ಹೆಗ್ಡೆ ಬೆಂಗಾವಲು ವಾಹನಕ್ಕೆ ಢಿಕ್ಕಿ ಪ್ರಕರಣಕ್ಕೆ ಟ್ವಿಸ್ಟ್: ಲಾರಿ ಕೊಪ್ಪ ಬಿಜೆಪಿ ಅಧ್ಯಕ್ಷರದ್ದು!

ಕರಾವಳಿ ಕರ್ನಾಟಕ ವರದಿ

ಶಿರಸಿ:
ಕಳೆದ ರಾತ್ರಿ ರಾಣೆಬೆನ್ನೂರಿನಲ್ಲಿ  ಅನಂತಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿ ಢಿಕ್ಕಿ ಪ್ರಕರಣದಲ್ಲಿ ಲಾರಿ ಬಿಜೆಪಿ ಮುಖಂಡರ ಸಹೋದರರೊಬ್ಬರಿಗೆ ಸೇರಿದ್ದು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. 

ಹೆಗಡೆ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದ ಲಾರಿ ಕೊಪ್ಪದ ಬಿಜೆಪಿ ಅಧ್ಯಕ್ಷ ರಮೇಶ್ ಅವರ ಸಹೋದರ ನಾಗೇಶ್ ಎಂಬುವರ ಹೆಸರಿನಲ್ಲಿ ಈ ಲಾರಿ ನೋಂದಣಿ ಆಗಿದೆ. ತನ್ನ ಕೊಲೆ ಯತ್ನ ನಡೆದಿದೆ ಎಂದು ಈ ಘಟನೆಯು ಬಳಿಕ ಅನಂತ ಕುಮಾರ ಹೆಗ್ಡೆ ಆರೋಪಿಸಿದ್ದರು.

ಲಾರಿ ಚಾಲಕ ಮುಸ್ಲಿಂ ಆಗಿರುವ ಕಾರಣಕ್ಕೆ ಸಚಿವ ಅನಂತ ಕುಮಾರ ಹೆಗಡೆ ಹೀಗೆ ಆರೋಪ ಮಾಡಿ ಸಣ್ಣ ಅಪಘಾತ ಪ್ರಕರಣಕ್ಕೂ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಟೀಕೆಗಳು ಕೇಳಿಬಂದಿದ್ದವು. ಆದರೆ ಈ ಲಾರಿ ಬಿಜೆಪಿಗರಿಗೆ ಸಂಬಂಧಿಸಿದ್ದು ಎಂಬ ಸುದ್ದಿ ಬಹಿರಂಗಗೊಡಿದೆ. 

ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೆಗಡೆ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಹಾವೇರಿ ಎಸ್​ಪಿ ಪರಶುರಾಮ್ ಕೂಡ ಈ ಘಟನೆ ಉದ್ದೇಶಪೂರ್ವಕ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ

ಕೊಲೆ ಯತ್ನ: ಮತ್ತೆ ಆರೋಪ ಮಾಡಿದ ಹೆಗಡೆ
ಇದು ಕೇವಲ ಅಪಘಾತ ಅಲ್ಲ. ಅದು ಯೂಟರ್ನ್ ಮಾಡುವ ಸ್ಥಳವೂ ಅಲ್ಲ. ಲೋಡ್ ಆದ ಲಾರಿಯನ್ನು ಒನ್ ವೇನಲ್ಲಿ ತಂದು ಯಾರೂ ಯೂಟರ್ನ್​ಗೆ ಪ್ರಯತ್ನಿಸೋದಿಲ್ಲ. 500 ಮೀಟರ್ ಮುಂದೆ ಹೋಗಿದ್ದರೆ ಅಲ್ಲಿ ಯೂಟರ್ನ್ ಮಾಡಿಕೊಳ್ಳಬಹುದಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಿದ ಅಪಘಾತವೆಂದು ತನಗೆ ಅನಿಸುತ್ತದೆ ಎಂದು ಅನಂತಕುಮಾರ್ ಹೆಗಡೆ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ:
►►ಹೆಗಡೆ ಹತ್ಯೆ ಯತ್ನವಲ್ಲ. ಆಕಸ್ಮಿಕ ಅಪಘಾತ: ಪ್ರಾಥಮಿಕ ತನಿಖೆಯ ಬಳಿಕ ಪೊಲೀಸ್ ಹೇಳಿಕೆ:
http://bit.ly/2JSd0UJ
►►ಬೆಂಗಾವಲು ಕಾರಿಗೆ ಲಾರಿ ಢಿಕ್ಕಿ: ಕೊಲೆ ಸಂಚು ಎಂದ ಸಚಿವ ಹೆಗಡೆ: http://bit.ly/2H9yT46

ಇಂದು ಹೆಚ್ಚು ಓದಿದ ಸುದ್ದಿಗಳು:
►►ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಾವಿನ ವದಂತಿ: ಓರ್ವ ಸೆರೆ: http://bit.ly/2J8yF9Q
►►ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ಬಿಪ್ಲಬ್ ಹೇಳಿಕೆಗೆ ರಾಜ್ಯಪಾಲ ತಥಾಗತ ರಾಯ್ ಸಹಮತ: http://bit.ly/2qKCMkZ
►►ಮಿಥುನ್ ರೈ ಕೈತಪ್ಪಿದ ಟಿಕೆಟ್: ಎನ್‌ಎಸ್‌ಯುಐ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ: http://bit.ly/2qISFbv
►►ಐಪಿಎಲ್-2018: ರಾಯಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ: http://bit.ly/2JYeD2T
►►ಮುನಿಸು ತರವೆ? ಜನಾರ್ದನ ಪೂಜಾರಿ ಭೇಟಿ ಮಾಡಿದ ರಮಾನಾಥ ರೈ: http://bit.ly/2J6qFWV
►►ಕಠುವಾ ಪ್ರಕರಣ ನಾಚಿಕೆಗೇಡು: ರಾಷ್ಟ್ರಪತಿ ಕೋವಿಂದ್: http://bit.ly/2J6qFWV
►►ಬೆಳ್ತಂಗಡಿ: ಅನುಭವಿ ಬಂಗೇರ v/s ಚತುರ ಸಂಘಟಕ ಪೂಂಜ: http://bit.ly/2HB5Zci
►►ಇಲ್ಯಾಸ್ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ: http://bit.ly/2Ha5pmI

Related Tags: Ananth Kumar Hegde, Accident, BJP, Lorry Owner, Koppa BJP President, Nagesh, Ramesh, Communal Color, Muslim Driver
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ