ಶಿಕಾರಿಪುರದ ಹೆಣ್ಣುಬಾಕನ ಸಿ.ಡಿ ಹಾಲಪ್ಪನ ಬಳಿ ಇರಬೇಕು. ಅದಕ್ಕೆ ಟಿಕೆಟ್ ಕೊಟ್ಟಿದ್ದಾರೆ: ಬೇಳೂರು ಆರೋಪ
ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ರೇಡ್ ಮಾಡಲಿ. ಎಲ್ಲರ ದುಡ್ಡನ್ನ ಬಾಚಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾಗಿ ಎಲ್ಲ ಕಡೆಯಿಂದಲೂ ದುಡ್ಡು ಬಾಚಿಕೊಳ್ಳುತ್ತಿದ್ದಾರೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಶಿಕಾರಿಪುರದಲ್ಲೊಬ್ಬ ಹೆಣ್ಣುಬಾಕ ಇದ್ದಾನೆ. ಅವನ ಸಿಡಿ ಹಾಲಪ್ಪಗೆ ಸಿಕ್ಕಿರಬೇಕು. ಅದನ್ನೇ ತೋರಿಸಿ ಹೆದರಿಸಿ ಟಿಕೆಟ್ ಗಿಟ್ಟಿಸಿದ್ದಾನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೋಪಾಲಕೃಷ್ಣ, ಶಿಕಾರಿಪುರದಲ್ಲೊಬ್ಬ ಕಾಮುಕ, ಕಾಮುಕ ಅಲ್ಲ ಹೆಣ್ಣು ಬಾಕ ಇದ್ದಾನೆ. ಬಹುಷಃ ಅವನ ಸಿಡಿ ಹಾಲಪ್ಪನಿಗೆ ಸಿಕ್ಕಿರಬೇಕು. ಅದನ್ನು ಮುಂದಿಟ್ಟುಕೊಂಡು ಟಿಕೆಟ್‌ ಪಡೆದಿದ್ದಾನೆ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ಬಂದವರಿಗೆಲ್ಲಾ ಟಿಕೆಟ್ ನೀಡಲಾಗಿದೆ. ನಾನು ಬಿಜೆಪಿಗೆ ನಿಷ್ಠನಾಗಿದ್ದು ಕೆಜೆಪಿಗೆ ಹಾರದೇ ಇದ್ದದ್ದಕ್ಕೆ ಈಗ ಶಿಕ್ಷೆ ನೀಡಲಾಗಿದೆ. ನಮ್ಮ ಕಾರ್ಯಕರ್ತರ ಶಾಪ ಯಡಿಯೂರಪ್ಪನವರಿಗೆ ತಟ್ಟದೆ ಇರದು. ನನಗೆ ಜೆಡಿಎಸ್‌ನಿಂದ ಬುಲಾವ್ ಬಂದಿದೆ ಆದರೆ ನಾನು ಹೋಗುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನನ್ನ ಬಲವನ್ನು ಯಡಿಯೂರಪ್ಪನವರಿಗೆ ಸಾಬೀತು ಮಾಡುತ್ತೇನೆ. ಹಾಲಪ್ಪನನ್ನು ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ.

ಸಾಗರದ ಹೆಣ್ಣು ಮಕ್ಕಳು ಅತ್ಯಾಚಾರಿಗೆ ಟಿಕೆಟ್ ಕೊಟ್ಟಿದ್ದರಿಂದ ಛೀ.. ಥೂ.. ಅಂತಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪ ಹಾಗೂ ಅವರ ಮಗ ರಾಘವೇಂದ್ರ ಕಾರಣ. ನನ್ನ ರಾಜಕೀಯ ಗುರು ಬಂಗಾರಪ್ಪನವರನ್ನ ಎದುರು ಹಾಕಿಕೊಂಡು ಬಿವೈ ರಾಘವೇಂದ್ರ ಪರ ಪ್ರಚಾರ ನಡೆಸಿದ್ದರಿಂದ ಅಂದು ಅವರು ಗೆಲುವನ್ನು ಕಂಡಿದ್ದಾರೆ. ರಾಜ್ಯದಲ್ಲಿ ಯಾರ ಮೇಲಾದರು ಐಟಿ ರೇಡ್ ಮಾಡುವುದಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ಮಾಡಲಿ. ಎಲ್ಲರ ದುಡ್ಡನ್ನ ಬಾಚಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾಗಿ ಎಲ್ಲ ಕಡೆಯಿಂದಲೂ ಸಾಧ್ಯವಾದಷ್ಟು ದುಡ್ಡು ಬಾಚಿಕೊಳ್ಳುತ್ತಿದ್ದಾರೆ ಎಂದು ಅವರು ಆಕ್ರೋಶವನ್ನು ಹೊರ ಹಾಕಿದರು.

ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಂಡಾಯ ಶಾಸಕನಾಗಿ ಸಾಗರ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದೇನೆ. ಶಿವಮೊಗ್ಗ ರಾಜಕಾರಣದಲ್ಲಿ ಯಡಿಯೂರಪ್ಪನೋ ಅಥವಾ ಬೇಳೂರು ಗೋಪಾಲಕೃಷ್ಣನೋ ನೋಡೆ ಬಿಡೋಣ. ಸಾಗರದ ಜನ ಬೇಳೂರು ಗೋಪಾಲಕೃಷ್ಣ ಜೊತೆಗಿದ್ದಾರೆ. ಸಾಗರದ ಎಲ್ಲಾ ನನ್ನ ಜನತೆಯ ಜೊತೆ ಮಾತಾಡಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಅವರು ಸವಾಲೆಸದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆಗ್ಡೆ ಬೆಂಗಾವಲು ವಾಹನಕ್ಕೆ ಢಿಕ್ಕಿ ಪ್ರಕರಣಕ್ಕೆ ಟ್ವಿಸ್ಟ್: ಲಾರಿ ಕೊಪ್ಪ ಬಿಜೆಪಿ ಅಧ್ಯಕ್ಷರದ್ದು!:
http://bit.ly/2J8yF9Q
►►ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಾವಿನ ವದಂತಿ: ಓರ್ವ ಸೆರೆ: http://bit.ly/2J8yF9Q
►►ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ಬಿಪ್ಲಬ್ ಹೇಳಿಕೆಗೆ ರಾಜ್ಯಪಾಲ ತಥಾಗತ ರಾಯ್ ಸಹಮತ: http://bit.ly/2qKCMkZ
►►ಮಿಥುನ್ ರೈ ಕೈತಪ್ಪಿದ ಟಿಕೆಟ್: ಎನ್‌ಎಸ್‌ಯುಐ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ: http://bit.ly/2qISFbv
►►ಐಪಿಎಲ್-2018: ರಾಯಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ: http://bit.ly/2JYeD2T
►►ಮುನಿಸು ತರವೆ? ಜನಾರ್ದನ ಪೂಜಾರಿ ಭೇಟಿ ಮಾಡಿದ ರಮಾನಾಥ ರೈ: http://bit.ly/2J6qFWV
►►ಕಠುವಾ ಪ್ರಕರಣ ನಾಚಿಕೆಗೇಡು: ರಾಷ್ಟ್ರಪತಿ ಕೋವಿಂದ್: http://bit.ly/2J6qFWV

Related Tags: BJP Ticket controversy, Sagar Constituency, Haratalu Halappa, Beloor Gopalakrishna, Shikaripura, Shobha Karandlaj, Yediyurappa
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ