ಕ್ರಿಕೆಟ್ ದಿಗ್ಗಜ ಸಚಿನ್ 45ನೇ ಹುಟ್ಟುಹಬ್ಬ: ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ

ಕರಾವಳಿ ಕರ್ನಾಟಕ ವರದಿ

ಮುಂಬೈ:
ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇಂದು 45ನೇ ವರ್ಷಕ್ಕೆ ಕಾಲಿಟಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಅಭಿಮಾನಿಗಳಿಂದ ಶುಭಾಶಯದ ಸುರಿಮಳೆ ಹರಿದು ಬರುತ್ತಿದೆ.

ಕ್ರಿಕೆಟಿಗರಾದ ಪ್ರಗ್ಯಾನ್ ಓಜಾ, ಕೆ.ಎಲ್‌.ರಾಹುಲ್, ಆರ್‌.ಪಿ.ಸಿಂಗ್, ಬಾಕ್ಸರ್ ವಿಜೇಂದರ್ ಸಿಂಗ್‌ ಸೇರಿದಂತೆ ನೂರಾರು ಗಣ್ಯರು, ಅಸಂಖ್ಯಾತ ಅಭಿಮಾನಿಗಳು ಸಚಿನ್ ಅವರಿಗೆ ಶುಭಾಶಯ ಕೋರಿದ್ದಾರೆ.

ಸಚಿನ್ ಅವರ ಸ್ಮರಣೀಯ ಇನ್ನಿಂಗ್ಸ್‌ಗಳ ವಿಡಿಯೊ ತುಣುಕುಗಳು, ಅವರು ವಿಶ್ವಕಪ್ ಎತ್ತಿಹಿಡಿದಿರುವ ಫೋಟೊ, ಅವರ ಜೊತೆ ತೆಗೆಸಿಕೊಂಡಿರುವ ಫೋಟೊ ಹಾಗೂ ಅವರ ತಮಾಷೆಯ ಕ್ಷಣಗಳ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಕ್ರೀಡಾಪಟುಗಳು, ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

1973ರ ಏಪ್ರಿಲ್ 24ರಂದು ಜನಿಸಿದ ಸಚಿನ್, 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಬಹುತೇಕ ಎಲ್ಲ ಬ್ಯಾಟಿಂಗ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಮತ್ತು 34 ಸಾವಿರಕ್ಕೂ ಅಧಿಕ ರನ್ ಸಿಡಿಸಿರುವ ಸಚಿನ್, 2013ರಲ್ಲಿ ನಿವೃತ್ತಿ ಹೊಂದಿದ್ದರು.

ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಸಾಧಕರೆನಿಸಿರುವ ಸಚಿನ್, 1998ರಲ್ಲಿ ತಮ್ಮ 25ನೇ ಜನ್ಮದಿನದಂದು ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್​ರನ್ನು ಬೆಂಡೆತ್ತಿ ಸಿಡಿಸಿದ ಶತಕ ಸ್ಮರಣೀಯವೆನಿಸಿದೆ.

ಮುಂಬೈನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಮೆಂಟರ್ ಆಗಿ ಸಚಿನ್ ಹಾಜರಿರಲಿದ್ದು, ಇದೇ ವೇಳೆ ತಂಡದೊಂದಿಗೆ ಜನ್ಮದಿನದ ಸಂಭ್ರಮ ಆಚರಿಸುವ ನಿರೀಕ್ಷೆ ಇದೆ. ಇನ್ನು ಮಂಗಳವಾರ ಮಧ್ಯಾಹ್ನದ ನಂತರ ಸಚಿನ್ ತಮ್ಮ '100ಎಂಬಿ' ಆಪ್ ಮೂಲಕ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕೋಲಾರ ಬಿಜೆಪಿ ಅಭ್ಯರ್ಥಿ ಕಾರಿಗೆ ಬೆಂಕಿ ಇಕ್ಕಿದ ದುಷ್ಕರ್ಮಿಗಳು:
http://bit.ly/2F9qyYg
►►ಬಿಜೆಪಿ ಮತ್ತು ಬಿಜೆಪಿ ನಾಯಕರಿಂದ ಬೇಟಿ ಬಚಾವೋ: ರಾಹುಲ್ ಗಾಂಧಿ ವ್ಯಂಗ್ಯ: http://bit.ly/2JhrVGG
►►ನಾಮಪತ್ರ ಸಲ್ಲಿಕೆ. ಜನ ಮತ್ತೆ ನನ್ನನ್ನು ಬೆಂಬಲಿಸಲಿದ್ದಾರೆ: ಕೆ. ಗೋಪಾಲ ಪೂಜಾರಿ: http://bit.ly/2HpSpWd
►►ಕರಾವಳಿಯ ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ: ಅಭ್ಯರ್ಥಿಗಳಿಂದ ದೇವರಿಗೆ ಮೊರೆ: http://bit.ly/2HKQwqc
►►ಕೋಟೇಶ್ವರ ಕೆರೆಯಲ್ಲಿ ದುರಂತ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು: http://bit.ly/2JjdDFA
►►ಚಾಲಕ ಮುಸ್ಲಿಂ ಎಂದು ಕ್ಯಾಬ್ ಬುಕಿಂಗ್ ರದ್ದು ಮಾಡಿದ ವಿಎಚ್‌ಪಿ ಕಾರ್ಯಕರ್ತ!: http://bit.ly/2HGULTW

Related Tags: Sachin Tendulkar, 45th Birthday, ಸಚಿನ್​ಗೆ 45ನೇ ಜನ್ಮದಿನದ ಸಂಭ್ರಮ, Sports News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ