ಬಿಜೆಪಿ ಎರಡನೆ ಪಟ್ಟಿ. ಬೈಂದೂರಿಗೆ ಸುಕುಮಾರ ಶೆಟ್ಟಿ. ಹೆಗ್ಡೆಗೆ ಕೊನೆಗೂ ನಿರಾಸೆ!

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು ಕುತೂಹಲ ಕೆರಳಿಸಿದ್ದ ಬೈಂದೂರು ಕ್ಷೇತ್ರಕ್ಕೆ ಬಿಎಂಎಸ್ ಎಂದೇ ಖ್ಯಾತರಾಗಿರುವ ಬಿ. ಎಂ ಸುಕುಮಾರ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.

ತನ್ಮೂಲಕ ಕುಂದಾಪುರ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್ ಕೈ ತಪ್ಪಿದ್ದ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಅವರಿಗೆ ಬೈಂದೂರಿನಲ್ಲೂ ಟಿಕೆಟ್ ಸಿಗದೆ ನಿರಾಸೆಯಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಸುಕುಮಾರ ಶೆಟ್ಟಿ ಸೋತ ಬಳಿಕವೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಜನರ ನಡುವೆ ಸಕ್ರಿಯರಾಗಿದ್ದರು.

ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿ.ಎಂ.ಸುಕುಮಾರ ಶೆಟ್ಟಿ ಅವರಿಗೆ ಬೈಂದೂರಿನಿಂದ ಬಿಜೆಪಿ ಟಿಕೆಟ್ ಸಿಗುವುದು ಖಚಿತ ಎಂಬ ವಾತಾವರಣವಿತ್ತು.

ಆದರೆ ಈ ನಡುವೆ ಬಿಜೆಪಿ ಸೇರಿದ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಅವರು ಬೈಂದೂರಿನಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇಟ್ಟುಕೊಂಡು ಕ್ಷೇತ್ರದಾದ್ಯಂತ ತನ್ನ ಬೆಂಬಲಿಗರ ಪಡೆಯನ್ನು ಕಟ್ಟುತ್ತಿದ್ದರು. ಹೀಗಾಗಿ ಸುಕುಮಾರ ಶೆಟ್ಟಿ ಮತ್ತು ಜಯಪ್ರಕಾಶ ಹೆಗ್ಡೆ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಹೈಕಮಾಂಡ್ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ಕೊಟ್ಟು ಸ್ಪರ್ಧೆಗೆ ಅವಕಾಶ ನೀಡಿದೆ.

ಬಿಜೆಪಿ ಅಭ್ಯರ್ಥಿ ಸುಕುಮಾರ ಶೆಟ್ಟಿ 'ಕರಾವಳಿ ಕರ್ನಾಟಕ'ದ ಜೊತೆ ಮಾತನಾಡಿ "ಈ ಬಾರಿ ಬಿಜೆಪಿಯ ಗೆಲುವು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೈಂದೂರನ್ನು ಕರ್ನಾಟಕದಲ್ಲೆ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದು ತನ್ನ ಗುರಿಯಾಗಿದ್ದು ಶಿಕ್ಷಣ, ಆರೋಗ್ಯ, ನೀರು ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಪಣ ತೊಡುವುದಾಗಿ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಜಯಪ್ರಕಾಶ ಹೆಗ್ಡೆಗೆ ನಿರಾಸೆ!
ಕುಂದಾಪುರ ಅಥವಾ ಬೈಂದೂರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದರಲ್ಲಿ ತನಗೆ ಟಿಕೆಟ್ ಸಿಗುವುದು ಖಚಿತ ಎಂದು ನಂಬಿ ಕುಂದಾಪುರ ಮತ್ತು ಬೈಂದೂರು ಎರಡೂ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಎರಡೂ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ನಿರಾಶರಾಗಿದ್ದಾರೆ.

ಮೊದಲ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಎರಡು ಕ್ಷೇತ್ರಗಳಾದ ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದರೆ ಎರಡನೇ ಪಟ್ಟಿಯಲ್ಲಿ ಕೇವಲ ಉಡುಪಿ ಜಿಲ್ಲೆಯ ಬೈಂದೂರಿಗೆ ಮಾತ್ರ ಅವಕಾಶ ಕೊಡಲಾಗಿದೆ.
ಅತೀ ಕುತೂಹಲ ಕೆರಳಿಸಿದ ಉಡುಪಿ ಮತ್ತು ಕಾಪು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಎರಡನೇ ಪಟ್ಟಿಯಲ್ಲಿ ಇಲ್ಲದೆ ಇರುವುದು ಎರಡೂ ಕ್ಷೇತ್ರಗಳ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.

ಉಳಿದಂತೆ ದ. ಕ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಇನ್ನೂ ಸಹ ಅಭ್ಯರ್ಥಿಗಳನ್ನು ಪ್ರಕಟಿಸದೆ ಬಿಜೆಪಿ ಕುತೂಹಲ ಕಾಯ್ದಿರಿಸಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲ ಆರೋಪಿಗಳು ಖುಲಾಸೆ:
http://bit.ly/2H3KMZr
►►ಆಸೀಫಾಗೆ ಮನಮಿಡಿದ ಮಂಗಳೂರಿನ ಕಾಂಗ್ರೆಸ್ ಕಾರ್ಪೊರೇಟರ್ ಏನು ಮಾಡುತ್ತಾರಂತೆ ಗೊತ್ತೆ? ಈ ವರದಿ ಓದಿ: http://bit.ly/2vi1oqL
►►ಕಾರ್ಕಳದಲ್ಲಿ ಉದಯ ಕುಮಾರ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್: ಜೋರಾದ ಮೊಯ್ಲಿ ಹಟಾವೊ ಕೂಗು: http://bit.ly/2vfBGmQ
►►ಮರಕ್ಕೆ ಢಿಕ್ಕಿಯಾದ ಖಾಸಗಿ ಬಸ್: ಇಬ್ಬರು ಪ್ರಯಾಣಿಕರ ಸಾವು. ಹಲವರಿಗೆ ಗಾಯ: http://bit.ly/2JQn7ZQ
►►ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2EMbkIx
►►ನಕ್ಸಲ್ ಪ್ರತಿಭಟನೆ. ಬಿಜೆಪಿ ಆರೋಪದ ವಿರುದ್ದ ಕಾನೂನು ಹೋರಾಟ: ನಟ ಚೇತನ್: http://bit.ly/2HnUd5e
►►ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ: http://bit.ly/2JN8VBc
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ: http://bit.ly/2GYwdC9

Related Tags: BJP Candidates, Second List, Karnataka Elections, Sukumar Shetty, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ