ಆಸೀಫಾಗೆ ಮನಮಿಡಿದ ಮಂಗಳೂರಿನ ಕಾಂಗ್ರೆಸ್ ಕಾರ್ಪೊರೇಟರ್ ಏನು ಮಾಡುತ್ತಾರಂತೆ ಗೊತ್ತೆ? ಈ ವರದಿ ಓದಿ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಜಮ್ಮುವಿನ ಎಂಟರ ಹರಯದ ಬಾಲಕಿ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ ಕೇರಳ ಪತ್ರಕರ್ತ ರಜಿತ್ ರಾಮ್ ತನ್ನ ಮಗಳಿಗೆ ಸಂತ್ರಸ್ತೆಯ ಹೆಸರಿಟ್ಟು ದೇಶಾದ್ಯಂತ ಭಾರೀ ಸುದ್ದಿಯಾದ ಬೆನ್ನಲ್ಲೇ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ ತನ್ನ ಮಗಳ ಹೆಸರಿಗೆ ಕಠುವಾ ಸಂತ್ರಸ್ತ ಬಾಲಕಿಯ ಹೆಸರನ್ನು ಜೋಡಿಸುವೆ ಎಂದಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನದ್ದೇಶಿ ಮಾತನಾಡಿದ ಅವರು, ಕಠುವಾ ಘಟನೆ ಅತ್ಯಂತ ಹೇಯವಾದುದು. ಒಬ್ಬ ಮಹಿಳೆಯಾಗಿ ಅದನ್ನು ಬಲವಾಗಿ ಖಂಡಿಸುತ್ತೇನೆ. ದೇಶದಲ್ಲಿ ಅನೇಕ ಹೆಣ್ಣು ಮಕ್ಕಳು ಅತ್ಯಾಚಾರದಂತಹ ನೀಚ ಕೃತ್ಯಕ್ಕೆ ಬಲಿಯಾಗುತ್ತಿರುವುದು ಖೇದನೀಯ. ನನ್ನ ಮಗಳು ಪೃಥ್ವಿಯ ಹೆಸರಿನ ಮೊದಲು ಕಠುವಾ ಸಂತ್ರಸ್ತೆಯ ಹೆಸರನ್ನೂ ಸೇರಿಸುತ್ತೇನೆ ಎಂದಿದ್ದಾರೆ.

ಭಾರತ್ ಮಾತಾಕೀ ಜೈ ಎನ್ನುವವರು ಮಹಿಳೆಯರಿಗೆ ಯಾವುದೇ ರಕ್ಷಣೆಯನ್ನು ಕೊಡುತ್ತಿಲ್ಲ. ಇದಕ್ಕೆ ಸಾಕ್ಷಿ, ಸ್ವತಃ ನಾನೇ ಹಿಂಸೆ ಅನುಭವಿಸಿರುವುದು. ಕಳೆದ ಲೋಕಸಭಾ ಚುನಾವಣೆಯ ವೇಳೆ ಕೋಡಿಕೆರೆಯಲ್ಲಿ ಪ್ರಚಾರಕ್ಕೆ ಇಳಿದ ಸಂದರ್ಭದಲ್ಲಿ ನನ್ನನ್ನು ತಡೆದು ದೌರ್ಜನ್ಯ ನಡೆಸಿದ್ದರು.

ಹಿಂದೂಗಳೆಂದು ಕರೆಸಿಕೊಳ್ಳುವ ನನ್ನ ಸಹೋದರರು ಮಾಡಿರುವ ಕುತಂತ್ರಗಳ ವಿಡಿಯೋಗಳು ನನ್ನ ಬಳಿ ಇವೆ ಎಂದು ಕೆಲವೊಂದನ್ನು ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರದರ್ಶಿಸಿದರು.

ಸ್ವಘೋಷಿತ ಬಿಜೆಪಿ ಹಿಂದೂ ಕಾರ್ಯಕರ್ತರು ನಡೆಸುತ್ತಿರುವ ದೌರ್ಜನ್ಯಗಳಿಂದ ಭಾರತೀಯ ಮಹಿಳೆಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಾನು ಒಬ್ಬ ಭಾರತೀಯ ಮಹಿಳೆ ಎನ್ನಲು ನಾಚಿಕೆಪಡುವಂತಾಗಿದೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

ನಾನು ಭಾರತೀಯಳೆಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ. ಹೀಗೆಂದದ್ದಕ್ಕೆ ನನ್ನ ಕಾರಿಗೆ ಕಲ್ಲು ತೂರಲುಬಹುದು, ಆದರೆ ಕಾಶ್ಮೀರದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ. ಬಿಜೆಪಿ ಆಡಳಿತ ಹೆಣ್ಣು ಮಕ್ಕಳ ರಕ್ಷಣೆಯನ್ನೇ ಕಡೆಗಣಿಸಿದೆ. ನರೇಂದ್ರ ಮೋದಿ ಅವರಿಗೆ ಸಂಸಾರ ಜೀವನ ಅನುಭವವಿಲ್ಲ. ಅವರು ಹೇಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುತ್ತಾರೆ ಎಂದು ಕುಳಾಯಿ ಪ್ರಶ್ನಿಸಿದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕಾರ್ಕಳದಲ್ಲಿ ಉದಯ ಕುಮಾರ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್: ಜೋರಾದ ಮೊಯ್ಲಿ ಹಟಾವೊ ಕೂಗು:
http://bit.ly/2vfBGmQ
►►ಮರಕ್ಕೆ ಢಿಕ್ಕಿಯಾದ ಖಾಸಗಿ ಬಸ್: ಇಬ್ಬರು ಪ್ರಯಾಣಿಕರ ಸಾವು. ಹಲವರಿಗೆ ಗಾಯ: http://bit.ly/2JQn7ZQ
►►ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2EMbkIx
►►ನಕ್ಸಲ್ ಪ್ರತಿಭಟನೆ. ಬಿಜೆಪಿ ಆರೋಪದ ವಿರುದ್ದ ಕಾನೂನು ಹೋರಾಟ: ನಟ ಚೇತನ್: http://bit.ly/2HnUd5e
►►ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ: http://bit.ly/2JN8VBc
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ: http://bit.ly/2GYwdC9

Related Tags: Pratibha Kulai, Asifa, Jammu, Kathua Asifa, Gang Rape, Prithvi, Pressmeet, Mangalore, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ