ಹೆಗಡೆ ಹತ್ಯೆ ಯತ್ನವಲ್ಲ. ಆಕಸ್ಮಿಕ ಅಪಘಾತ: ಪ್ರಾಥಮಿಕ ತನಿಖೆಯ ಬಳಿಕ ಪೊಲೀಸ್ ಹೇಳಿಕೆ

ಕರಾವಳಿ ಕರ್ನಾಟಕ ವರದಿ

ಹಾವೇರಿ:
ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಬೆಂಗಾವಲು ಕಾರಿಗೆ ಲಾರಿ ಢಿಕ್ಕಿ ಆಕಸ್ಮಿಕ ಅಪಘಾತ. ಸಚಿವರ ದೂರಿದಂತೆ ಹತ್ಯೆಗೆ ಹುನ್ನಾರ ನಡೆದಿಲ್ಲ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹಾವೇರಿ ಎಸ್‌ಪಿ ಪರಶುರಾಮ ಸ್ಪಷ್ಟಪಡಿಸಿದ್ದಾರೆ.

ಲಾರಿ ಚಾಲಕ ನಾಸೀರ ಅಹ್ಮದ್ ಮಾಫೀಜ್ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಮುತ್ತಿನಕಟ್ಟೆ ಗ್ರಾಮದ ನಿವಾಸಿ. ಭಾನುವಾರ ರಾತ್ರಿ ಎನ್‌ಆರ್ ಪುರದಿಂದ ರಬ್ಬರ್ ವುಡ್ ಲೋಡ್ ಮಾಡಿಕೊಂಡು ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಗೆ ಅನ್‍ಲೋಡ್ ಮಾಡಿದ್ದಾರೆ.

ಸೋಮವಾರ ಹುಬ್ಬಳಿಯಲ್ಲಿ ಉಳಿದುಕೊಂಡು ಮಂಗಳವಾರ ಅದೇ ಲಾರಿಯಲ್ಲಿ ಕಿರಾಣಿ ಸಾಮಾಗ್ರಿಗಳನ್ನು ಲೋಡ್ ಮಾಡಿಕೊಂಡು ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಸಂಬಂಧಿಕರ ಫೋನ್ ಬಂದಿದೆ. ಹಾಗೇ ಮಾತನಾಡುತ್ತಾ ಹಲಗೇರಿ ಬೈಪಾಸ್‌ಗೆ ಹೋಗದೇ ಓವರ್ ಬ್ರಿಡ್ಜ್‌ಗೆ ಬಂದಿದ್ದಾರೆ.

100 ಮೀಟರ್‌ನಷ್ಟು ಬಂದಾಗ ದಾರಿ ತಪ್ಪಿದೆ ಎಂದು ತಿಳಿದ ಕೂಡಲೇ ಅಲ್ಲೆ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಸಚಿವರ ಬೆಂಗಾಲು ವಾಹನಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಲಾರಿ ಮತ್ತು ಚಾಲಕನನ್ನು ವಶಪಡಿಸಿಕೊಂಡಿದ್ದು, ವಿಚಾರಣೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಮುತ್ತಿನಕಟ್ಟೆ ಗ್ರಾಮಕ್ಕೆ ನಮ್ಮ ಪೊಲೀಸರು ತಂಡ ಕಳುಹಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನಾಸೀರ್ ಮೊಬೈಲ್ ವಶಕ್ಕೆ ಪಡೆದಿದ್ದು, ಕಾಲ್ ಡಿಟೇಲ್ಸ್ ಪರಿಶೀಲಿಸಲಾಗುತ್ತಿದೆ. ಮೇಲ್ನೊಟಕ್ಕೆ ಸಚಿವರ ಹತ್ಯೆಗೆ ಯತ್ನ ನಡೆದಿದೆ ಎನ್ನುವುದು ಕಂಡು ಬಂದಿಲ್ಲ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಸಮೀಪ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ ವೇಗವಾಗಿ ನುಗ್ಗಿ ಬಂದು ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎಎಸ್ಐಗೆ ಗಾಯವಾಗಿದೆ. ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಸಿದ್ದರಾಮಯ್ಯನವರ ವಿರುದ್ದ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳೇ, ನಿಮಗೆ ತಾಕತ್ತಿದ್ದರೆ ಅನಂತ ಕುಮಾರ ಹೆಗಡೆ ಅವರನ್ನು ರಾಜಕೀಯವಾಗಿ ಎದುರಿಸಿ. ಅದನ್ನು ಬಿಟ್ಟು ಈ ರೀತಿಯ ಪ್ರಯತ್ನ ಮಾಡಿದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆಗ ನಿಮ್ಮನ್ನು ಯಾರೂ ಕಾಪಾಡುವುದಿಲ್ಲ ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಘೋರ ದುರಂತ: ನದಿಗೆ ಉರುಳಿದ ದಿಬ್ಬಣದ ಟ್ರಕ್. 21 ಮಂದಿ ಮೃತ್ಯು:
http://bit.ly/2EVvwI6
►►ಬೆಂಗಾವಲು ಕಾರಿಗೆ ಲಾರಿ ಢಿಕ್ಕಿ: ಕೊಲೆ ಸಂಚು ಎಂದ ಸಚಿವ ಹೆಗಡೆ: http://bit.ly/2H9yT46
►►ಕಠುವಾ ಪ್ರಕರಣ: ಸಂತ್ರಸ್ತೆಯ ಕುಟುಂಬ ಮತ್ತು ವಕೀಲರಿಗೆ ಭದ್ರತೆಗೆ ಸುಪ್ರೀಂ ಸೂಚನೆ: http://bit.ly/2qC15C7

Related Tags: Truck Hits Escort Vehicle, Anantkumar Hegde, Minister, Suspects Attempt on Life, Tweets, Accident, SP, Parashuram, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ