ಸಂಸದ ಪ್ರತಾಪ್ ಸಿಂಹಗೆ ಬುದ್ದಿ ಮಾತು ಹೇಳಿದ ದಿನೇಶ್ ಗುಂಡೂರಾವ್ ಪತ್ನಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಮೈಸೂರಿನ ಸಂಸದರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಬದಲು ಕವಿ, ಸಾಹಿತಿ ಕುವೆಂಪು ಅವರ ವಿಶ್ವ ಮಾನವ ತತ್ವವನ್ನು ಅನುಸರಿಸಲಿ ಎಂದು ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸಂಸದ ಪ್ರತಾಪ ಸಿಂಹ ಗುಂಡೂರಾವ್ ಪತ್ನಿ ಹೆಸರು ಪ್ರಸ್ತಾಪಿಸಿದಕ್ಕೆ ಟಬು ರಾವ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪ್ರತಾಪ್ ಸಿಂಹ ವಿರುದ್ದ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಟಬು ರಾವ್, ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರು ನನ್ನ ಬಗ್ಗೆ ಹೇಳಿರುವ ಮಾತುಗಳು ನನಗೆ ನೋವನ್ನುಂಟುಮಾಡಿದೆ. ಮಿಸ್ಟರ್ ಸಿಂಹ ಅವರಿಗೆ ನನ್ನ ಪತಿ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಬಗ್ಗೆ ಆಕ್ರೋಶವಿದ್ದರೆ ಅದನ್ನು ಅವರ ಜತೆಯೇ ತೀರಿಸಿಕೊಳ್ಳಲಿ. ಅದು ಬಿಟ್ಟು ಮಹಿಳೆಯ ಬಗ್ಗೆ ಈ ರೀತಿ ಹೇಳಿ ವಿವಾದವನ್ನುಂಟು ಮಾಡುವುದು ಹೇಡಿತನ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ನನ್ನನ್ನು ಸಂಸದರು ಬೇಗಂ ಟಬು ಎಂದಿದ್ದಾರೆ. ಇದು ಅವರಲ್ಲಿರುವ  ಕೋಮುವಾದ ಮತ್ತು ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ. ಮುಸ್ಲಿಂ ಆಗಿರುವ ನಾನು ಬ್ರಾಹ್ಮಣನನ್ನು ಮದುವೆಯಾಗಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಎರಡು ದಶಕಗಳಿಂದ ನಾವು ದಾಂಪತ್ಯ ಜೀವನ ಸಾಗಿಸುತ್ತಿದ್ದೇವೆ ಎಂದರೆ ಅದು ದೇಶದಲ್ಲಿರುವ ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಸ್ವಾತಂತ್ರ್ಯ ನಂತರದಲ್ಲಿ ಇದು ನಮ್ಮ ಕರಾಳ ಸಮಯ: ಮೋದಿಗೆ ನಿವೃತ್ತ ಅಧಿಕಾರಿಗಳ ಪತ್ರ:
http://bit.ly/2qAxDvK
►►ಬಿಜೆಪಿ ಎರಡನೆ ಪಟ್ಟಿ. ಬೈಂದೂರಿಗೆ ಸುಕುಮಾರ ಶೆಟ್ಟಿ. ಹೆಗ್ಡೆಗೆ ಕೊನೆಗೂ ನಿರಾಸೆ!: http://bit.ly/2H5ULx5
►►ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲ ಆರೋಪಿಗಳು ಖುಲಾಸೆ: http://bit.ly/2H3KMZr
►►ಆಸೀಫಾಗೆ ಮನಮಿಡಿದ ಮಂಗಳೂರಿನ ಕಾಂಗ್ರೆಸ್ ಕಾರ್ಪೊರೇಟರ್ ಏನು ಮಾಡುತ್ತಾರಂತೆ ಗೊತ್ತೆ? ಈ ವರದಿ ಓದಿ: http://bit.ly/2vi1oqL
►►ಕಾರ್ಕಳದಲ್ಲಿ ಉದಯ ಕುಮಾರ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್: ಜೋರಾದ ಮೊಯ್ಲಿ ಹಟಾವೊ ಕೂಗು: http://bit.ly/2vfBGmQ
►►ಮರಕ್ಕೆ ಢಿಕ್ಕಿಯಾದ ಖಾಸಗಿ ಬಸ್: ಇಬ್ಬರು ಪ್ರಯಾಣಿಕರ ಸಾವು. ಹಲವರಿಗೆ ಗಾಯ: http://bit.ly/2JQn7ZQ
►►ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2EMbkIx

Related Tags: Bengaluru, Dinesh Gundu Rao''s Wife, Pratap Simha, Tabu Rao, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ