ನಕ್ಸಲ್ ಪ್ರತಿಭಟನೆ. ಬಿಜೆಪಿ ಆರೋಪದ ವಿರುದ್ದ ಕಾನೂನು ಹೋರಾಟ: ನಟ ಚೇತನ್

ಕರಾವಳಿ ಕರ್ನಾಟಕ ವರದಿ

ಕಲಬುರ್ಗಿ:
ನಾವು ಕೈಗೊಂಡ ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಬಿಜೆಪಿ ನಮ್ಮ ಜೊತೆ ಕೈಜೋಡಿಸಬೇಕಿತ್ತು. ಆದರೆ ಮಡಿಕೇರಿಯ ದಿಡ್ಡಳ್ಳಿ ಬುಡಕಟ್ಟು ಜನಾಂಗದವರ ಬಗ್ಗೆ ಹೋರಾಟ ಮಾಡಿದ್ದಕ್ಕಾಗಿ ಬಿಜೆಪಿ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಪ್ರಕಟಿಸಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಚಲನಚಿತ್ರ ನಟ ಚೇತನ್ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರು, ಕಾರ್ಮಿಕರು ಮತ್ತು ರೈತರ ಪರವಾಗಿ ಮಾತನಾಡುವವರು ಬಿಜೆಪಿ ಕಣ್ಣಲ್ಲಿ ಶತ್ರುಗಳು. ದಿಡ್ಡಳ್ಳಿಯಲ್ಲಿರುವ ಬುಡಕಟ್ಟು ಜನಾಂಗದವರು ನಕ್ಸಲೀಯರು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಬುಡಕಟ್ಟು ಜನರ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಿದ್ದಾರೆ ಎಂದರು.

ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳ ಮೂಲಕ ನಾನು ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವ ಪಕ್ಷವೂ ಒಳ್ಳೆಯದು, ಕೆಟ್ಟದ್ದು ಎಂದು ಹೇಳುವುದಿಲ್ಲ. ಸಾಮಾಜಿಕ ಕಳಕಳಿ ಇರುವ ಪಕ್ಷ ಮತ್ತು ಕೆಲಸ ಮಾಡಿದವರಿಗೆ ಮತ ಹಾಕಿ ಎಂದು ಕೇಳಿಕೊಳ್ಳುತ್ತೇನೆ ಎಂದು ನಟ ಚೇತನ್ ಹೇಳಿದರು.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಬಂಡವಾಳಶಾಹಿಗಳ, ಭೂಮಾಲೀಕರ ಪರ ಇವೆ. ದುಡ್ಡಿದ್ದವರಿಗೆ ಟಿಕೆಟ್ ಕೊಡುತ್ತಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿರುವ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಅವರು ಮನವಿ ಮಾಡಿದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ:
http://bit.ly/2JN8VBc
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ: http://bit.ly/2GYwdC9
►►ಫಾಸ್ಟ್‌ಫುಡ್ ಅಂಗಡಿ ಮಾಲೀಕನ ಮೇಲೆ ಬಿಸಿ ಎಣ್ಣೆ ಎರಚಿದ ರೌಡಿಶೀಟರ್: http://bit.ly/2H0loiU
►►ಕಠುವಾ ಅತ್ಯಾಚಾರ ಭಯಾನಕ ಕೃತ್ಯ: ವಿಶ್ವಸಂಸ್ಥೆ ಕಳವಳ: http://bit.ly/2H0MRoT
►►ಇಂದು ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2HEHIQs
►►ಐವರು ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಪ್ರತಿಭಾ ಕುಳಾಯಿ: http://bit.ly/2JKCUJG
►►ಕಠುವಾ ಅತ್ಯಾಚಾರ ಪ್ರಕರಣ: ತ್ವರಿತ ನ್ಯಾಯಾಲಯ ರಚಿಸಲು ಮೆಹಬೂಬಾ ಮನವಿ: http://bit.ly/2vdKfyj
►►ಮೊಬೈಲ್ ಜಾಹೀರಾತಿಗೆ ಮರುಳಾಗಿ ಮೋಸ ಹೋದ ಅಮಾಯಕ: ನಿಮಗೂ ಮೋಸವಾಗಬಹುದು. ಎಚ್ಚರ!: http://bit.ly/2IVCUpj

Related Tags: Ravishankar, Actor Chetan, Diddalli Protest, Tribals, BJP Chargesheet, Naxalite, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ