ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲ ಆರೋಪಿಗಳು ಖುಲಾಸೆ

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
2007ರಲ್ಲಿ ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ನಾಲ್ಕನೇ ಹೆಚ್ಚುವರಿ ಮೆಟ್ರೋಪಾಲಿಟನ್‌ ಸೆಷನ್ಸ್‌ ಹಾಗೂ ಎನ್‌ಐಎ ವಿಶೇಷ ನ್ಯಾಯಾಲಯ ಕಳೆದ ವಾರವೇ ವಿಚಾರಣೆ ಪೂರ್ಣಗೊಳಿಸಿದ್ದು, ಇಂದು ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ನಬಕುಮಾರ್ ಶ್ರೀಕರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ ಅಲಿಯಾಸ್ ಅಜಯ್ ತಿವಾರಿ, ಲಕ್ಷ್ಮಣ್ ದಾಸ್ ಮಹಾರಾಜ್, ಮೋಹನ್ ಲಾಲ್ ರಾತೇಶ್ವರ್ ಮತ್ತು ರಾಜೇಂದ್ರ ಚೌಧರಿ ಪ್ರಕರಣದಲ್ಲಿ ಖುಲಾಸೆಗೊಂಡ ಪ್ರಮುಖ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಅಭಿನವ್ ಭಾರತ ರತ್ನ ಸಂಘಟನೆಯ ಸದಸ್ಯರಾಗಿದ್ದರು.

ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ 2007 ಮೇ 18 ರಂದು ಶುಕ್ರವಾರದ ನಮಾಜ್ ವೇಳೆ ಬಾಂಬ್ ಸ್ಫೋಟಗೊಂಡು 8 ಮಂದಿ ಮೃತಪಟ್ಟಿದ್ದು, 58 ಮಂದಿ ಗಾಯಗೊಂಡಿದ್ದರು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಫೈರಿಂಗ್ ಮಾಡಿದ ವೇಳೆ ಐವರು ಮೃತಪಟ್ಟಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಆಸೀಫಾಗೆ ಮನಮಿಡಿದ ಮಂಗಳೂರಿನ ಕಾಂಗ್ರೆಸ್ ಕಾರ್ಪೊರೇಟರ್ ಏನು ಮಾಡುತ್ತಾರಂತೆ ಗೊತ್ತೆ? ಈ ವರದಿ ಓದಿ:
http://bit.ly/2vi1oqL
►►ಕಾರ್ಕಳದಲ್ಲಿ ಉದಯ ಕುಮಾರ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್: ಜೋರಾದ ಮೊಯ್ಲಿ ಹಟಾವೊ ಕೂಗು: http://bit.ly/2vfBGmQ
►►ಮರಕ್ಕೆ ಢಿಕ್ಕಿಯಾದ ಖಾಸಗಿ ಬಸ್: ಇಬ್ಬರು ಪ್ರಯಾಣಿಕರ ಸಾವು. ಹಲವರಿಗೆ ಗಾಯ: http://bit.ly/2JQn7ZQ
►►ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2EMbkIx
►►ನಕ್ಸಲ್ ಪ್ರತಿಭಟನೆ. ಬಿಜೆಪಿ ಆರೋಪದ ವಿರುದ್ದ ಕಾನೂನು ಹೋರಾಟ: ನಟ ಚೇತನ್: http://bit.ly/2HnUd5e
►►ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ: http://bit.ly/2JN8VBc
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ: http://bit.ly/2GYwdC9

Related Tags: All Accused Acquitted, Swami Aseemanand, Mecca Masjid Blast, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ