ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಾವಿನ ವದಂತಿ: ಓರ್ವ ಸೆರೆ

ಕರಾವಳಿ ಕರ್ನಾಟಕ ವರದಿ

ಪಣಜಿ:
ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಯನ್ನು ಪಣಜಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಕೆನೆತ್‌ ಸಿಲ್ವಿರ(35) ಬಂಧಿತ ಆರೋಪಿ. ಕೆನೆತ್‌ ಮಂಗಳವಾರ ತನ್ನ ಫೇಸ್‌ಬುಕ್ ವಾಲ್‌ನಲ್ಲಿ 'ಇದೀಗ ಬಂದ ಸುದ್ದಿ, ಪರಿಕ್ಕರ್‌‌‌ ಸಾವನ್ನಪ್ಪಿದ್ದಾರೆ' ಎಂದು ಪೋಸ್ಟ್‌‌ ಮಾಡಿದ್ದನು.

ಸುಳ್ಳು ಸುದ್ದಿ ಹರಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಪರಾಧ ವಿಭಾಗ ಪೊಲೀಸರು ಕೆನೆತ್‌ ಸಿಲ್ವಿರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪರಿಕ್ಕರ್‌ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇನ್ನು ಒಂದು ತಿಂಗಳಿನಲ್ಲಿ ಅವರು ಭಾರತಕ್ಕೆ ಹಿಂದಿರುಗುತ್ತಾರೆ ಎಂದು ಗೋವಾ ಬಿಜೆಪಿ ಕಾರ್ಯದರ್ಶಿ ಸದಾನಂದ್‌‌ ತಾನ್ವಡೆ ಹೇಳಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿರುವ ಪರಿಕ್ಕರ್‌, ಗೋವಾ, ಮುಂಬೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ಬಿಪ್ಲಬ್ ಹೇಳಿಕೆಗೆ ರಾಜ್ಯಪಾಲ ತಥಾಗತ ರಾಯ್ ಸಹಮತ:
http://bit.ly/2qKCMkZ
►►ಮಿಥುನ್ ರೈ ಕೈತಪ್ಪಿದ ಟಿಕೆಟ್: ಎನ್‌ಎಸ್‌ಯುಐ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ: http://bit.ly/2qISFbv
►►ಐಪಿಎಲ್-2018: ರಾಯಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ: http://bit.ly/2JYeD2T
►►ಮುನಿಸು ತರವೆ? ಜನಾರ್ದನ ಪೂಜಾರಿ ಭೇಟಿ ಮಾಡಿದ ರಮಾನಾಥ ರೈ: http://bit.ly/2J6qFWV
►►ಕಠುವಾ ಪ್ರಕರಣ ನಾಚಿಕೆಗೇಡು: ರಾಷ್ಟ್ರಪತಿ ಕೋವಿಂದ್: http://bit.ly/2J6qFWV
►►ಬೆಳ್ತಂಗಡಿ: ಅನುಭವಿ ಬಂಗೇರ v/s ಚತುರ ಸಂಘಟಕ ಪೂಂಜ: http://bit.ly/2HB5Zci
►►ಇಲ್ಯಾಸ್ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ: http://bit.ly/2Ha5pmI

Related Tags: Goa Police, Arrest, Fake News, Facebook Post, CM Manohar Parrikar’s Death, Kenneth Silveira, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ