ಕಾರ್ಕಳದಲ್ಲಿ ಉದಯ ಕುಮಾರ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್: ಜೋರಾದ ಮೊಯ್ಲಿ ಹಟಾವೊ ಕೂಗು

ಕರಾವಳಿ ಕರ್ನಾಟಕ ವರದಿ

ಕಾರ್ಕಳ:
ಕಾರ್ಕಳ ಕ್ಷೇತ್ರದಲ್ಲಿ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿ ಹೋಗಲು ವೀರಪ್ಪ ಮೊಯ್ಲಿಯೆ ಕಾರಣ ಎಂದು ಆರೋಪಿಸಿ ಇಂದು ಕಾರ್ಕಳದಲ್ಲಿ ಮುನಿಯಾಲು ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರು 'ಮೊಯ್ಲಿ ಹಟಾವೊ ಕಾಂಗ್ರೆಸ್ ಬಚಾವೊ' ಎಂದು ಘೋಷಣೆಗಳನ್ನು ಕೂಗುತ್ತಿದಾರೆ.

ಕಾರ್ಕಳದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಗೋಪಾಲ ಭಂಡಾರಿ, ಉದಯ ಕುಮಾರ ಶೆಟ್ಟಿ ಮತ್ತು ಹರ್ಷ ಮೊಯ್ಲಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಈ ನಡುವೆ ಮುನಿಯಾಲು ಉದಯ ಕುಮಾರ ಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಈ ಬಾರಿ ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಆದರೆ ಇದನ್ನೇ ಗುರಿಯಾಗಿಟ್ಟುಕೊಂಡ ವೀರಪ್ಪ ಮೊಯ್ಲಿ 'ಕಾಂಗ್ರೆಸ್ ಟಿಕೆಟ್ ದುಡ್ದಿರುವ ಗುತ್ತಿಗೆದಾರರ ಪಾಲಾಗುವುದನ್ನು ತಡೆಯಬೇಕು' ಎಂಬರ್ಥ ಬರುವಂತೆ ಟ್ವೀಟ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಟ್ವೀಟ್ ಅನ್ನು ಉದಯ ಕುಮಾರ ಶೆಟ್ಟರನ್ನೆ ಗುರಿಯಾಗಿಸಿ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು.

ಕೊನೆಗೆ ತಾನು ಅಂತಹ ಟ್ವೀಟ್ ಮಾಡಿಯೇ ಇಲ್ಲವೆಂದು ಮೊಯ್ಲಿ ಸ್ಪಷ್ಟನೆ ನೀಡಿದ್ದರು. ಬಳಿಕ ಚುನಾವಣೆಯಲ್ಲಿ ತನ್ನ ಮಗ ಹರ್ಷ ಮೊಯ್ಲಿಗೆ ಟಿಕೆಟ್ ನೀಡುವುದನ್ನು ಪರಿಗಣಿಸಬಾರದು ಎಂದು ಮೊಯ್ಲಿ ಹೇಳಿಕೆ ನೀಡಿದ್ದರು.

ಇದೀಗ ಮೊಯ್ಲಿ ಅವರಿಗೆ ನಿಷ್ಟಾವಂತರಾಗಿರುವ ಗೋಪಾಲ ಭಂಡಾರಿ ಅವರಿಗೆ ಕಾರ್ಕಳ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉದಯ ಕುಮಾರ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿ ಹೋಗಲು ವೀರಪ್ಪ ಮೊಯ್ಲಿ ಅವರೇ ಕಾರಣ ಎಂದು ಉದಯ ಕುಮಾರ ಶೆಟ್ಟಿ ಬೆಂಬಲಿಗರು ಕಾರ್ಕಳದಲ್ಲಿ ಪ್ರತಿಭಟನೆ ನಡೆಸುತ್ತಿದಾರೆ. ನೆರೆದಿರುವ ನೂರಾರು ಕಾರ್ಯಕರ್ತರು ಮೊಯ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರ ತೀರ್ಮನದಂತೆ ಮುಂದಿನ ನಡೆ: ಉದಯ ಕುಮಾರ ಶೆಟ್ಟಿ
ಟಿಕೆಟ್ ಈಗ ಕೈ ತಪ್ಪಿ ಹೋದ ಕುರಿತು ಬೇಸರವಿಲ್ಲ. ಎಪ್ರಿಲ್ 24ರ ತನಕವೂ ಅಭ್ಯರ್ಥಿಯನ್ನು ಬದಲಾಯಿಸುವ ಅವಕಾಶ ಇದೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾರೆಂಬ ಭರವಸೆ ಇದೆ ಎಂದು ಟಿಕೆಟ್ ಆಕಾಂಕ್ಷಿ  ಉದಯ ಕುಮಾರ ಶೆಟ್ಟಿ ಹೇಳಿದ್ದಾರೆ. ಕಾರ್ಯಕರ್ತರ ಜೊತೆ ಸಮಾಲೋಚಿಸಿ ಅವರ ಅಭಿಪ್ರಾಯದಂತೆ ಮುಂದಿನ ಹೆಜ್ಜೆಯ ಕುರಿತು ತೀರ್ಮಾನ ಮಾಡುತ್ತೇನೆ ಎಂದು ಉದಯ ಕುಮಾರ ಶೆಟ್ಟಿ ಹೇಳಿದ್ದಾರೆ.

ಪ್ರಾಮಾಣಿಕತೆಗೆ ಸಂದ ಜಯ: ಗೋಪಾಲ ಭಂಡಾರಿ
ಕಾರ್ಕಳ ಕ್ಷೇತ್ರದಿಂದ ಮತ್ತೊಮ್ಮೆ ಟಿಕೆಟ್ ನೀಡಿ ಸ್ಪರ್ಧಿಸಲು ಅವಕಶ ನೀಡಿರುವುದು ಸತ್ಯ ಹಾಗೂ ಪ್ರಾಮಾಣಿಕತೆಗೆ ಸಂದ ಜಯವಾಗಿದೆ ಎಂದು ಮಜಿ ಶಾಸಕ ಗೋಪಾಲ ಭಂಡಾರಿ ಪ್ರತಿಕ್ರಿಯಿಸಿದ್ದಾರೆ. ಯಾವುದೆ ಗೊಂದಲಕ್ಕೆ ಆಸ್ಪದವಿಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ಗೋಪಾಲ ಭಂಡಾರಿ ತಿಳಿಸಿದ್ದಾರೆ.

ಕಳೆದ ಬಾರಿ ಸಣ್ಣ ಅಂತರದಲ್ಲಿ ಸೋತಿದ್ದೆ. ಆದರೂ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕದಲ್ಲಿದ್ದೆ. ಈ ಬಾರಿ ಖಂಡಿತವಾಗಿಯೂ ಗೆಲ್ಲುವೆ ಎಂದು ಗೋಪಾಲ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಮರಕ್ಕೆ ಢಿಕ್ಕಿಯಾದ ಖಾಸಗಿ ಬಸ್: ಇಬ್ಬರು ಪ್ರಯಾಣಿಕರ ಸಾವು. ಹಲವರಿಗೆ ಗಾಯ:
http://bit.ly/2JQn7ZQ
►►ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2EMbkIx
►►ನಕ್ಸಲ್ ಪ್ರತಿಭಟನೆ. ಬಿಜೆಪಿ ಆರೋಪದ ವಿರುದ್ದ ಕಾನೂನು ಹೋರಾಟ: ನಟ ಚೇತನ್: http://bit.ly/2HnUd5e
►►ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ: http://bit.ly/2JN8VBc
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ: http://bit.ly/2GYwdC9

Related Tags: Gopal Bhandary, Muniyalu Uday Kumar Shetty, CongressTicket, Karkala Constituency, Moily Hatavo, Harsha Moily, Moily Tweet, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ