಟ್ಟೆ ಹಬ್ಬ, ನೆಂಟ್ರ್ ಗೌಜ್ ಯಬ್ಬ !

vv9v8v09fq:news_dtls:2;6;7;8;9;10;11;12;13;14;15;16;17;18;19;20;21;22;23;24;25;26;27;28;29;30;31;32;33;34;35;36;37;38;39;40;41;42;43;44;45;46;47;48;49;50;51;52;53;54;55;56;57;58;59;60;61;62;63;64;65;66;67;68;69;70;71;72;73;74;75;76;77;78;79;80;81;82;83;84;85;86;87;88;89;90;91;92;93;94;95;96;97;98;99;100;101;102;103;104;105;106;107;108;109;110;111;112;113;114;115;116;117;118;119;120;121;122;123;124;125;126;127;128;129;130;131;132;133;134;135;136;137;138;139;140;141;142;143;144;145;146;147;148;149;150;151;152;153;154;155;156;157;158;159;160;161;162;163;164;165;166;167;168;169;170;171;172;173;175;176;177;178;179;180;181;182;183;184;185;186;187;188;189;190;191;192;193;194;195;196;197;198;199;200;201;203;204;205;206;207;208;209;210;211;212;213;214;215;216;217;218;219;220;221;222;223;224;225;226;227;228;229;230;231;232;233;234;235;236;237;238;239;240;241;242;243;244;245;246;247;248;249;250;251;252;253;254;255;256;257;258;259;260;261;262;263;264;265;266;267;268;269;270;271;272;273;274;275;276;277;278;279;280;281;282;283;284;285;286;287;288;289;290;291;292;293;294;295;296;297;298;299;300;301;302;303;304;305;306;307;309;310;311;312;313;314;315;316;317;318;319;320;321;322;323;324;325;326;327;328;329;330;331;332;333;334;335;336;337;338;339;340;341;342;343;344;345;346;347;348;349;350;351;352;353;354;355;356;357;358;359;360;361;362;363;364;365;366;367;368;369;370;371;372;373;374;375;376;377;378;379;380;381;382;383;384;385;386;387;388;389;390;391;392;393;394;395;396;397;398;399;400;401;402;403;404;405;406;407;408;409;410;411;412;413;414;415;416;417;418;419;420;421;422;423;424;425;426;427;428;429;430;431;432;433;434;435;437;438;439;440;441;442;443;444;445;446;447;448;449;450;451;452;453;454;455;456;457;458;459;460;461;462;463;464;465;466;467;468;469;470;471;472;473;474;475;476;477;478;479;480;481;482;483;484;485;486;487;488;489;490;491;492;493;494;495;496;497;498;499;500;501;502;503;504;505;506;507;508;509;510;511;512;513;514;515;516;517;518;519;520;521;522;523;524;525;526;527;528;529;530;531;532;533;534;535;536;537;538;539;540;541;542;543;544;545;546;547;548;549;550;551;552;553;554;555;556;557;558;559;560;561;562;563;564;565;566;567;568;569;570;571;572;573;574;575;576;577;578;579;580;581;582;583;584;585;586;587;588;589;590;591;592;593;594;595;596;597;598;599;600;601;602;603;604;605;606;607;608;609;610;611;612;613;614;615;616;617;618;619;620;621;622;623;624;625;626;627;628;629;630;631;632;633;634;636;637;638;639;640;641;642;643;644;645;646;647;649;650;651;652;653;654;655;656;657;658;659;660;661;662;663;664;665;666;667;668;669;670;672;673;674;675;676;677;678;679;680;681;682;683;684;685;686;687;688;689;690;691;692;693;694;695;696;697;698;699;700;701;702;703;704;705;706;707;708;709;710;712;713;714;715;716;717;718;719;720;721;722;723;724;725;726;727;728;729;730;731;732;733;734;735;736;737;738;739;740;741;742;743;744;745;746;747;748;749;750;751;752;753;754;755;756;757;758;759;760;761;762;763;764;765;766;767;768;769;770;771;772;773;774;775;776;777;778;779;780;781;782;783;784;785;786;787;788;789;790;791;792;793;794;795;796;797;798;799;800;801;802;803;804;805;806;807;808;809;810;811;812;813;814;815;816;817;818;819;820;821;822;823;824;825;826;827;828;829;830;831;832;833;834;835;836;837;838;839;840;841;842;843;844;845;846;847;848;849;850;851;852;853;854;855;856;857;858;859;860;861;862;863;864;865;866;867;868;869;870;871;872;873;874;875;876;877;878;879;880;881;882;883;884;885;886;887;888;889;890;891;892;893;894;895;896;897;898;899;900;901;902;903;904;905;906;907;908;909;910;911;912;913;914;916;917;919;920;921;922;923;924;925;926;927;928;929;930;931;932;933;934;935;936;937;938;939;940;941;942;943;944;945;946;947;948;949;950;951;952;953;954;955;956;957;958;959;960;961;962;963;964;965;966;967;968;969;970;971;972;973;974;975;976;977;978;979;980;981;982;983;984;985;986;987;988;989;990;991;992;993;994;995;996;997;998;999;1000;1001;1002;1003;1004;1005;1006;1007;1008;1009;1010;1011;1012;1013;1014;1015;1016;1017;1018;1019;1020;1021;1022;1023;1024;1025;1026;1027;1028;1029;1030;1031;1032;1033;1034;1035;1036;1037;1038;1039;1040;1041;1042;1043;1044;1045;1046;1047;1048;1049;1050;1051;1052;1053;1054;1055;1056;1057;1058;1059;1060;1061;1062;1063;1064;1065;1066;1067;1068;1069;1070;1071;1072;1073;1074;1075;1076;1077;1078;1079;1080;1081;1082;1083;1084;1085;1086;1087;1088;1089;1090;1091;1092;1093;1094;1095;1096;1097;1098;1099;1100;1101;1102;1103;1104;1105;1106;1107;1108;1109;1110;1111;1112;1113;1114;1115;1116;1117;1118;1119;1120;1121;1122;1123;1124;1125;1126;1127;1128;1129;1130;1131;1132;1133;1134;1135;1136;1137;1138;1139;1140;1141;1142;1143;1144;1145;1146;1147;1148;1149;1150;1151;1152;1153;1154;1155;1156;1157;1158;1159;1160;1161;1162;1163;1164;1165;1166;1167;1168;1169;1170;1171;1173;1174;1175;1176;1177;1178;1179;1180;1181;1182;1183;1184;1185;1186;1187;1188;1189;1190;1191;1192;1193;1194;1195;1196;1197;1198;1199;1200;1201;1202;1203;1204;1205;1206;1207;1208;1209;1210;1211;1212;1213;1214;1215;1216;1217;1218;1219;1220;1221;1222;1223;1224;1225;1226;1227;1228;1229;1230;1231;1232;1233;1234;1235;1236;1237;1238;1239;1240;1241;1242;1243;1244;1245;1246;1247;1248;1249;1250;1251;1252;1253;1254;1255;1256;1257;1258;1259;1260;1261;1262;1263;1264;1265;1266;1267;1268;1269;1270;1271;1272;1273;1274;1275;1276;1277;1278;1279;1280;1281;1282;1283;1284;1285;1286;1287;1288;1289;1290;1291;1292;1293;1294;1295;1296;1297;1298;1299;1300;1301;1302;1303;1304;1305;1306;1307;1308;1309;1310;1311;1312;1313;1315;1316;1317;1318;1319;1320;1321;1322;1323;1324;1325;1326;1327;1328;1329;1330;1331;1332;1333;1334;1335;1336;1337;1338;1339;1340;1341;1342;1343;1344;1345;1346;1347;1348;1349;1350;1351;1352;1353;1354;1355;1356;1357;1358;1359;1360;1361;1362;1363;1364;1365;1366;1367;1368;1369;1370;1371;1372;1373;1374;1375;1376;1377;1378;1379;1380;1381;1382;1383;1384;1385;1386;1387;1388;1389;1390;1391;1392;1393;1394;1395;1396;1397;1398;1399;1400;1401;1402;1403;1404;1405;1406;1407;1408;1409;1410;1411;1412;1413;1414;1415;1416;1417;1418;1419;1420;1421;1422;1423;1424;1425;1426;1427;1428;1429;1430;1431;1432;1433;1434;1435;1436;1437;1438;1439;1440;1441;1442;1443;1444;1445;1446;1447;1448;1449;1450;1451;1452;1453;1454;1455;1456;1457;1458;1459;1460;1461;1462;1463;1464;1465;1466;1467;1468;1469;1470;1471;1472;1473;1474;1475;1476;1477;1478;1479;1480;1481;1482;1483;1484;1485;1486;1487;1488;1489;1490;1491;1492;1493;1494;1495;1496;1497;1498;1499;1500;1501;1502;1503;1504;1505;1506;1507;1508;1509;1510;1511;1512;1513;1514;1515;1516;1517;1518;1519;1520;1521;1522;1523;1524;1525;1526;1527;1528;1529;1530;1531;1532;1533;1534;1535;1536;1537;1538;1539;1540;1541;1542;1543;1544;1545;1546;1547;1548;1549;1550;1551;1552;1553;1554;1555;1556;1557;1558;1559;1560;1561;1562;1563;1564;1565;1566;1567;1568;1569;1570;1571;1572;1573;1574;1575;1576;1577;1578;1579;1580;1581;1582;1583;1584;1585;1586;1587;1588;1589;1590;1591;1592;1593;1594;1595;1596;1597;1598;1599;1600;1601;1602;1603;1604;1605;1606;1607;1608;1609;1610;1611;1612;1613;1614;1615;1616;1617;1618;1619;1620;1621;1622;1623;1624;1625;1626;1627;1628;1629;1630;1631;1632;1633;1634;1635;1636;1637;1638;1639;1640;1641;1642;1643;1644;1645;1646;1647;1648;1649;1650;1651;1652;1653;1654;1655;1656;1657;1658;1659;1660;1661;1662;1663;1664;1665;1666;1667;1668;1669;1670;1671;1672;1673;1674;1675;1676;1677;1678;1679;1680;1681;1682;1683;1684;1685;1686;1687;1688;1689;1690;1691;1692;1693;1694;1695;1696;1697;1698;1699;1700;1701;1702;1703;1704;1705;1706;1707;1708;1709;1710;1711;1712;1713;1714;1715;1716;1717;1718;1719;1720;1721;1722;1723;1724;1725;1726;1727;1728;1729;1730;1731;1732;1733;1734;1735;1736;1737;1738;1739;1740;1741;1742;1743;1744;1745;1746;1747;1748;1749;1750;1751;1752;1753;1754;1755;1756;1757;1758;1759;1760;1761;1762;1763;1764;1765;1766;1767;1768;1769;1770;1771;1772;1773;1774;1775;1776;1777;1778;1779;1780;1781;1782;1783;1784;1785;1786;1787;1788;1789;1790;1791;1792;1793;1794;1795;1796;1797;1798;1799;1800;1801;1802;1803;1804;1805;1806;1807;1808;1809;1810;1811;1812;1813;1814;1815;1816;1818;1819;1820;1821;1822;1823;1824;182

ಭಾಸ್ಕರ ಬಂಗೇರಾ
ಚೀ ಬದೆಗ್ ಕೊಯ್ಲ್ ಮುಗ್ಸದ್ ಗೆದ್ದಿ ಒಣಗಕರ್ ಇಲ್ಲ ಆಚೀ ಬದೆಗ್ ಯಾವ್ ಹಬ್ಬ ಯೆಗಳಿಕ್ ಅಂದ್ ಲೆಕ್ಕ ಹಾಕುಕ್ ಶುರು ಆತ್ತ್. ಲೆಕ್ಕ ಯಂತಕ್ ಅಂದ್ರೆ ನಾಕೈದ್ ತಿಂಗಳ್ ಬಿದ್ದ್ ಮಳಿಗೆ ಮನಿ ಕಣುವೆಲ್ಲ ಹರು ಮಗಿನ್ ಕೈಯಂಗ್ ಸಿಪ್ಪಿ ಒಚ್ಚದ್ ಗಳತ್ ಮಾಯಿನ್ ಹಣ್ಣ್ ಸಿಕ್ರ್ ಯಂತ ಆತ್ತ್ ಹಾಂಗ್ ಆಯಿರತ್. ಹಬ್ಬಕ್ ಕಿಚ್ಚಿಡದ್ ನೆಂಟರನ್ನೆಲ್ಲ ಕರಿಕಲೆ ಹಾಂಗಾಯಿ ಅವ್ರ್ ಹಬ್ಬಕ್ ಮನಿಗ್ ಬಪ್ಪತಿಗ್ ಕಣ ಸರಿ ಮಾಡದೆ ಇಪ್ಪುಕ್ ಆತ್ತಾ. ಗೆದ್ದೆಗ್ ಹೊಂಡ ತೋಡಿ ಗನ ಮಣ್ಣ್ ತೆಗದ್ ಆದನ್ ತಕ ಬಂದ್ ಕಣಕ್ ಹಾಕಿ ಸಮ ಮಾಡಿ ಅದರ್ ಮೇಲ್ ಗುಡ್ಸುಕ್ ಸಗಣಿ ಹುಡ್ಕುದ್. ಮನೆಗ್ ದೆನು ಇದ್ರೆ ತೊಂದ್ರಿ ಇಲ್ಲ. ಇಲ್ದಿರ್ ಅವ್ರಿವ್ರ್ ಮನಿಗ್ ಹೊಯ್ ಸಗಣಿ ತಕ ಬಂದ್ ಅದು ಸಾಲ್ದಿರೆ ಗೆದ್ದಿಗ್ ಮೇಯುಕ್ ಬಂದ್ ದೆನ ಸಗಣಿ ಹಾಕುದ್ ಕಾದ್ ಅದನ್ ಹಳಿ ಪ್ಲಾಸ್ಟಿಕ್ ಬಾಲ್ದಿಗ್ ತುಂಬ್ಕ ಬಂದ್ ಮಣ್ಣ್ ಒಣದ್ ಕಣದ್ ಮೇಲ್ ಗುಡ್ಸುದ್. ಹ್ವಾಯ್ ಹೊಸ್ತಾಯಿ ಕಣಕ್ ಹಾಕದ್ ಮಣ್ಣ್ ರಗ್ಳಿ ಇಲ್ದೆ ಒಣಗತ್ ಅನ್ಕಂಡ್ರಿಯಾ? ಇಲ್ಲಪಾ. ಹಸಿ ಕಣದ್ ಮೇಲ್ ಮನಿ ಮಕ್ಕಳ್ ಓಡಾಡುದ್, ನಾಯಿ, ಬೆಕ್ಕ್, ಕೋಳಿ ಹಿಂಡೆಲ್ಲ ಓಡಾಡುದ್. ಅದನ್ ಮನಿ ಹೆಂಗಸರ್ ಮಂಡಗಾಲ್ ಹಯ್ಕ ಬೈತ ವಾಪಸ್ ವರುದ್. ಆ ರಗ್ಳಿಯಲ್ಲ ಇಪ್ಪುದೆ ಬಿಡಿ.  ಮನಿ ಕಣ ತಯಾರ್ ಆಯ್ತ್ ಹಬ್ಬಕ್ ಹ್ವಾಪ ಬನಿ.

ಊರಂಗೆ ಕೊಡಿ ಹಬ್ಬ ಮುಗದ್ ಸ್ವಲ್ಪ ದಿನ ಬಿಟ್ರ್ ಮೇಲ್ ಬಪ್ಪು ದೊಡ್ಡ್ ಹಬ್ಬ ಕ್ರಿಸ್ಮಸ್. ಅದಾಯಿ ಇನ್ ಸ್ವಲ್ಪ ದಿನ ಆರ್ ಕೂಡ್ಲೆ ಇಪ್ಪು ದೊಡ್ಡ್ ಹಬ್ಬ ಅಂದ್ರೆ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ್ ಹಬ್ಬ. ಅದ್ ಮುಗದ್ ಕೂಡ್ಲೆ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ್ ಹಬ್ಬ. ಎರಡು ಹಬ್ಬ ಬಾರಿ ಜೋರಿರತ್. ನಂಬದರ್, ನೆಂಟರ್, ಪರ ಊರಂಗ್ ಇಪ್ಪು ಮನಿಯರ್, ಹರಕಿ ತಿರ್ಸುವರ್ ಅಂದೇಳಿ ಹಬ್ಬದ್ ಗುಡಿಯಂಗ್ ಅಷ್ಟೇ ಅಲ್ಲ ಊರ್ ತುಂಬಾ ಕಾಲ್ ಮೆಟ್ಕ ಹ್ವಾಪಷ್ಟ್ ಜನುವೆ. ಅಮೃತೇಶ್ವರಿ ಹಬ್ಬ ಅಂದ್ರ್ ಕೂಡ್ಲೆ ಕೋಟ, ಮಣೂರ್, ಗಿಳಿಯಾರ್, ಪಡುಕೆರೆ, ಕೋಡಿ, ಪಾರಂಪಳ್ಳಿ, ತೆಕ್ಕಟ್ಟಿ, ಹಂದಟ್ಟ್, ಕದ್ರಿಕಟ್ಟು, ಬಾರಿಕೆರಿ ಹೀಂಗೆ ಎಲ್ಲ ಬದೆಗು ಹಬ್ಬಕ್ ಓಡಾಡುವರೆ ಕಣ್ಣಿಗ್ ಕಾಂಬುಕ್ ಸಿಕ್ತ್ರ್. “ಹಲವು ಮಕ್ಕಳ ತಾಯಿ” ದೇವಸ್ಥಾನ ನಂಬದರ್ ಬೇರೆ ಊರಂಗು ಇದ್ರ್.

ನಂಬದರ್ ಮತ್ತ್ ಊರರ್ ಹಬ್ಬಕ್ ಐದಾರ್ ದಿನ ಇಪ್ಪತಿಗೆ ದೇವ್ರ್ ಕೆಲ್ಸ ಇದ್ರೆ ಗೌಲ್ ಬಿಡುದ್ ವಾಡಿಕಿ. ಈ ಗೌಲ್ ಬಿಡುದ್ ಬಾರಿ ಹಿರ್ಗಲ್ ಮತ್ತ್ ಗಮ್ಮತಿನ್ ಕೆಲ್ಸ ಹ್ವಾಯ್. ಜಾಸ್ತಿ ಗೌಲ್ ಕಾಯಸ್ ಮಾಡು ಮನಿ ಗಂಡ್ ಮಕ್ಕಳಿಗೆ ಬಾರಿ ಕಷ್ಟ ಗೌಲ್ ಬಿಟ್ಟ್ ಇಪ್ಪುದ್. ನ್ಯಾಲ್ಗಿ ಗಿಂಡುಕ್ ಶುರು ಆರ್ ಕೂಡ್ಲೆ ಸಾಯಿಂಕಾಲ ಹಗುರ ಮೆಟ್ಟಿನ್ ಚಂಪಟಿ ಕಾಲಿಗ್ ಕೊಳಸ್ಕ ಹೊರಡ್ಕರಿಲ್ಲ ಮನೆಗ್ ಇಪ್ಪು ಮಾವುನೊ, ಚಿಕ್ಕಪ್ನೋ ಗೆಂಡಿ ಜೋರ್ ಮಾಡ್ಕಂಡ್ “ದೇವ್ರ್ ಕೆಲ್ಸಕ್ ಗೌಲ್ ಬಿಟ್ಟಿತ್, ಎಲ್ಲಾರು ಮಟ್ಟಿ ದ್ವಾಸಿ ತಿನ್ಕ ಬಂದದ್ ಗುತಾರೆ ಇತ್ತಲೇ ಗ್ವಾಂಕಿ ಮೇಲ್ ಕಾಲಿಟ್ಟ್ ನ್ಯಾಲ್ಗಿಗ್ ದಬ್ಣ ಸುರಿತೆ" ಅಂದ್ ಹೆದ್ರುಸುದ್. ಈ ಮಕ್ಕಳ್ ಇನ್ನು ಹುಶಾರಿನವ್. ಗೂಡಂಗಡಿಯಗೆ ಹೊಕ್ಕಂಡ್ ಆಮ್ಲೆಟ್ ತಿಂದ್ ಮನಿಗ್ ಬಪ್ಪತಿಗ್ ಹೋಟ್ಲಗ್ ಮದ್ಯಾಹ್ನ ಮಾಡದ್ ಚಪ್ಪಿ ಬಟಾಟಿ ಪೊಡಿ ಬಾಯಿಗ್ ಹಯ್ಕ ಜಗಿತ ಬಪ್ಪುದ್. ಮನಿ ನಾಯಿಗೂ ಮಟ್ಟಿ ವಾಸ್ನಿ ಬತ್ತಿಲ್ಲ. ಹಸಿ ಕಳ್ಳ ಅಂಬುದ್ ಹೀಂಗಿನರಿಗೆ.

ಗೆಂಡದ್ ರಾತ್ರಿ ಆರ್ಕೆಷ್ಟ್ರಾ ಬಾರಿ ಇರತ್. ಹಬ್ಬದ್ ಕಾರ್ಯಕ್ರಮ ಆತಿಪತಿಗ್ ಮೈಕ್ ಹಿಡ್ಕ ಓಡಾಡು ಬೋಟಿನ್ ಸಾವಕಾರ್ರ್, ಹೊಟ್ಲ್ ಯಜಮಾನ್ರ್ ಉಸ್ತುವಾರಿನ್ ನೀವು ಕಣ್ಣಾರೆ ಕಂಡೆ ಕುಶಿ ಪಡ್ಕ್. ಗಾಳಿ ಅಂಗಡಿ ಜಡ್ದಂಗೆ ನೆಡು ಕೋಳಿಪಡಿಗು ಪ್ರೇಕ್ಷಕರ್ ಸುಮಾರ್ ಇದ್ರ್. ಗಾಳಿ ಅಂಗಡಿ ಅಂದ್ರ್ ಆಲ್ ಗಾಳಿ ಮಾರ್ತಿದ್ರ್ ಅಂದೇಳಿ ಅಲ್ಲ ಮರ್ರೆ . ಆಗಿನ್ ಕಾಲ್ದಂಗೆ ಆ ಜಾಗದಂಗೆ ಸಿಕ್ಕಾಪಟ್ಟಿ ಗಾಳಿ ಮರ ಇದ್ದಿತ್. ಈ ಮಾರಿಬಲಿಗ್ ಹ್ವಾಪರ್ ಇದೆ ಜಾಗದಂಗ್ ಬಂದ್ ಕಳ್ಳ್ ಕುಡು ರಿವಾಜ್ ಇದ್ದಿತ್ ಅಂಬ್ರ್. ಅವ್ರಿಗೆ ಒಂತರಾ ಈಗಿನ್ ಕಾಲದ್ "ಕಾಫಿ ಡೇ" ಇದ್ದಂಗೆ ಆ ಜಾಗ. ಇವ್ರ್ "ಎ ಲೊಟ್ ಕ್ಯಾನ್ ಹ್ಯಾಪನ್ ಓವರ್ ಎ ಕಪ್ ಆಪ್ ಕಾಫಿ" ಅಂದ್ರೆ ಅವ್ರ್ "ಲ್ವಾಟಿ ಇಲ್ದಿರ್ ಕ್ಯಾನಗೆ ಹುಳಿ ಕಳ್ಳ್ ಕುಡಿಕ್" ಅಂತಿದಿರ ಕಾಂತ್ !

ಕಂಚಿನಕೊಡ್ಲು, ನೈಕಂಬ್ಳಿ, ಶಾರ್ಕೆ, ನಂದ್ರೋಳಿ, ಬೆಳ್ಳಾಲ, ಹಿಜಾಣ , ಇಡೂರು, ಕೆರಾಡಿ , ಹೊಸೂರು, ಕುಂಜ್ಞಾಡಿ.. ಹೌದೌದ್ ನಾನ್ ಕುಂದಾಪ್ರದಿಂದ ಚಿತ್ತುರಿಗ್ ಹೊರ್ಟಿದೆ ನೀವ್ ಬತ್ರಿಯಾ. ಬಪ್ಪು ಹದಿನಾಲ್ಕಕ್ಕೆ ಮಾರಣಕಟ್ಟೆ ಹಬ್ಬ ಅಂಬ್ರ್ ಹಾಂಗಾಯಿ ಅಲ್ಲಿಗ್ ಹೋಯಿ ದೇವ್ರಿಗ್ ಕೈ ಮುಕ್ಕ ಮತ್ತ್ ವಾಪಸ್ ಕುಂದಾಪ್ರಕ್ ಬಪ್ಪ ಅಕಾ. ದೇವಿ ಮೂಕಾಂಬಿಕೆ ರಾಕ್ಷಸ ಮೂಕಾಸುರನ್ನ ಕೊಂದ್ ಜಾಗುವೆ ಈ ಮಾರಣಕಟ್ಟೆ ಅಂಬ್ರ್. ಆಮೇಲೆ ಮೂಕಾಸುರ ದೇವಿ ಮೂಕಾಂಬಿಕೆಯಿಂದ ವರ ತಕಂಡ್ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ಇದ್ದು ಜನರನ್ನ ಕಾಪಡ್ತಾ ಇದ್ದ ಅಂದೇಳಿ ನಮ್ಮನಿ ಅಜ್ಜಿ ಹೇಳದ್ ನೆನಪ್. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ್ ಹಬ್ಬಕ್ಕೆ ಹೋಯಿ ಹಣ್ಕಾಯಿ ಮಾಡ್ಸಿ, ಶಾಮಂತಿ ಹೂಗ್ ದೆವ್ರಿಗ್ ಒಪ್ಸಿ ಬರ್ದೆ ಇಪ್ಪರ್ ಕುಂದಾಪ್ರ, ಹೆಮ್ಮಾಡಿ, ಬೈಂದೂರ್ ಬದೆಗ್ ಬಾರಿ ಕಮ್ಮಿ ಜನ. ಮಾರಣಕಟ್ಟೆ ಹಬ್ಬದ್ ಹೊತ್ತಿಗೆ ಸಿಕ್ಕಾಪಟ್ಟಿ ಶಾಮಂತಿ ಹೂಗ್ ಹೆಮ್ಮಾಡಿ ಬದೆಗ್ ಬೆಳಿತ್ರ್. ಅದ್ರಂಗು ಹೆಮ್ಮಾಡಿ ಪ್ಯಾಟಿಯಿಂದ ಒಳಗ್ ಹ್ವಾರೆ ಕಟ್ಟ್ ಅಂದೇಳಿ ಒಂದ್ ಚಣ್ ಊರ್ ಸಿಕ್ಕತ್. ಆಲ್ ಎಲ್ ಕಂಡ್ರು ಶ್ಯಾಮಂತಿ ಹೂಗಿನ್ ಗಿಡ ನೆಟ್ಟದ್ ಗೆದ್ದಿ ಕಾಂಬುಕ್ ಸಿಕ್ಕತ್. ಗೆದ್ದಿಯಿಡಿ ಅರಳದ್ ಶಾಮಂತಿ ಹೂಗನ್ ದೂರ್ ನಿತ್ಕ ಕಂಡ್ರೆ ಮದ್ರಂಗಿ ದಿನ ಮದ್ಮಗಳ್ ಸೊಡ್ಡಿಗ್ ಉದ್ದುಕ್ ಅರ್ಶಿನನ್ ಗೆದ್ದಿ ತುಂಬ ಕಯ್ಡಿ ಇಟ್ಟಿರೋ ಎನೋ ಅಂಬಂಗ್ ಇರತ್ತ್.

ಮಾರಣಕಟ್ಟಿ ಹಬ್ಬಕ್ ಹ್ವಾದಲ್ ಹ್ವಾಯ್ ಶಾಮಂತಿ ಹೂಗ್ ಮಾರಿಗೆಷ್ಟ್ ಅಂದ್ ಹೂಗ್ ಮಾರುವರನ್ ಕೆಂಬುದ್ ಮಾಮೂಲಿ. ಹಬ್ಬದ್ ಗುಡೆಗ್ ಕಣ್ಣ್ ಬ್ಯಾಳಿನ್ ಯಾವ್ ಬದಿಗ್ ತಿರಸ್ರು ಶ್ಯಾಮಂತಿ ಹೂಗ್ ಮಾರುವರೆ. ಮತ್ತ್ ಘಮಗುಟ್ಟು ವಾಲ್ ಬೆಲ್ಲ ಮಾರುವರು ಸುಮಾರ್ ಜನ ದೇವಸ್ಥಾನಕ್ ಹ್ವಾಪು ದಾರೆಗ್ ಸಿಕ್ತ್ರ್. ಆರೇ ಹಣ್ಕಾಯಿ ಮಾಡ್ಸಿ ಹೆರ್ಗ್ ಬಂದ್ ಮೇಲೆ ಹಯ್ಕ ಬಂದ್ ಮೆಟ್ಟ್ ಹುಡ್ಕುದ್ ಮಾತ್ರ ಮಂಡಿ ನೋವಿನ್ ಕೆಲ್ಸ ಮರ್ರೆ. ಹೌದೆ ಚಿಪ್ಪನ್ ಹಿಂಡ್ ಜನ. ದರ್ಲಿ ರಾಶಿ ಬಿದ್ದಂಗ್ ಇರತ್ ಮೆಟ್ಟಿನ್ ಚಂಪಟಿ ರಾಶಿ. ಇನ್ ಹಬ್ಬದ್ ಗುಡೆಗ್ ತಿಂಡಿ, ಆಟದ್ ಸಾಮನ್ ಎಲ್ಲ ಮಾರುದ್ ಮಾಮೂಲಿ ಬಿಡಿ. ಒಳಗೊಳಗ್ ಗರ್ ಗರ್ ಮಂಡ್ಲುವು ಇರತ್ತ್. ಮದಿ ಆಯಿ ಮೂರ್ ಮಕ್ಕಳ್ ಆರು ತೊಟ್ಲ್ ಆಡುವತಿಗೆ ಮಣ್ಣ್ ಗೋರಿ ಬಿಸಾಡುವರನ್ನು ನಾವ್ ಕಾಣಲಕ್. ಇರ್ಲಿ ವರ್ಷಕ್ ಒಂದ್ ಸಲ ಬಪ್ಪು ಊರ್ ಹಬ್ಬಕ್ ಗಮ್ಮತ್ ಮಾಡದೆ ಇಪ್ಪುಕ್ ಆತ್ತಾ.

ಗೆಂಡ ತೊಳುವರ್, ತಲಬಾರ ಸೇವೆ ಇಪ್ಪರ್, ಬೇರೆ ಹರ್ಕಿ ಇಪ್ಪರ್ ಗೌಲ್ ಬಿಟ್ತಿರ್ತ್ರ್. ಹಬ್ಬಕ್ ಬಂದಲ್ ಗ್ವಾಂಕಿಗ್ ಕೈ ಹಾಕ್ರ್ ಬೆರ್ಳಿಗ್ ತಾಗುವಷ್ಟ್ ತಿಂದಿದ್ರು ಎಲ್ಲರ್ ಮನೆಗು ಹಬ್ಬದ್ ಅಡ್ಗಿ ಬಾರಿ ಗಡ್ಜ್ ಮಾಡಿರ್ತ್ರ್. ಎಲ್ಲರಿಗು ಹಬ್ಬದ್ ಗಮ್ಮತ್ ಆರೆ ಮನಿ ಹೆಂಗಸರಿಗೆ ಬಂದರಿಗ್ ಅಡಗಿ ಮಾಡಿ ಹಾಕಿಯೇ ಸಾಕಾತ್ತ್. ಹ್ವಾಯ್ ಹಬ್ಬದ್ ದಿನ ಮಾರಣಕಟ್ಟೆ ಸುತ್ತ ಇಪ್ಪು ಮನೆಗೆಲ್ಲಾ ಹಬ್ಬಕ್ ವಿಶೇಷ ತಿಂಡಿ ಅಂದೇಳಿ “ಹಾಲ್ ದ್ವಾಸಿ” ಮಾಡು ರಿವಾಜ್ ಇತ್ತ್. ಮನಿಯರೆಲ್ಲ ಒಟ್ಟಿಗೆ ಕೂಕಂಡ್ ನೆಗಾಡ್ತಾ ಸಿಹಿ ತಿಂಬುದ್ ಕಾಂಬುಕ್ ಬಾರಿ ಚಂದ.

 ಎರಡ್ ಹಬ್ಬವು ಮೇಲ್ ಮೇಲ್ ನೆನಪ್ ಮಾಡ್ಕಂತ್ ಅಂದೇಳಿ ಆಯ್ತ್. ಎರಡು ಹಬ್ಬ ನೆಡು ಜಾಗ ಸುಮಾರ್ ದೂರದಂಗ್ ಇದ್ರು ಉಡುಪಿ ಜಿಲ್ಲೆಂಗ್ ಇಪ್ಪರಿಗೆ ಎರಡ್ ಹಬ್ಬುವು ದೊಡ್ಡದೆ. ಕೋಟದ್ ಬದೆಗ್ ಪೈಕಿಯರೆಲ್ಲ ಹಬ್ಬಕ್ ಬಾ ಗಡಾ ಮದಿ ಆಪುಕ್ ಹೆಣ್ಣ್ ಹುಡ್ಕಿ ಕೊಡುವ ಅಂದಿರ್. ನಾಕೈದ್ ಪೋಂಕ್ ದೋಸ್ತಿಗಳು ಕೋಟದ್ ಹಬ್ಬಕ್ ಕರ್ದಿರ್. ಇನ್ ಪ್ರೇರಣಾ ಯುವ ವೇದಿಕೆಯರ್ ಮಾರಣಕಟ್ಟೆ ಹಬ್ಬಕ್ ಬನಿ ಮರ್ರೆ ಹಬ್ಬ ಮುಗ್ಸಿ ಹದಿನೈದನೆ ತಾರೀಕಿಗ್ ಹಗಲ್ ಆಟ ಇತ್ತ್ ಕಂಡ್ಕ ಹೊಯ್ಲಕ್ ಅಂದಿರ್. ಎರಡ್ ಹಬ್ಬಕ್ಕೂ ಹೋಯ್ ಬರ್ಕ್. ನೀವ್ ಕುಟುಕುಟು ನೆಗಾಡುದ್ ಬ್ಯಾಡ ಅಕಾ. ಥೋ ಹೆಣ್ಣ್ ಕಾಂಬುಕ್ ಅಲ್ಲ ಮರ್ರೆ. ದೋಸ್ತಿಗಳ್, ಪೈಕಿಯರ್ ಮಾತಾಡ್ಸುಕೆ ಸಿಕ್ತ್ರ್. ಅದು ಅಲ್ದೆ ಹಬ್ಬಕ್ ಹ್ವಾರ್ ನೆಂಟರ್ ಮನೆಗ್ ಲಾಯ್ಕ್ ಉಂಬುಕ್ ಬೇರೆ ಸಿಕ್ಕತ್ತ್. ಸಮಾ ಉಂಡ್ರ್ ಮೇಲ್ ಗಂಡ್, ಹೆಣ್ಣಿನ್ ಕೈಗೆ ಮುಯ್ಯ್ ಕೊಡ್ಕರು ಇಲ್ಲ !!!

ಪರ ಊರ್,ದೇಶದಲ್ ಇಪ್ಪು ಮನಿಯರ್, ಹುಟ್ರೆ,ಸತ್ರೆ ಸೂತಿಕ ಇಪ್ಪು ಶುದ್ಧ ಕನ್ನಡ ಮಾತಾಡು ಘಟ್ಟದ್ ಬದಿ ಪೈಕಿಯರ್(ಒಂದೇ ದೈದ್ಮನಿ), ಊರಂಗೇ ಇಪ್ಪು ದೂರದ್ ನೆಂಟರ್, ಅಪ್ಪಯ್ಯನ್ ಮನಿಯರ್, ಅಬ್ಬಿ ಮನಿಯರ್, ಹೆಂಡ್ತಿ ಮನಿಯರ್, ಗಂಡನ್ ಮನಿಯರ್, ಅಕ್ಕನ್ ಗಂಡನ್ ಮನಿಯರ್, ತಮ್ಮನ್ ಹೆಂಡ್ತಿ ಮನಿಯರ್, ಮಗಳ್ ಮದಿಗ್ ಗಂಡ್ ಹುಡ್ಕಿ ಕೊಟ್ಟರ್, ಮನಿ ದೇವ್ರ್ ಪಾತ್ರಿಗಳ್, ಮನಿ ಕೆಲ್ಸ ಮಾಡದ್ ಮೇಸ್ತ್ರಿಗಳ್, ಹೋಟ್ಲಗ್ ಒಟ್ಟಿಗೆ ಇಪ್ಪರ್, ಬೋಟಗ್  ಕೆಲ್ಸ ಮಾಡುವರ್, ಹಬ್ಬ ಮಾಡದೆ ಇಪ್ಪರ್, ಚೀಟಿ ಕಟ್ಟುವರ್, ಶಾಲಿ ದೋಸ್ತಿಗಳ್ ಎಲ್ಲರನ್ನು ನಾವು ನೀವು  ಹಬ್ಬಕ್ ಕರಿತ್ತ್. ಎಲ್ಲರೂ ನಮ್ಗ್ ನೆಂಟರೇ ಅಲ್ದಾ. ಮನಿತುಂಬಾ ಯಬ್ಬ ಅಂಬಷ್ಟ್ ಗೌಜ್. ಕೆಲವ್ ನೆಂಟರ್ ಸ್ವಲ್ಪ ಕರ್ಕೆರಿ ಅನಸ್ರು ಹಬ್ಬ ಮುಗದ್ ಮಾರ್ನೆ ದಿನ ಮನ್ಸಿಗ್ ಆಪು ಬೇಜಾರ್ ಅಷ್ಟಿಷ್ಟಲ್ಲ. ನೆಂಟರೆಲ್ಲ ಹೊಯಿರ್ತ್ರ್, ಪರ ಊರಂಗ್ ಕೆಲ್ಸ ಮಾಡು ಮನಿ ಮಕ್ಕಳ್ ರಜಿ ಮಗಿತ್ ನಾಳಿ ವಾಪಾಸ್ ಹೊರಡ್ಕ್ ಅಂಬತಿಗ್ ಕಣ್ಣ್ ಬ್ಯಾಡ ಅಂದ್ರು ಕೆಂಪಾತ್. ಹಬ್ಬ ಗಮ್ಮತ್ ಮಾಡಿ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ