ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ

ಕರಾವಳಿ ಕರ್ನಾಟಕ ವರದಿ

ಮೈಸೂರು:
ಫಕೀರ ಮಹಮ್ಮದ್ ಕಟ್ಪಾಡಿ ಅವರ ಕುದುರೆಮೋತಿ ಎಂಬ ಬೀದಿನಾಟಕದಲ್ಲಿ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಪಾತ್ರ ಮಾಡಿದ್ದೆ. ನಾವೆಲ್ಲ ಸಮಾನವಾಗಿರಬೇಕು. ಆದರೆ... ಎನ್ನುವ ಅವರ ಜನಪ್ರಿಯ ಮಾತನ್ನು ಆಡುತ್ತಿದ್ದೆ. ಆಗ ಅಷ್ಟೊಂದು ಸ್ವಾತಂತ್ರ್ಯವಿತ್ತು. ಈಗ ಅದೇ ಪಾತ್ರ ಮಾಡಿದರೆ ನನ್ನ ಹೆಣ ಬೀಳುತ್ತದೆ ಎಂದು ಖ್ಯಾತ ಲೇಖಕ, ನವದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್‌.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರ ಏರ್ಪಡಿಸಿದ್ದ ‘ರಾಷ್ಟ್ರ ನಿರ್ಮಾಣ– ಅಂಬೇಡ್ಕರ್‌ ಪ್ರಸ್ತುತತೆ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಿಟಿಷರು ನಮ್ಮ ದೇಶಕ್ಕೆ ಬರದೆ ಇದ್ದರೆ ಬ್ರಾಹ್ಮಣರ ಮನೆಯಲ್ಲಿ ಸೆಗಣಿ ಎತ್ತುತ್ತಿದ್ದೆ ಎಂದು ಕುವೆಂಪು ಹೇಳಿದ ಹಾಗೆ, ಕ್ರೈಸ್ತ ಮಿಷನರಿಗಳು ಮಂಗಳೂರಲ್ಲಿದ್ದ ಪರಿಣಾಮ ನಾನು ಓದಲು ಸಾಧ್ಯವಾಯಿತು. ಅದೇ ಉಡುಪಿಯಲ್ಲಿದ್ದರೆ ವಿದ್ಯಾವಂತನಾಗುತ್ತಿರಲಿಲ್ಲ ಎಂದು ಬಿಳಿಮಲೆ ಹೇಳಿದರು.

ಉಡುಪಿಯಲ್ಲಿ 8 ಮಠಗಳಿವೆ. ಅಲ್ಲಿರುವ ಸ್ವಾಮಿಗಳನ್ನು ಕೇಳುವೆ. ಶಾಲೆ ಕಟ್ಟಿಸಿದ್ದೀರಾ? ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೊಳೆಗಳಿಗೆ ಸೇತುವೆ ನಿರ್ಮಿಸಿದ್ದೀರಾ? ಸಮಾಜ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ, ಸಮಾಜದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಭಗವದ್ಗೀತೆ ಹಿಡಿದುಕೊಂಡು ನಮ್ಮನ್ನು ಆಳುವುದು ಯಾಕೆ? ಈ ವಿಚಾರದಲ್ಲಿ ಉಡುಪಿ ಅಷ್ಟಮಠಗಳನ್ನು ಪ್ರಶ್ನಿಸಬೇಕಿದೆ ಎಂದರು.

ಧರ್ಮಾಧಿಕಾರಿಯನ್ನು ಯಾರು ಪ್ರಶ್ನಿಸುತ್ತಾರೋ ಅವರಿಗೆ ಸಮಾಜ ಋಣಿಯಾಗಿರುತ್ತದೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಸಮಾಜದಿಂದ ಎಲ್ಲವನ್ನೂ ಪಡೆದ ಉಡುಪಿಯ ಸ್ವಾಮೀಜಿಗಳು ಆಶೀರ್ವಾದ ಮಾತ್ರ ಮಾಡುತ್ತಾರೆಯೇ ಹೊರತು ಬೇರೇನು ಕೊಟ್ಟಿದ್ದಾರೆ ಎಂದವರು ಪ್ರಶ್ನಿಸಿದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ:
http://bit.ly/2GYwdC9
►►ಫಾಸ್ಟ್‌ಫುಡ್ ಅಂಗಡಿ ಮಾಲೀಕನ ಮೇಲೆ ಬಿಸಿ ಎಣ್ಣೆ ಎರಚಿದ ರೌಡಿಶೀಟರ್: http://bit.ly/2H0loiU
►►ಕಠುವಾ ಅತ್ಯಾಚಾರ ಭಯಾನಕ ಕೃತ್ಯ: ವಿಶ್ವಸಂಸ್ಥೆ ಕಳವಳ: http://bit.ly/2H0MRoT
►►ಇಂದು ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2HEHIQs
►►ಐವರು ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಪ್ರತಿಭಾ ಕುಳಾಯಿ: http://bit.ly/2JKCUJG
►►ಕಠುವಾ ಅತ್ಯಾಚಾರ ಪ್ರಕರಣ: ತ್ವರಿತ ನ್ಯಾಯಾಲಯ ರಚಿಸಲು ಮೆಹಬೂಬಾ ಮನವಿ: http://bit.ly/2vdKfyj
►►ಮೊಬೈಲ್ ಜಾಹೀರಾತಿಗೆ ಮರುಳಾಗಿ ಮೋಸ ಹೋದ ಅಮಾಯಕ: ನಿಮಗೂ ಮೋಸವಾಗಬಹುದು. ಎಚ್ಚರ!: http://bit.ly/2IVCUpj

Related Tags: Purushothama Bilimale, Udupi Mutt, Mysore, Ambedkar Jayanthi, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ