ಘೋರ ದುರಂತ: ನದಿಗೆ ಉರುಳಿದ ದಿಬ್ಬಣದ ಟ್ರಕ್. 21 ಮಂದಿ ಮೃತ್ಯು

ಕರಾವಳಿ ಕರ್ನಾಟಕ ವರದಿ

ಭೋಪಾಲ್:
ಮದುವೆ ದಿಬ್ಬಣದ ಟ್ರಕ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಪರಿಣಾಮ 21 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಜನರಿಗೆ ಗಾಯವಾಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಅಮೆಲಿಯಾ ಗ್ರಾಮದಲ್ಲಿ ತಡರಾತ್ರಿ ವರದಿಯಾಗಿದೆ.

ಟ್ರಕ್ ಸಿಂಗ್ರೌಲಿ ಜಿಲ್ಲೆಯಿಂದ ಹೊರಟು ಸಿಧಿ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ಜನರನ್ನು ಕೊಂಡೊಯ್ಯುತ್ತಿದ್ದಾಗ ಟ್ರಕ್ ಅಮೆಲಿಯಾ ಬಳಿಯ ಜೋಗ್‌ದಾಹ ಸೇತುವೆ ಬಳಿ 70 ಅಡಿ ಆಳಕ್ಕೆ ಉರುಳಿದೆ.

ಹಲವರು ವಾಹನದೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.

ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿ ಹಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನು ಕೆಲವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ರೂ.50,000 ಪರಿಹಾರ ಘೋಷಣೆ ಮಾಡಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಬೆಂಗಾವಲು ಕಾರಿಗೆ ಲಾರಿ ಢಿಕ್ಕಿ: ಕೊಲೆ ಸಂಚು ಎಂದ ಸಚಿವ ಹೆಗಡೆ:
http://bit.ly/2H9yT46
►►ಕಠುವಾ ಪ್ರಕರಣ: ಸಂತ್ರಸ್ತೆಯ ಕುಟುಂಬ ಮತ್ತು ವಕೀಲರಿಗೆ ಭದ್ರತೆಗೆ ಸುಪ್ರೀಂ ಸೂಚನೆ: http://bit.ly/2qC15C7

Related Tags: Marriage Party Tragedy, 21 Killed, Truck Falls Off Sone River Bridge, Madhya Pradesh, Sidhi District, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ