ಅಜ್ಜ-ಅಜ್ಜಿಗೆ ಹಲ್ಲೆಗೈದು ಚಿನ್ನಾಭರಣ ದರೋಡೆ: ಅಪರಾಧಿಗೆ ಎ.24ರಂದು ಶಿಕ್ಷೆ ಪ್ರಕಟ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಚಿನ್ನದ ಸರ ನೀಡಲಿಲ್ಲ ಎಂಬ ಕಾರಣಕ್ಕಾಗಿ ವಯೋವೃದ್ಧ ಅಜ್ಜ–ಅಜ್ಜಿ ಹಾಗೂ ಚಿಕ್ಕಮ್ಮನಿಗೆ ಮಾರಣಾಂತಕ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪಿಯ ಅಪರಾಧ ಸಾಬೀತಾಗಿದೆ.

ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್‌ ಖಂಡೇರಿ ತೀರ್ಪು ಪ್ರಕಟಿಸಿದ್ದು, ಎ.24 ರಂದು ಅಪರಾಧಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಮೆಕ್ಕೆ ನಿವಾಸಿ ರಂಜಿತ್ ಶೆಟ್ಟಿ(28) ಪ್ರಕರಣದ ಅಪರಾಧಿ. ಅಂದಿನ ಕುಂದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊರ್ಗಿ ಹೊಸ್ಮಠ ಸಮೀಪದ ಕುಷ್ಟಪ್ಪ ಶೆಟ್ಟಿ, ಕೊರಗಮ್ಮ ಶೆಡ್ತಿ ಹಾಗೂ ಅವರ ಪುತ್ರಿ ಚಂದ್ರಮತಿ ಶೆಟ್ಟಿ ಇದ್ದ ಮನೆಗೆ 2016 ರ ಜ.5 ರಂದು ಮಧ್ಯರಾತ್ರಿ 1.30 ರ ವೇಳೆಯಲ್ಲಿ ಮಾರಕಾಯುಧಗಳೊಂದಿಗೆ ಮನೆಗೆ ನುಗ್ಗಿದ್ದ ಕುಷ್ಟಪ್ಪ ಶೆಟ್ಟಿ ಹಾಗೂ ಕೊರಗಮ್ಮ ಶೆಡ್ತಿ ಅವರ ಹಿರಿಯ ಪುತ್ರಿಯ ಮಗ ರಂಜಿತ್‌ ಶೆಟ್ಟಿ ತನ್ನ ಖರ್ಚಿಗಾಗಿ ಚಿನ್ನದ ಒಡವೆಗಳನ್ನು ಕೊಡಲು ಬೇಡಿಕೆ ಇಟ್ಟಿದ್ದನು.

ಈ ವೇಳೆಯಲ್ಲಿ ಮನೆಯವರು ಕೊಡಲು ನಿರಾಕರಿಸಿದ್ದರಿಂದ ಮರದ ಒನಕೆ ಹಾಗೂ ಮಾರಕಾಯುಧಗಳಿಂದ ಮೂವರ ಮೇಲೂ ಮನಬಂದಂತೆ ಹಲ್ಲೆ ನಡೆಸಿ ಬಳಿಕ ಅವರೆಲ್ಲರನ್ನೂ ಮನೆಯೊಳಗೆ ಕೂಡಿ ಹಾಕಿ ಮನೆಯಲ್ಲಿದ್ದ ತನ್ನ ತಾಯಿಯ ಒಡವೆಯೂ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದನು.

ಮನೆಯಲ್ಲಿ ನಡೆಯಲಿದ್ದ ಸಮಾರಂಭಕ್ಕೆಂದು ಪೂನಾದಿಂದ ಊರಿಗೆ ಬಂದಿದ್ದ ನಾರಾಯಣ ಶೆಟ್ಟಿ ಎನ್ನುವವರು ಕುಷ್ಟಪ್ಪ ಶೆಟ್ಟಿಯವರ ಮನೆ ಒಳ ಹೊಕ್ಕಾಗ ದಾರುಣ ಘಟನೆ ಬೆಳಕಿಗೆ ಬಂದಿತ್ತು. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕುಂದಾಪುರದ ಅಂದಿನ ಅಪರಾಧ ವಿಭಾಗದ ಎಸ್‌.ಐ ದೇವರಾಜ್‌ ಹಾಗೂ ಸಿಬ್ಬಂದಿಗಳು ಘಟನೆ ನಡೆದ ಕೆಲವೇ ಗಂಟೆಗಳ ಒಳಗೆ ಆರೋಪಿಯನ್ನು ಕೋಟೇಶ್ವರದಲ್ಲಿ ಚಿನ್ನಾಭರಣಗಳೊಂದಿಗೆ ಬಂಧಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸರ್ಕಲ್‌ ಇನ್ಸ್‌ಪೆಕ್ಟರ್‌ ಪಿ.ಎಂ.ದಿವಾಕರ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಪ್ರಾಸಿಕ್ಯೂಶನ್‌ ಪರವಾಗಿ ವಾದಿಸಿದ್ದರು.

ಇದನ್ನೂ ಓದಿ:
►►ಅಜ್ಜಿಮನೆಗೆ ನುಗ್ಗಿ ಚಿನ್ನಾಭರಣ ದರೋಡೆ. ಆರೋಪಿ ಸರೆ:
http://bit.ly/1Oxkr1A

ಇಂದು ಹೆಚ್ಚು ಓದಿದ ಸುದ್ದಿಗಳು
►►ಹನುಮಾನ್ ಚಿತ್ರವಿರುವ ಕ್ಯಾಬ್ ಚಾಲಕರು ಅತ್ಯಾಚಾರಿಗಳು: 'ಕಿಸ್ ಆಫ್ ಲವ್' ರಶ್ಮಿ ಆಕ್ರೋಶ:
http://bit.ly/2HEQ4tw
►►ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಪೂಜಾರಿಗೆ ಅದ್ದೂರಿ ಸ್ವಾಗತ: http://bit.ly/2JWhHwN
►►ರಮಾನಾಥ ರೈ, ಅಭಯಚಂದ್ರ, ಮುನೀರ್ ಕಾಟಿಪಳ್ಳ ನಾಮಪತ್ರ: http://bit.ly/2Hd2VzK
►►ಶಿಕಾರಿಪುರದ ಹೆಣ್ಣುಬಾಕನ ಸಿ.ಡಿ ಹಾಲಪ್ಪನ ಬಳಿ ಇರಬೇಕು. ಅದಕ್ಕೆ ಟಿಕೆಟ್ ಕೊಟ್ಟಿದ್ದಾರೆ: ಬೇಳೂರು ಆರೋಪ: http://bit.ly/2HJGrr5
►►ಹೆಗ್ಡೆ ಬೆಂಗಾವಲು ವಾಹನಕ್ಕೆ ಢಿಕ್ಕಿ ಪ್ರಕರಣಕ್ಕೆ ಟ್ವಿಸ್ಟ್: ಲಾರಿ ಕೊಪ್ಪ ಬಿಜೆಪಿ ಅಧ್ಯಕ್ಷರದ್ದು!: http://bit.ly/2J8yF9Q
►►ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಾವಿನ ವದಂತಿ: ಓರ್ವ ಸೆರೆ: http://bit.ly/2J8yF9Q
►►ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ಬಿಪ್ಲಬ್ ಹೇಳಿಕೆಗೆ ರಾಜ್ಯಪಾಲ ತಥಾಗತ ರಾಯ್ ಸಹಮತ: http://bit.ly/2qKCMkZ
►►ಮಿಥುನ್ ರೈ ಕೈತಪ್ಪಿದ ಟಿಕೆಟ್: ಎನ್‌ಎಸ್‌ಯುಐ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ: http://bit.ly/2qISFbv
►►ಐಪಿಎಲ್-2018: ರಾಯಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ: http://bit.ly/2JYeD2T
►►ಮುನಿಸು ತರವೆ? ಜನಾರ್ದನ ಪೂಜಾರಿ ಭೇಟಿ ಮಾಡಿದ ರಮಾನಾಥ ರೈ: http://bit.ly/2J6qFWV

Related Tags: Korgi Hosmata Koragamma Shetty, Mekke Rajith Shetty, Kundapur Court, Prakash Khanderi, Dysp Manjunath Shetty, Circle Inspector Diwakar, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ