ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಪೂಜಾರಿಗೆ ಅದ್ದೂರಿ ಸ್ವಾಗತ
ಕುಂದಾಪುರ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ. ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ: ಗುರುರಾಜ್ ಪೂಜಾರಿ.

ಶ್ರೀಕಾಂತ ಹೆಮ್ಮಾಡಿ/ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿ ಭಾರತದ ಪದಕ ಪಟ್ಟಿ ತೆರೆದ ಕುಂದಾಪುರದ ಗುರುರಾಜ್ ಪೂಜಾರಿ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ್ದು, ಕುಂದಾಪುರದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

ಆಸ್ಟ್ರೇಲಿಯಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಗುರುರಾಜ್ ಪೂಜಾರಿ ಅವರನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ- ಹೃದಯಸ್ಪರ್ಶಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ತರಬೇತುದಾರ ರಾಜೇಂದ್ರ, ಎಸ್‌ಡಿಎಂ ಕಾಲೇಜಿನ ಸಿಬ್ಬಂದಿ ಹಾಗೂ ಸಹಾಯಕ ದೈಹಿಕ ನಿರ್ದೇಶಕ ಹರಿದಾಸ್ ಕೂಳೂರು, ಉಡುಪಿಯ ಕ್ರೀಡಾ ಇಲಾಖೆಯ ಅಧಿಕಾರಿಗಳು ಮತ್ತು ಅಭಿಮಾನಿಗಳು ಈ ಸಂದರ್ಭ ಇದ್ದರು.

ಉಡುಪಿಯಲ್ಲಿ ಜಿಲ್ಲಾಧಿಕಾರಿಗಳಿಂದ ಸನ್ಮಾನ
ಗುರುರಾಜ ಪೂಜಾರಿಯವರು ಸರಕಾರಿ ಕಾರಿನಲ್ಲಿ ಉಡುಪಿಗೆ ಆಗಮಿಸಿದರು. ಇದೇ ಮೊದಲ ಬಾರಿಗೆ ಕ್ರೀಡಾ ಸಾಧಕರನ್ನು ಸರಕಾರಿ ವಾಹನದಲ್ಲಿ ಕರೆತಂದದ್ದು ವಿಶೇಷ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸನ್ಮಾನಿಸಿ ಅಭಿನಂದಿಸಿದರು.

ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯವಾಗಿದೆ: ಗುರುರಾಜ್ ಪೂಜಾರಿ
ಕುಂದಾಪುರಕ್ಕೆ ಬಂದಿಳಿದ ಗುರುರಾಜ್ ಪೂಜಾರಿಯವರನ್ನು ಹರ್ಕ್ಯೂಲೆಸ್ ಜಿಮ್ ತಂಡ ಹಾಗೂ ಸಾರ್ವಜನಿಕರು ಪುಷ್ಪಗುಚ್ಛಗಳನ್ನು ನೀಡಿ ಅಭಿನಂದಿಸಿದರು. ಬಳಿಕ ಜಿಮ್ ತರಗತಿಯಲ್ಲಿ ನಡೆದ ಸಮಾರಂಭದಲ್ಲಿ ಕುಂದಾಪುರ ಎಸಿ ಭೂಬಾಲನ್ ಹಾಗೂ ಠಾಣಾಧಿಕಾರಿ ಹರೀಶ್ ಸನ್ಮಾನಿಸಿದರು.

ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕವನ್ನು ಜಯಿಸುತ್ತೇನೆಂದು ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಕಠಿಣ ಶ್ರಮದಿಂದಾಗಿ ಈ ಸಾಧನೆ ಮಾಡಿದ್ದೇನೆ. ನನ್ನ ತಂದೆ-ತಾಯಿ, ಊರವರು, ಗುರುಗಳು ಎಲ್ಲರ ಆಶೀರ್ವಾದ ನನ್ನ ಮೇಲೆ ಇದ್ದುದರಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಗುರುರಾಜ್ ಹೇಳಿದರು.

ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಸುಕೇಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕುಸ್ತಿ ಕಲಿತೆ. ಬಳಿಕ ಮಂಜುನಾಥನ ಸನ್ನಿಧಿ ಉಜಿರೆಯಲ್ಲಿ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವೇಟ್‌ಲಿಫ್ಟಿಂಗ್ ಕಲಿತೆ. ಕಾಲೇಜು ದಿನಗಳಲ್ಲಿ ಇವೆರಡೂ ಅವಕಾಶ ನನಗೆ ಒದಗಿ ಬಂದಿರುವುದು ದೇವರ ಸನ್ನಿಧಿಯಲ್ಲಿ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

ಜಿಮ್ ವ್ಯವಸ್ಥಾಪಕ ಸತೀಶ್, ಗುರುರಾಜ್ ತಂದೆ ಮಹಾಬಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಕುಂದಾಪುರ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಸಂಜೆ ಜಡ್ಡು ಗ್ರಾಮದಲ್ಲಿ ಗುರುರಾಜ ಪೂಜಾರಿಯವರ ಮೆರವಣಿಗೆ ಆಯೋಜಿಸಲಾಗಿದೆ.


ಇದನ್ನೂ ಓದಿ:
►►ಕಾಮನವೆಲ್ತ್ ಗೇಮ್ಸ್: ಬೆಳ್ಳಿ ಗೆದ್ದು ಭಾರತದ ಪದಕ ಪಟ್ಟಿ ತೆರೆದ ಕುಂದಾಪುರದ ಗುರುರಾಜ್:
http://bit.ly/2Elgnze
►►ಕುಂದಾಪುರದ ಗುರುರಾಜ್ ಪೂಜಾರಿ ಸೇರಿದಂತೆ 13 ಸಾಧಕರಿಗೆ ಏಕಲವ್ಯ ಪ್ರಶಸ್ತಿ: http://bit.ly/2tkmBPT
►►ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ಚಿತ್ತೂರಿನ ಕ್ರೀಡಾಪಟು: http://bit.ly/1PERygY

ಇಂದು ಹೆಚ್ಚು ಓದಿದ ಸುದ್ದಿಗಳು
►►ರಮಾನಾಥ ರೈ, ಅಭಯಚಂದ್ರ, ಮುನೀರ್ ಕಾಟಿಪಳ್ಳ ನಾಮಪತ್ರ:
http://bit.ly/2Hd2VzK
►►ಶಿಕಾರಿಪುರದ ಹೆಣ್ಣುಬಾಕನ ಸಿ.ಡಿ ಹಾಲಪ್ಪನ ಬಳಿ ಇರಬೇಕು. ಅದಕ್ಕೆ ಟಿಕೆಟ್ ಕೊಟ್ಟಿದ್ದಾರೆ: ಬೇಳೂರು ಆರೋಪ: http://bit.ly/2HJGrr5
►►ಹೆಗ್ಡೆ ಬೆಂಗಾವಲು ವಾಹನಕ್ಕೆ ಢಿಕ್ಕಿ ಪ್ರಕರಣಕ್ಕೆ ಟ್ವಿಸ್ಟ್: ಲಾರಿ ಕೊಪ್ಪ ಬಿಜೆಪಿ ಅಧ್ಯಕ್ಷರದ್ದು!: http://bit.ly/2J8yF9Q
►►ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಾವಿನ ವದಂತಿ: ಓರ್ವ ಸೆರೆ: http://bit.ly/2J8yF9Q
►►ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ಬಿಪ್ಲಬ್ ಹೇಳಿಕೆಗೆ ರಾಜ್ಯಪಾಲ ತಥಾಗತ ರಾಯ್ ಸಹಮತ: http://bit.ly/2qKCMkZ
►►ಮಿಥುನ್ ರೈ ಕೈತಪ್ಪಿದ ಟಿಕೆಟ್: ಎನ್‌ಎಸ್‌ಯುಐ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ: http://bit.ly/2qISFbv
►►ಐಪಿಎಲ್-2018: ರಾಯಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ: http://bit.ly/2JYeD2T
►►ಮುನಿಸು ತರವೆ? ಜನಾರ್ದನ ಪೂಜಾರಿ ಭೇಟಿ ಮಾಡಿದ ರಮಾನಾಥ ರೈ: http://bit.ly/2J6qFWV
►►ಕಠುವಾ ಪ್ರಕರಣ ನಾಚಿಕೆಗೇಡು: ರಾಷ್ಟ್ರಪತಿ ಕೋವಿಂದ್: http://bit.ly/2J6qFWV

Related Tags: Commonwealth Games, Medal Winner, Gururaj Poojary, Welcome, Udupi, Kundapur, AC Bhubalan, PSI Harish, Sathish, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ