ಬೆಂಗಾವಲು ಕಾರಿಗೆ ಲಾರಿ ಢಿಕ್ಕಿ: ಕೊಲೆ ಸಂಚು ಎಂದ ಸಚಿವ ಹೆಗಡೆ

ಕರಾವಳಿ ಕರ್ನಾಟಕ ವರದಿ

ಹಾವೇರಿ:
ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಅನಂತ ಕುಮಾರ್ ಹೆಗಡೆ ಅವರ ಬೆಂಗಾವಲು ವಾಹನಕ್ಕೆ ಲಾರಿ ಢಿಕ್ಕಿ ಹೊಡೆದಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮ್ಮ‌ ವಾಹನದಲ್ಲಿ ಹೋಗುತ್ತಿರುವಾಗ ಲಾರಿಯೊಂದು ಬಂದು ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಹಾನಿಯುಂಟು‌‌ ಮಾಡಲು ಯತ್ನಿಸಿತು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ 11:30 ರ ವೇಳೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಅನಂತ ಕುಮಾರ ಹೆಗಡೆ ಕಾರಿನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಲಾರಿಯೊಂದು ಸಚಿವರ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದಿದೆ.

ಪರಿಣಾಮ ಅನಂತ್ ಕುಮಾರ್ ಅವರ ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿಯೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಹೆಗಡೆ, 'ಇದು ನನ್ನನ್ನು ಕೊಲೆ ಮಾಡಲು ಬೇಕೆಂದೇ ಮಾಡಿದ ಪಿತೂರಿ. ನಮ್ಮ ಸಹಾಯಕ ಸಿಬ್ಬಂದಿಯೊಬ್ಬರು ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾನು ಇದ್ದ ವಾಹನ ವೇಗವಾಗಿ ಚಲಿಸುತ್ತಿದ್ದುದರಿಂದ ಪಾರಾದೆ. ಈ ಕುರಿತು ಗಂಭೀರ ತನಿಖೆ ಆಗಬೇಕು' ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಘಟನೆಗೂ ಮುನ್ನ ಆತ ಯಾವುದೇ ರೀತಿಯ ಮದ್ಯಸೇವನೆ ಮಾಡಿರಲಿಲ್ಲ ಎಂಬುದು ದೃಢವಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Related Tags: Truck Hits Escort Vehicle, Anantkumar Hegde, Minister, Suspects Attempt on Life, Tweets, Accident, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ