ಸ್ವಾತಂತ್ರ್ಯ ನಂತರದಲ್ಲಿ ಇದು ನಮ್ಮ ಕರಾಳ ಸಮಯ: ಮೋದಿಗೆ ನಿವೃತ್ತ ಅಧಿಕಾರಿಗಳ ಪತ್ರ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಮೋದಿಯವರಿಗೆ ದುಃಖ ಬರುವುದಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಇದು ನಮ್ಮ ಕರಾಳ ಸಮಯ ಎಂದು ಕಠುವಾ ಹಾಗೂ ಉನ್ನಾವ್ ಹೇಯ ಅತ್ಯಾಚಾರ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಸರ್ಕಾರಿ ನಿವೃತ್ತ ಅಧಿಕಾರಿಗಳ ತಂಡವೊಂದು ಪತ್ರ ಬರೆದಿದೆ.

8 ವರ್ಷದ ಬಾಲಕಿ ಮೇಲೆ ಅನಾಗರಿಕವಾಗಿ ಕ್ರೂರವಾಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದನ್ನು ನೋಡಿದ್ದರೆ ಅಪ್ರಾಮಾಣಿಕತೆ ಆಳದಲ್ಲಿ ಮುಳುಗಿರುವುದನ್ನು ತೋರಿಸುತ್ತದೆ. ಸ್ವಾತಂತ್ರ್ಯ ನಂತರ ಇದು ನಮ್ಮ ಕರಾಳ ಸಮಯವಾಗಿದ್ದು, ಸರ್ಕಾರದ ಹೊಣೆಯನ್ನು ಕಂಡುಹಿಡಿಯಬೇಕಾಗಿದೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ನಮ್ಮ ರಾಜಕೀಯ ಪಕ್ಷಗಳ ನಾಯಕರು ಅಸಮರ್ಪಕ ಹಾಗೂ ದುರ್ಬಲ ಮನಸ್ಥಿತಿ ಉಳ್ಳವರಾಗಿದ್ದಾರೆ. ಜೀವನದ ಅಂತ್ಯಭಾಗದಲ್ಲಿ ಬೆಳಕು ಕಾಣದಂತಾಗಿದ್ದು, ಅವಮಾನದಿಂದ ನೇಣಿಗೆ ಕೊರಳೊಡ್ಡಬೇಕಾಗಿದೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನರೇಂದ್ರ ಮೋದಿ ಪ್ರಧಾನಿಯಾಗಿರುವ ಸಂದರ್ಭದಲ್ಲಿಯೇ ಎರಡು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇಂತಹ ಭಯಾನಕ ಸ್ಥಿತಿಯ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಲಿದ್ದಾರೆಯೇ ಎಂದು 49 ವರ್ಷದ ಸರ್ಕಾರಿ ನಿವೃತ್ತ  ಅಧಿಕಾರಿಗಳ ತಂಡ ಪ್ರಶ್ನಿಸಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಬಿಜೆಪಿ ಎರಡನೆ ಪಟ್ಟಿ. ಬೈಂದೂರಿಗೆ ಸುಕುಮಾರ ಶೆಟ್ಟಿ. ಹೆಗ್ಡೆಗೆ ಕೊನೆಗೂ ನಿರಾಸೆ!:
http://bit.ly/2H5ULx5
►►ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲ ಆರೋಪಿಗಳು ಖುಲಾಸೆ: http://bit.ly/2H3KMZr
►►ಆಸೀಫಾಗೆ ಮನಮಿಡಿದ ಮಂಗಳೂರಿನ ಕಾಂಗ್ರೆಸ್ ಕಾರ್ಪೊರೇಟರ್ ಏನು ಮಾಡುತ್ತಾರಂತೆ ಗೊತ್ತೆ? ಈ ವರದಿ ಓದಿ: http://bit.ly/2vi1oqL
►►ಕಾರ್ಕಳದಲ್ಲಿ ಉದಯ ಕುಮಾರ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್: ಜೋರಾದ ಮೊಯ್ಲಿ ಹಟಾವೊ ಕೂಗು: http://bit.ly/2vfBGmQ
►►ಮರಕ್ಕೆ ಢಿಕ್ಕಿಯಾದ ಖಾಸಗಿ ಬಸ್: ಇಬ್ಬರು ಪ್ರಯಾಣಿಕರ ಸಾವು. ಹಲವರಿಗೆ ಗಾಯ: http://bit.ly/2JQn7ZQ
►►ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2EMbkIx

Related Tags: Retired Officers Letter to Modi, Asifa Rape and Murder, Narendra Modi. Kathuva, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ