ಮಹಾಭಾರತದ ಕಾಲದಲ್ಲಿ ಇಂಟರ್ನೆಟ್ ಇತ್ತು: ಬಿಪ್ಲಬ್ ಹೇಳಿಕೆಗೆ ರಾಜ್ಯಪಾಲ ತಥಾಗತ ರಾಯ್ ಸಹಮತ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಮಹಾಭಾರತ ಕಾಲದಲ್ಲಿ ಇಂಟರ್ನೆಟ್ ಹಾಗೂ ಸ್ಯಾಟಲೈಟ್ ವ್ಯವಸ್ಥೆಯಿತ್ತು ಎಂಬ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿಕೆಗೆ ಅಲ್ಲಿನ ರಾಜ್ಯಪಾಲ ತಥಾಗತ ರಾಯ್ ಸಹಮತ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಹೇಳಿರುವುದು ಪ್ರಾಸಂಗಿಕವಾಗಿದೆ. ಇಂಟರ್ನೆಟ್, ಉಪಗೃಹದ ವ್ಯವಸ್ಥೆ ಬೇರೆ ರೂಪದಲ್ಲಿ ಅಂದಿನ ದಿನದಲ್ಲೂ ಇತ್ತು ಎಂದು ರಾಯ್ ಬಿಪ್ಲಬ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪುರಾಣ ಕಾಲದಲ್ಲಿ ಏನೆಲ್ಲ ನಡೆದಿತ್ತು ಎಂದು ತ್ರಿಪುರಾ ಮುಖ್ಯಮಂತ್ರಿಯವರು ಹೇಳಿದ್ದು ಸರಿ ಇದೆ. ಕೆಲವೊಂದು ಮಾದರಿ ಮತ್ತು ಅಧ್ಯಯನ ಇಲ್ಲದೆ ದಿವ್ಯ ದೃಷ್ಟಿ, ಪುಪ್ಪಕ ರಥ ಎಂಬುದನ್ನೆಲ್ಲಾ ಇತ್ತು ಎಂದು ಊಹಿಸಿಕೊಳ್ಳುವುದು ಅಸಾಧ್ಯ ಎಂದು ರಾಯ್ ಟ್ವೀಟ್ ಮಾಡಿದ್ದಾರೆ.

ಇಂಟರ್ನೆಟ್ ಹಾಗೂ ಸ್ಯಾಟಲೈಟ್ ವ್ಯವಸ್ಥೆ ಲಕ್ಷಾಂತರ ವರ್ಷಗಳ ಹಿಂದೆ ಭಾತರದದಲ್ಲಿ ಅಸ್ತತ್ವದಲ್ಲಿತ್ತು. ನಮ್ಮದು ಅತ್ಯಂತ ಶ್ರೀಮಂತ ಸಂಸ್ಕೃತಿಯುಳ್ಳ ರಾಷ್ಟ್ರ. ಪ್ರಸ್ತುತ ಇಂಟರ್ನೆಟ್ ವ್ಯವಸ್ಥೆಯಲ್ಲಿ ನಾವು ಸಾಕಷ್ಟು ಮುಂದಿದ್ದೇವೆ.

ಮೈಕ್ರೋಸಾಪ್ಟ್, ಅಮೆರಿಕಾ ಸಂಸ್ಥೆಗಳಲ್ಲಿ ಬಹುತೇಕ ಇಂಜಿನಿಯರ್‌‍ಗಳು ಭಾರತದವರಾಗಿದ್ದಾರೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಹೇಳಿದ್ದರು.

ಅಲ್ಲದೇ ಇಂಟರ್ನೆಟ್ ಇಲ್ಲದೆ ರಾಜ ಧೃತರಾಷ್ಟ್ರನಿಗೆ ಸಂಜಯ್‌ ಹೇಗೆ ಕುರುಕ್ಷೇತ್ರದಲ್ಲಿ ನಡೆದ ಯುದ್ಧದ ಬಗ್ಗೆ ಹೇಳುತ್ತಿದ್ದ ಎಂದು ಪ್ರಶ್ನಿಸಿದ ಅವರು, ಇದರಿಂದ ತಿಳಿಯುತ್ತೆ ನಮ್ಮ ದೇಶದಲ್ಲಿ ಆ ಕಾಲದಲ್ಲೇ ಇಂಟರ್ನೆಟ್ ಹಾಗೂ ಸ್ಯಾಟ್‌ಲೈಟ್‌ ವ್ಯವಸ್ಥೆ ಇತ್ತು ಎಂಬುವುದು ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದರು.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಮಿಥುನ್ ರೈ ಕೈತಪ್ಪಿದ ಟಿಕೆಟ್: ಎನ್‌ಎಸ್‌ಯುಐ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ:
http://bit.ly/2qISFbv
►►ಐಪಿಎಲ್-2018: ರಾಯಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ್ಸ್‌ಗೆ ಜಯ: http://bit.ly/2JYeD2T
►►ಮುನಿಸು ತರವೆ? ಜನಾರ್ದನ ಪೂಜಾರಿ ಭೇಟಿ ಮಾಡಿದ ರಮಾನಾಥ ರೈ: http://bit.ly/2J6qFWV
►►ಕಠುವಾ ಪ್ರಕರಣ ನಾಚಿಕೆಗೇಡು: ರಾಷ್ಟ್ರಪತಿ ಕೋವಿಂದ್: http://bit.ly/2J6qFWV
►►ಬೆಳ್ತಂಗಡಿ: ಅನುಭವಿ ಬಂಗೇರ v/s ಚತುರ ಸಂಘಟಕ ಪೂಂಜ: http://bit.ly/2HB5Zci
►►ಇಲ್ಯಾಸ್ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ: http://bit.ly/2Ha5pmI

Related Tags: Mahabharata, Internet, Tripura Governor, Tathagata Roy, Biplab Deb, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ