ಐವರು ಬಿಜೆಪಿ ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಪ್ರತಿಭಾ ಕುಳಾಯಿ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಬಿಜೆಪಿ ತನ್ನ ಭಾವಚಿತ್ರ ಬಳಸಿ ಮಾನಹಾನಿ ಮಾಡಿದೆ ಎಂದು ಆರೋಪಿಸಿ ನಗರದ ಮಹಿಳಾ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಐವರ ವಿರುದ್ಧ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಐವರ ವಿರುದ್ದ ಪ್ರತಿಭಾ ಕುಳಾಯಿ ಮಂಗಳೂರಿನ ಜೆ.ಎಂ.ಎಫ್.ಸಿ ಎರಡನೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ನ್ಯಾಯಾಲಯವು ಏ. 19ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
 
ರಾಜ್ಯ ಬಿಜೆಪಿ ಪಕ್ಷವು ಕಾಂಗ್ರೆಸ್ ವಿರುದ್ದ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಪ್ರತಿಭಾ ಕುಳಾಯಿ ಅವರ ಹೆಸರು ಮತ್ತು ಭಾವಚಿತ್ರವನ್ನು ತಪ್ಪಾಗಿ ಬಳಸಿದ ಹಿನ್ನೆಲೆಯಲ್ಲಿ ಪ್ರತಿಭಾ ಕುಳಾಯಿ ಪ್ರಕರಣ ದಾಖಲಿಸಿದ್ದಾರೆ.

ತನ್ನ ಭಾವಚಿತ್ರ ಹಾಗೂ ಹೆಸರು ಬಳಸಿರುವುದರಿಂದ ನನಗೆ ಮಾನಸಿಕ ಹಿಂಸೆಯಾಗಿದೆ. ಚಾರ್ಜ್‌ಶೀಟ್‌ನಲ್ಲಿ ಭಾವಚಿತ್ರ ಹಾಗೂ ಹೆಸರು ಬಳಸಿ ನನ್ನ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.

ಬಿಬಿಎಂಪಿ ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಅವರ ಸೀರೆ ಎಳೆದಾಡಿದ್ದ ಘಟನೆಯ ವಿವರವನ್ನು ಬಿಜೆಪಿ ಬಿಡುಗಡೆಗೊಳಿಸಿದ್ದ ಚಾರ್ಜ್‌ಶೀಟ್‌ನಲ್ಲಿ ನೀಡಲಾಗಿತ್ತು.

ಆದರೆ, ಅದರಲ್ಲಿ ಮಂಜುಳಾ ನಾರಾಯಣ ಸ್ವಾಮಿ ಅವರ ಬದಲು ಪ್ರತಿಭಾ ಕುಳಾಯಿ ಅವರ ಚಿತ್ರ ಪ್ರಕಟಿಸಿ ಬಿಜೆಪಿ ಯಡವಟ್ಟು ಮಾಡಿಕೊಂಡಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕಠುವಾ ಅತ್ಯಾಚಾರ ಪ್ರಕರಣ: ತ್ವರಿತ ನ್ಯಾಯಾಲಯ ರಚಿಸಲು ಮೆಹಬೂಬಾ ಮನವಿ:
http://bit.ly/2vdKfyj
►►ಮೊಬೈಲ್ ಜಾಹೀರಾತಿಗೆ ಮರುಳಾಗಿ ಮೋಸ ಹೋದ ಅಮಾಯಕ: ನಿಮಗೂ ಮೋಸವಾಗಬಹುದು. ಎಚ್ಚರ!: http://bit.ly/2IVCUpj
►►ವಿರೋಧಿಗಳು ಘೋಷಣೆ ಕೂಗಿದರೆ ನಾನು ಇನ್ನಷ್ಟು ಪ್ರಬಲನಾಗುತ್ತೇನೆ: ಪ್ರಕಾಶ್ ರೈ: http://bit.ly/2ELiyMP
►►ನ್ಯಾಯಾಧೀಶರ ಎದುರೆ ಸರಕಾರಿ ಅಭಿಯೋಜಕರತ್ತ ಶೂ ಎಸೆದ ರೇಪ್ ಆರೋಪಿ: http://bit.ly/2GWTogc
►►ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ: ಕಥುವಾ, ಉನ್ನಾವ್ ಪ್ರಕರಣದ ಬಗ್ಗೆ ಮೌನ ಮುರಿದ ಮೋದಿ: http://bit.ly/2HAQTRZ
►►ಡಿವಿಲಿಯರ್ಸ್ ಅಬ್ಬರ: ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್: http://bit.ly/2IRX1o8
►►ಚನ್ನರಾಯಪಟ್ಟಣ ಬಸ್ ಅಪಘಾತ: ಕುಂದಾಪುರದ ಶಾಲಾ ಬಾಲಕ, ಬ್ರಹ್ಮಾವರದ ಯುವಕ ಸಾವು: http://bit.ly/2ISlLfV

Related Tags: BJP Leader, Criminal Case, Corporator Pratibha Kulai, Criminal Defamation Case, BJP''s Charge Sheet, BS Yeddyurappa, BJP MP Shobha Karandlaje, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ