ಫಾಸ್ಟ್‌ಫುಡ್ ಅಂಗಡಿ ಮಾಲೀಕನ ಮೇಲೆ ಬಿಸಿ ಎಣ್ಣೆ ಎರಚಿದ ರೌಡಿಶೀಟರ್

ಕರಾವಳಿ ಕರ್ನಾಟಕ ವರದಿ

ಉಳ್ಳಾಲ:
ಫಾಸ್ಟ್‌ಫುಡ್ ಅಂಗಡಿ ಮಾಲೀಕನಿಗೆ ರೌಡಿಶೀಟರ್ ಓರ್ವ ಬಿಸಿ ಎಣ್ಣೆ ಎರಚಿ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಜಂಕ್ಷನ್ ಬಳಿ ತಡರಾತ್ರಿ ನಡೆದಿದೆ.

ಉಳ್ಳಾಲ ನಿವಾಸಿ ಗಫೂರ್ (30) ಹಲ್ಲೆಗೊಳಗಾದ ಫಾಸ್ಟ್‌ಫುಡ್ ಅಂಗಡಿ ಮಾಲೀಕ. ಮೊಗವೀರ ಪಟ್ನದ ನಿವಾಸಿ, ರೌಡಿಶೀಟರ್ ರಮಿತ್ ಹಲ್ಲೆ ನಡೆಸಿದ ಆರೋಪಿ.

ವಾರದ ಹಿಂದೆ ಅಂಗಡಿಯಲ್ಲಿ ತಿಂದು ಹಣ ಬಾಕಿಯಿರಿಸಿದ್ದ ರಮಿತ್‌ನನ್ನು ಗಫೂರ್ ಎರಡು ದಿನಗಳ ಹಿಂದೆ ಹಣ ಕೇಳಿದ್ದರು. ಈ ವೇಳೆ ರಮಿತ್ ಹಣ ಕೊಡುವುದಿಲ್ಲ ಎಂದು ಬೆದರಿಸಿ ಜೀವಬೆದರಿಕೆಯನ್ನು ಒಡ್ಡಿ ತೆರಳಿದ್ದನು. ಇದರಿಂದ ಗಾಬರಿಗೊಂಡ ಗಫೂರ್ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಪೊಲೀಸರು ಆರೋಪಿಯನ್ನು ಹಿಡಿಯುವ ಪ್ರಯತ್ನ ಮಾಡಿರಲಿಲ್ಲ. ಶನಿವಾರ ಮತ್ತೊಮ್ಮೆ ಅಂಗಡಿಯತ್ತ ಬಂದ ರಮಿತ್ ಗಫೂರ್ ಅವರಿಗೆ ಏಕಾಏಕಿ ಹಲ್ಲೆ ನಡೆಸಿದ್ದು, ಬಳಿಕ ಕಬಾಬ್ ಮಾಡಲು ಕಾಯಿಸಿಟ್ಟಿದ್ದ ಬಿಸಿ ಎಣ್ಣೆಯನ್ನು ಗಫೂರ್ ಮೇಲೆ ಎರಚಿ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಆರೋಪಿ ಬಂಧನಕ್ಕೆ ಆಗ್ರಹಿಸಿ ಮತ್ತು ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಎದುರು ಜಮಾಯಿಸಿದರು. ಎಸಿಪಿ ರಾಮರಾವ್ ಬಂಧಿಸುವ ಭರವಸೆ ನೀಡಿದ ಬಳಿಕ ಸ್ಥಳದಿಂದ ತೆರಳಿದ್ದಾರೆ.

ಹಲ್ಲೆಯಲ್ಲಿ ಗಂಭೀರ ಗಾಯಗೊಂಡಿರುವ ಗಫೂರ್ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸರು ಆರೋಪಿ ಪತ್ತೆಗೆ ಬಲಿ ಬೀಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕಠುವಾ ಅತ್ಯಾಚಾರ ಭಯಾನಕ ಕೃತ್ಯ: ವಿಶ್ವಸಂಸ್ಥೆ ಕಳವಳ:
http://bit.ly/2H0MRoT
►►ಇಂದು ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: http://bit.ly/2HEHIQs
►►ಐವರು ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಪ್ರತಿಭಾ ಕುಳಾಯಿ: http://bit.ly/2JKCUJG
►►ಕಠುವಾ ಅತ್ಯಾಚಾರ ಪ್ರಕರಣ: ತ್ವರಿತ ನ್ಯಾಯಾಲಯ ರಚಿಸಲು ಮೆಹಬೂಬಾ ಮನವಿ: http://bit.ly/2vdKfyj
►►ಮೊಬೈಲ್ ಜಾಹೀರಾತಿಗೆ ಮರುಳಾಗಿ ಮೋಸ ಹೋದ ಅಮಾಯಕ: ನಿಮಗೂ ಮೋಸವಾಗಬಹುದು. ಎಚ್ಚರ!: http://bit.ly/2IVCUpj
►►ವಿರೋಧಿಗಳು ಘೋಷಣೆ ಕೂಗಿದರೆ ನಾನು ಇನ್ನಷ್ಟು ಪ್ರಬಲನಾಗುತ್ತೇನೆ: ಪ್ರಕಾಶ್ ರೈ: http://bit.ly/2ELiyMP

Related Tags: Gafur, Ullal, Fast Food, Ramith, Ullal Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ