ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ

ಕರಾವಳಿ ಕರ್ನಾಟಕ ವರದಿ

ಕಾಸರಗೋಡು:
ಜಮ್ಮುವಿನ ಎಂಟರ ಹರಯದ ಬಾಲಕಿ ಆಸಿಫಾ ಅತ್ಯಾಚಾರ, ಕೊಲೆ ಕೃತ್ಯದ ಕುರಿತು ದೇಶವೇ ಕಣ್ಣೀರು ಸುರಿಸುತ್ತಿರುವ ಹೊತ್ತಲ್ಲಿ ಕೇರಳದ ಪತ್ರಕರ್ತರೋರ್ವರು ತನ್ನ ಮಗಳಿಗೆ 'ಅಸಿಫಾ' ಎಂದು ಹೆಸರಿಟ್ಟಿದ್ದಾರೆ.

ಈ ಸುದ್ದಿ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದು, ಪತ್ರಕರ್ತನ ಕುರಿತು ವ್ಯಾಪಕ ಅಭಿಮಾನ ವ್ಯಕ್ತವಾಗಿದೆ.

"ಹೆಸರಿಟ್ಟೆ; ಅದೇ, ಅದೇ ಹೆಸರು. ಆಸಿಫಾ ಎಸ್.ರಾಜ್. ನನ್ನ ಮಗಳವಳು" ಎಂದು ರಜಿತ್ ರಾಮ್ ತನ್ನ ಪುಟ್ಟ ಮಗಳ ಪೋಟೋದೊಂದಿಗೆ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.

ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 25,000 ಲೈಕ್ಸ್, 16,024 ದಷ್ಟು ಶೇರ್ ಆಗಿದೆ. ಫೆಬ್ರವರಿ ತಿಂಗಳಲ್ಲಿ ರಜಿತ್ ರಾಮ್ ಅವರ ಎರಡನೇ ಮಗಳು ಜನಿಸಿದ್ದು, ಮಗಳಿಗೆ ನಾಮಕರಣ ಮಾಡಲು ಹೆಸರು ಹುಡುಕುತ್ತಿದ್ದ ಸಂದರ್ಭ ಎಂಟು ವರ್ಷದ ಬಾಲಕಿಯ ಜೊತೆಗೆ ನಡೆದ ಈ ಬರ್ಬರ ಘಟನೆ ಬೆಳಕಿಗೆ ಬಂದಿತ್ತು. ಆ ಹೆಸರೇ ಸೂಕ್ತ ಮತ್ತು ಸಮಂಜಸ ಎನ್ನುವ ದೃಷ್ಟಿಯಿಂದ ತಾನು ಮಗಳಿಗೆ ಈ ಹೆಸರಿಟ್ಟೆ ಎಂದು ರಜಿತ್ ರಾಮ್ ಹೇಳಿದ್ದಾರೆ.

ಪೇಜ್ ಮೂಲಕ ಮಗಳಿಗೆ ಆಸಿಫಾ ಎಸ್.ರಾಜ್ ಎನ್ನುವ ಹೆಸರಿಟ್ಟಿರುವುದಾಗಿ ತಿಳಿಸಿರುವ ರಜಿತ್ ರಾಮ್ ಮಲಯಾಳಂ ಪೋಸ್ಟ್ ಈದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಅಮಾನುಷವಾಗಿ ಕೊಲೆಗೈಯಲ್ಪಟ್ಟ ಕಾಶ್ಮೀರಿ ಬಾಲಕಿಗೆ ನ್ಯಾಯ ದೊರಕಬೇಕು ಎಂಬ ಏಕದೃಷ್ಠಿಯಿಂದ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ರಜಿತ್ ರಾಮ್ ತಿಳಿಸಿದ್ದಾರೆ. ದೂರದ ಕಾಶ್ಮೀರಾದಲ್ಲಿಯೂ ರಜಿತ್ ರಾಮ್ ಪೋಸ್ಟ್ ಸುದ್ದಿ ಪ್ರಶಂಸೆ ಮತ್ತು ಚರ್ಚೆಗೂ ಕಾರಣವಾಗಿದೆ.

ಏಳು ವರ್ಷದ ಮಗಳ ತಂದೆಯಾಗಿ ಆ ಭೀಕರ ಕೃತ್ಯ ನಡೆದ ಬಳಿಕ ನಾನು ಹತಾಶನಾಗಿದ್ದೆ. ಇಂತಹ ಅನಾಗರಿಕ ಕ್ರೂರ ಕೃತ್ಯಗಳು ನಮ್ಮ ದೇಶದಲ್ಲಿ ಇಂದಿಗೂ ನಡೆಯುತ್ತಿರುವುದು ಖೇದಕರ. ಇದರಿಂದಾಗಿ ನನ್ನಂತೆ ಹೆಣ್ಣು ಮಕ್ಕಳ ತಂದೆಯಾದವರಿಗೆ ಗೊಂದಲ ಪ್ರಾರಂಭವಾಗಿದೆ.

ನನ್ನ ಏಳು ವರ್ಷದ ಮಗಳು ಅಮೇಯಳನ್ನು ನೋಡುವಾಗ ಆಸಿಫಾಳ ನೆನಪಾಗಿ ಹೃದಯ ಭಾರವಾಯಿತು. ಆಸಿಫಾ ನನ್ನ ಮಗಳು ಮತ್ತು ಯಾವತ್ತೂ ನನ್ನ ಮಗಳಾಗಿಯೇ ಇರುತ್ತಾಳೆ. ಇದೇ ಕಾರಣಕ್ಕಾಗಿ ಫೆಬ್ರವರಿ 4 ರಂದು ಜನಿಸಿದ ನನ್ನ ಎರಡನೆ ಮಗಳಿಗೆ ಪತ್ನಿ ಸಂದಯಾಳೊಂದಿಗೆ ಚರ್ಚಿಸಿ ಆಸಿಫಾಳ ಹೆಸರಿಟ್ಟಿದ್ದೇನೆ ಎಂದು ರಜಿತ್ ರಾಮ್ ತಿಳಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಫಾಸ್ಟ್‌ಫುಡ್ ಅಂಗಡಿ ಮಾಲೀಕನ ಮೇಲೆ ಬಿಸಿ ಎಣ್ಣೆ ಎರಚಿದ ರೌಡಿಶೀಟರ್:
http://bit.ly/2H0loiU
►►ಕಠುವಾ ಅತ್ಯಾಚಾರ ಭಯಾನಕ ಕೃತ್ಯ: ವಿಶ್ವಸಂಸ್ಥೆ ಕಳವಳ: http://bit.ly/2H0MRoT
►►ಇಂದು ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2HEHIQs
►►ಐವರು ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಪ್ರತಿಭಾ ಕುಳಾಯಿ: http://bit.ly/2JKCUJG
►►ಕಠುವಾ ಅತ್ಯಾಚಾರ ಪ್ರಕರಣ: ತ್ವರಿತ ನ್ಯಾಯಾಲಯ ರಚಿಸಲು ಮೆಹಬೂಬಾ ಮನವಿ: http://bit.ly/2vdKfyj
►►ಮೊಬೈಲ್ ಜಾಹೀರಾತಿಗೆ ಮರುಳಾಗಿ ಮೋಸ ಹೋದ ಅಮಾಯಕ: ನಿಮಗೂ ಮೋಸವಾಗಬಹುದು. ಎಚ್ಚರ!: http://bit.ly/2IVCUpj
►►ವಿರೋಧಿಗಳು ಘೋಷಣೆ ಕೂಗಿದರೆ ನಾನು ಇನ್ನಷ್ಟು ಪ್ರಬಲನಾಗುತ್ತೇನೆ: ಪ್ರಕಾಶ್ ರೈ: http://bit.ly/2ELiyMP

Related Tags: Asifa, Jammu, Rajith Ram, Journalist, Kerala, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ